
ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಗರಂ ಆಗಿದ್ದಾರೆ. ನಿಮಗೆ ತಾಕತ್ ಇದ್ರೆ ವಿಜಯೇಂದ್ರ ಅವರನ್ನು ಕೆಳಗಿಳಿಸಿ ನೋಡಿ ಎಂದು ಸವಾಲು ಹಾಕಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಮಾಜಿ ಸಚಿವ ರೇಣುಕಾಚಾರ್ಯ ಚಾಲೆಂಜ್ ಹಾಕಿದ್ದು, ಬಿ.ವೈ ವಿಜಯೇಂದ್ರ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದು ಕೆಂದ್ರದ ನಾಯಕರು. ವಿಜಯೇಂದ್ರ ರಾಜ್ಯಧ್ಯಕ್ಷ ಆದ ಮೇಲೆ ಬಿಜೆಪಿಗೆ ಹೊಸ ರೂಪ ಬಂದಿದೆ ಎಂದಿದ್ದಾರೆ.
ವಾಲ್ಮೀಕಿ ಹಗರಣ ಬಯಲಿಗೆ ಎಳೆದಿದ್ದು ವಿಜಯೇಂದ್ರ ಸಾರಥ್ಯದಲ್ಲಿ. ಮೂಡಾ ಬಗ್ಗೆ ಹೋರಾಟ ಮಾಡಿದ್ರು, ವಕ್ಫ್ ಬಗ್ಗೆ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಬಿಜೆಪಿ ಸಂಘಟನೆ ಆಗಿಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಬಿಜೆಪಿಯಿಂದ ಉಚ್ಚಾಟನೆ ಆಗಿ JDS ಗೆ ಹೋಗಿದ್ರಿ, ಅಲ್ಲಿ ಟಿಪು ಸುಲ್ತಾನ್ ಡ್ರೆಸ್ ಹಾಕಿ, ಖಡ್ಗ ಹಿಡಿದಿದ್ದು ಮರ್ತಿದಿರಾ…? ಎಂದು ಗುಡುಗಿದ್ದಾರೆ.
ಹಿಂದೂ ಹುಲಿ ಅಂತ ಇವರೇ ಲೇಬಲ್ ಹಾಕಿಕೊಂಡಿದ್ದಾರೆ ಅಂತ ಯತ್ನಾಳ್‌ಗೆ ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡಿದ್ದು, ಯಡಿಯೂರಪ್ಪ ಬಿಜೆಪಿ ಕಟ್ಟಿ, ಹೋರಾಟ ಮಾಡಿ ಪಾರ್ಟಿ ಕಟ್ಟದೆ ಇದ್ರೆ ನೀವು ಇವತ್ತು ಶಾಸಕರಾಗಿ ಇರ್ತಾ ಇರ್ಲಿಲ್ಲ.ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿಗೆ ಬಂದಿದ್ದು.ನೀವು ಒಬ್ಬರು ಹೇಳಿದ್ರೆ ರಾಜೀನಾಮೆ ಕೋಡಬೇಕಾ..? ನಿಮ್ಮನ್ನ ಸ್ಟಾರ್ ಮಾಡಿದ್ದೆ ಯಡಿಯೂರಪ್ಪ. ಅದನ್ನು ಮರೆತು ಬಿಟ್ರಾ.? ಎಂದು ಚುಚ್ಚಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತ ಈ ರೀತಿ ಮಾತ್ನಾಡ್ತಾರೆ. ಬಿಜೆಪಿ ಗೆದ್ದರೆ ವಿಜಯೇಂದ್ರಗೆ ಹೆಸರು ಬರುತ್ತೆ ಅಂತ ಹೇಳಿ ಕಾಂಗ್ರೆಸ್ ಜೊತೆಗೆ ಶಾಮೀಲ್ ಆಗಿ ಈ ರೀತಿ ಮಾತ್ನಾಡ್ತಾರೆ. ಯಾವುದೇ ಪಕ್ಷೆ ನಿಷ್ಠೆ ಇಲ್ಲದವರು ನೀವು. ನೀವು ಐದಾರೂ ಜನ ಸೇರಿ ಸಭೆ ಮಾಡಿದ್ರಿ. ನಾವು ಉಪ ಚುನಾವಣೆ ಮುಗಿದ ಬಳಿಕ ಮಾಜಿ, ಹಾಲಿ, ಶಾಸಕರು ಸೇರಿ ಸಭೆ ಮಾಡ್ತಿವಿ ಎಂದಿದ್ದಾರೆ. ಜಿಲ್ಲಾ ಮಟ್ಟದ ಎಲ್ಲಾ ಲಿಡರ್ಸ್ ಸಭೆ ಮಾಡ್ತಿವಿ, ಕೆಂದ್ರ ನಾಯಕರನ್ನು ಭೇಟಿ ಮಾಡ್ತಿವಿ. ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತ್ನಾಡಿದ್ರೆ, ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಿವಿ ಎಂದಿದ್ದಾರೆ.