
ಮಂಡ್ಯ : ಗೌರವಯುತವಾಗಿ ಅಭಿವೃದ್ಧಿ ಕೆಲಸ ಮಾಡ್ಬೇಕು ಎಂದು ಸಚಿವ ಚಲುವರಾಯಸ್ವಾಮಿಗೆ ಸಿ.ಎಸ್ ಪುಟ್ಟರಾಜು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಸಿ.ಎಸ್ ಪುಟ್ಟರಾಜು, ಇಂತ ಜಿಲ್ಲಾ ಮಂತ್ರಿಯನ್ನ ನಾನು ಬಹಳ ನೋಡಿದ್ದೇನೆ. ಬೇರೆಯವರ ಕಡೆ ತೋರಿಸುವಾಗ ಬೇರೆ ಬೆರಳು ನನ್ನನ್ನು ನೋಡುತ್ತೆ ಅನ್ನೋ ಅರಿವಿರಲಿ ಎಂದಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನಿಖಿಲ್ ಚುನಾವಣೆಯಲ್ಲಿ ಇವ್ರೇನು ಮಾಡಿದ್ರು. ನಮ್ಮಿಂದಲೇ ನಿಖಿಲ್ ಸೋತ್ತಿದ್ದಾನೆ ಅನ್ನೋ ತರ ಆಲೋಚನೆ ಮಾಡ್ತಿದ್ದಾರೆ. ಅಂಬರೀಶ್ ಅವ್ರ ಅಭಿಮಾನದಿಂದ ಜನ ಅಂದು ಮತ ನೀಡಿದ್ರು. ಈ ಆಟಗಳನ್ನ ಆಡಿದ್ರೆ ನಮಗೂ ಮಾತನಾಡೋಕೆ ಬರತ್ತೆ. ಗೌರವಯುತವಾಗಿ ಅಭಿವೃದ್ಧಿ ಕೆಲಸ ಮಾಡಲಿ. ಜಿಲ್ಲೆಯಲ್ಲಿರುವ ಗುಂಡಿಗಳನ್ನ ಮುಚ್ಚಲಿ ಎಂದಿದ್ದಾರೆ.
ನಾಗಮಂಗಲದಲ್ಲಿ ಜಸ್ಟ್ ಪಾಸ್ ಆಗಿ ಬಂದಿದ್ದೀರಿ ಬೇರೆಯವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ದ ಪುಟ್ಟರಾಜು ಕಿಡಿಕಾರಿದ್ದು, ಅನ್ನದಾನಿ, ಪುಟ್ಟರಾಜು ಮಾತಿಗೆ ಉತ್ತರ ಕೊಡಬೇಕೆನ್ರಿ ಅಂತಾರೆ. ಜಸ್ಟ್ ಪಾಸಾಗಿ ಬಂದಿದ್ದೀರಿ, ಬೇರೆಯವರ ಬಗ್ಗೆ ಲಘುವಾಗಿ ಮಾತನಾಡಬೇಡಿ. ಇದೆಲ್ಲಾ ತುಂಬಾ ದಿನ ನಡೆಯಲ್ಲ. ರಾಜಕಾರಣದಲ್ಲಿ ನಾನು ಅಧಿಕಾರ ಅನುಭವಿಸಿದ್ದೇನೆ. ಗೌರವಯುತವಾಗಿ ಮಾತನಾಡೋದನ್ನ ಕಲಿಬೇಕು ಎಂದಿದ್ದಾರೆ.

ಸಚಿವರು ಇದನ್ನ ಕೊನೆ ಮಾಡ್ಲಿಲ್ಲ ಅಂದ್ರೆ ನಾವು ಮಾತನಾಡಬೇಕಾಗುತ್ತೆ. ನಾವು ಇವರ ರೀತಿ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಜೊತೆ ಇರಬೇಕಾ..? ಅಂತ ಗೊಂದಲದಲ್ಲಿ ಇಲ್ಲಾ. ನಾವು ಎಲ್ಲೆ ಇದ್ರು ಕಡೆಗೆ ದೇವೇಗೌಡರ ಒಟ್ಟಿಗೆ ಬರ್ತಿವೆ. ಇವರ ರೀತಿ ಹೋದ ಹೋದ ಕಡೆ ಇರೋದಿಲ್ಲ. ನಮ್ಮ ಮನೆ ಭಿನ್ನಾಭಿಪ್ರಾಯ ಇವ್ರಿಗ್ಯಾಕೆ..? ಮೊದಲು ಇವ್ರ ಮನೆ ಭಿನ್ನಾಭಿಪ್ರಾಯ ಸರಿ ಮಾಡಿಕೊಳ್ಳಲು ಹೇಳಿ. ಜಸ್ಟ್ ಪಾಸ್ ಆಗಿರೋ ಇವ್ರು ಮತ್ತೆ ಹೇಗ್ ಪಾಸಾಗೋದು ಅಂತ ನೋಡಲಿ. ಮುಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎಷ್ಟು ಮೆರಿಟ್‌ನಲ್ಲಿ ಗೆಲ್ತಾರೆ ನೋಡ್ತಿರಿ ಎಂದು ಭವಿಷ್ಯ ನುಡಿದಿದ್ದಾರೆ.