ಶಿವಮೊಗ್ಗ : ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದ ಇಡಿ ದಾಳಿಯನ್ನೂ ಬಿಜೆಪಿ ರಾಜಕೀಯ ಪ್ರೇರಿತವಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಥಹಳ್ಳಿ ಯಲ್ಲಿ ನಡೆದ ಘಟನೆ ಕೆಲವು ಮಾಧ್ಯಮಗಳಲ್ಲಿ ಸ್ವಯಂ ಘೋಷಿತ ಹೇಳಿಕೆ ಆಗಿದೆ. ತೀರ್ಥಹಳ್ಳಿಗೆ ನಿನ್ನೆ ಇಡಿ ಬಂದಿದ್ದರು. ಕಚೇರಿಗೆ ಬಂದು ಕರೆಮಾಡಿದ್ದರು. 2015 ರಲ್ಲಿ 10 ಲಕ್ಷ ರೂ. ಹಣವನ್ನ ಕಟ್ಟಡದ ಅಡ್ವಾನ್ಸ್ ನೀಡಲಾಗಿದೆ. ಇದನ್ನ ರಾಜಕೀಯವಾಗಿ ಇಡಿ ದಾಳಿ ಎಂದು ಬಣ್ಣಿಸಲಸಗುತ್ತಿದೆ ಎಂದರು.
ಕುಕ್ಕರ್ ಹಿಡಿದುದ್ದನ್ನ ಕೆಲ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಬಿಜೆಪಿ ಸ್ಥಳೀಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ. ನನ್ಮ ಕಟ್ಟಡದ ಬಾಡಿಗೆ ವಿಚಾರದಲ್ಲಿ ಅಣ್ಣನ ಹೆಸರಿನಲ್ಲಿ ಅಗ್ರಿಮೆಂಟ್ ಆಗಿದೆ. ಚುನಾವಣೆ ಇರುವುದರಿಂದ ಬಿಜೆಪಿ ಭಯಹುಟ್ಟಿಸಲು ನೋಡ್ತಾ ಇದೆ. ಆದರೆ ಇದು ಭಯ ಬಿಜೆಪಿಗೆ ಇರುತ್ತದೆ ನನಗೆ ಅಲ್ಲ. ನಂದಿತ ಪ್ರಕರಣದಲ್ಲಿ ಆಗಿರುವ ನಾಟಕವನ್ನ ಬಿಜೆಪಿ ಈಗ ಕುಕ್ಕರ್ ಹಿಡಿದು ಬಿಂಬಿಸಲು ಹೊರಟಿದೆ ಎಂದರು.
ಪಿಎಸ್ಐ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ ನಂಬರ್1 ಎಂದು ವಿವರಿಸಿದರು. ಅಡಿಕೆಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಪರ್ಯಾಯ ಬೆಳೆ ಬೆಳೆಯಲು ಅಧಿವೇಶನದಲ್ಲಿ ತಿಳಿಸಿದ್ದಾರೆ. ಈದೇಶದಲ್ಲಿ ಮೊದಲನೇ ಉಗ್ರ ಯಾರು ಎಂದರೆ ನಾಥುರಾಮ್ ಗೋಡ್ಸೆ. ಆತ ಕೊಂದಿರುವುದು ಸತ್ಯವನ್ನ, ಅಹಸೆಯನ್ನ, ಇವೆಲ್ಲದಕ್ಕೂ ಹೋರಾಟ ಮಾಡಲಾಗುವುದು.
ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್ , ಎನ್ ರಮೇಶ್, ಸಂತೇಕಡೂರ ವಿಜಯ್(ಧಣಿ), ಪಾಲಿಕೆ ಸದಸ್ಯ ರಮೇಶ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.