ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ತಮ್ಮ ಟ್ವಿಟರ್ ಖಾತೆ ಮೂಲಕ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ “ಲಿಂಕ್ ಕೆನಾಲ್” ಯೋಜನೆ ಅನುಷ್ಠಾನ ವಿಚಾರವಾಗಿ ಮನವಿ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಠ್ ಮಾಡಿರುವ ಅವರು, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ. ಅಶ್ವಥ್ ನಾರಾಯಣ್ ಅವರಿಗೆ ನನ್ನ ವಿನಮ್ರ ಮನವಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿ ಅವರು ಮಾಗಡಿ ತಾಲೂಕಿಗೆ ನೀರು ಹರಿಸುವ “ಲಿಂಕ್ ಕೆನಾಲ್” ಯೋಜನೆ ಬಗ್ಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.
ಮಾಧುಸ್ವಾಮಿ ಅವರ ಅಭಿಪ್ರಾಯದಿಂದ ಮಾಗಡಿ ತಾಲೂಕಿಗೆ ಸಿಗಬೇಕಾದ ಸಂಪೂರ್ಣ ನ್ಯಾಯ ದೊರೆಯುವುದು ಅನುಮಾನವಾಗಿದೆ. ಆದುದರಿಂದ ತಾವು ಈ ಹಿಂದೆ ಮಂಜೂರಾಗಿದ್ದ “ಶ್ರೀ ರಂಗ ಏತ ನೀರಾವರಿ” ಯೋಜನೆಗೆ ಮುಂದುವರಿದು ನಿಮ್ಮ ಸರ್ಕಾರದ ವತಿಯಿಂದ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ.
ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಡಿಕೆ ಸರೇಶ್ ಅವರ ಪ್ರಯತ್ನದಿಂದ ಮಂಜೂರು ಮಾಡಿಸಿದ್ದ “ಲಿಂಕ್ ಕೆನಾಲ್” ಯೋಜನೆಯನ್ನು ಇಂದಿನ ಬಿಜೆಪಿ ಸರ್ಕಾರ ವಜಾ ಮಾಡಿರುವುದರಿಂದ ತಾವು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಿ, ಈ “ಲಿಂಕ್ ಕೆನಾಲ್” ಯೋಜನೆಗೆ ಪುನಃ ಮರು ಮುಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಅನುಮತಿ ಕೊಡಬೇಕೆಂದು ಈ ಮೂಲಕ ಕೋರುತ್ತೇನೆ.
ಮಾಗಡಿ ತಾಲೂಕಿನ ಜನತೆ “ಲಿಂಕ್ ಕೆನಾಲ್” ಯೋಜನೆ ಅನುಷ್ಠಾನ ಆಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದರೆ. ಮಾಗಡಿ ಕ್ಷೇತ್ರದ ಶಾಸಕರು ಪತ್ರಿಕಾಗೋಷ್ಟಿಯಲ್ಲಿ ಲಿಂಕ್ ಕೆನಾಲ್ ಯೋಜನೆಯು #DPR ನಲ್ಲಿ ಸೇರಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಆಗಿದ್ದ ಹಳೆಯ #DPRಯೇ ಬೇರೆ , ತಾವು ಶಾಸಕರ ಹೇಳಿಕೆಗೆ ಬದ್ಥರಾಗದೆ ಹೊಸದಾಗಿ ಮಂಜೂರಾಗಿರುವ ಲಿಂಕ್ ಕೆನಾಲ್ ಯೋಜನೆಯನ್ನು ಶ್ರಮವಹಿಸಿ ಅನುಷ್ಠಾನ ಮಾಡಲು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ಧಾರೆ.