• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, June 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮತಯಾಚನೆ

Any Mind by Any Mind
November 6, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಚನ್ನಪಟ್ಟಣ:ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿರವರ ಪರವಾಗಿ ಕ್ಷೇತ್ರದ ಮಾರೇಗೌಡನದೊಡ್ಡಿ (ಎಮ್.ಜಿ ದೊಡ್ಡಿ), ನೆಲಮಾಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚಿಸಿದರು.

ADVERTISEMENT

ಚನ್ನಪಟ್ಟಣ ಕ್ಷೇತ್ರದ ಮಾರೇಗೌಡನದೊಡ್ಡಿ (ಎಮ್.ಜಿ ದೊಡ್ಡಿ), ನೆಲಮಾಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು, ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಸಿ.ಪಿ ಯೋಗೇಶ್ವರ್ ರವರು ಚನ್ನಪಟ್ಟಣ ಜನರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಪಕ್ಷಗಳಿಗೆ ಅವರು ಜಂಪ್ ಮಾಡ್ಕೊಂಡು ಸಾಗುತ್ತಿದ್ದಾರೆ. ಅವರಿಗೆ ಚನ್ನಪಟ್ಟಣ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಸಿ.ಪಿ ಯೋಗೇಶ್ವರ್ ರವರಿಗೆ ನಾವು ಜೆಡಿಎಸ್, ಬಿಜೆಪಿ ಎರಡು ಪಕ್ಷಗಳಿಂದ ಟಿಕೆಟ್ ಕೊಡಲು ಸಿದ್ದರಿದ್ದೇವು. ಆದರೇ ಅವರು ಕಾಂಗ್ರೆಸ್ ಗೆ ಹೋಗುವ ನಿರ್ಧಾರವನ್ನ ಮೊದಲೇ ಮಾಡಿಕೊಂಡಿದ್ದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು ಎಂದು ಚನ್ನಪಟ್ಟಣ ಕ್ಷೇತ್ರದ ಜನ ಹೇಳುತ್ತಿದ್ದಾರೆ. ಕ್ಷೇತ್ರದ ಜನ ಅವರಿಗೆ ಮನ್ನಣೆ ನೀಡಬಾರದು.ಚನ್ನಪಟ್ಟಣ ಕ್ಷೇತ್ರದ ಜನರು ಪುಣ್ಯವಂತರು ಅನ್ಸುತ್ತೆ ನೀವು ಗೆಲ್ಲಿಸಿ ಕಳುಹಿಸಿದ ಹೆಚ್.ಡಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾರೆ. ಈಗ ಕೇಂದ್ರ ಸಚಿವರಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಜೊತೆಗೆ ರಾಜ್ಯದ ಒಳಿತಿಗಾಗಿ ಅವರು ದುಡಿಯುತ್ತಿದ್ದಾರೆ. ಈ ಉಪಚುನಾವಣೆಯಲ್ಲಿ ಯೋಗೇಶ್ವರ್ ಕೈಕೊಟ್ಟು ಕಾಂಗ್ರೆಸ್ ಗೆ ಹೋಗಿರೋ ಕಾರಣದಿಂದಾಗಿ ನಿಖಿಲ್ ಕುಮಾರಸ್ವಾಮಿರವರಿಗೆ ಎನ್ಡಿಎ ಟಿಕೆಟ್ ನೀಡಲಾಗಿದೆ.

ನಿಖಿಲ್ ಕುಮಾರಸ್ವಾಮಿರವರು ಕೂಡ ತಂದೆಯವರಂತೆ ಜನರ ಒಳಿತಿನ ಬಗ್ಗೆ ಚಿಂತಿಸುವ ಯುವಕರಾಗಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಕ್ಷೇತ್ರದ ಜನತೆ ನಿಖಿಲ್ ಕೈ ಬಿಡಬಾರದು. ನಿಖಿಲ್ ಪರವಾಗಿ ಮತ ಚಲಾಯಿಸುವ ಮೂಲಕ ಭರ್ಜರಿ ಬಹುಮತದ ಗೆಲುವು ನೀಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಜೆಡಿಎಸ್ ರಾಜ್ಯ ವಕ್ತಾರ ಸಿಎಂ ನಾಗರಾಜ, ಚನ್ನಪಟ್ಟಣ ನಗರಸಭೆಯ ಸದಸ್ಯ ಮಂಜುನಾಥ ಸೇರಿದಂತೆ ಅನೇಕರಿದ್ದರು. ಈ ವೇಳೆ ವಿವಿಧ ಗ್ರಾಮಗಳ ಅನೇಕ ಜನರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಳಿಕ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಮಾಜಿ ಪ್ರಧಾನ ಮಂತ್ರಿಗಳು, ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿರುವ ಹೆಚ್.ಡಿ ದೇವೇಗೌಡರವರ ನೇತೃತ್ವದಲ್ಲಿ ಚನ್ನಪಟ್ಟಣ ಕ್ಷೇತ್ರದ ಕೋಡಂಬಹಳ್ಳಿಯಲ್ಲಿ ನಡೆದ ಮತಯಾಚನೆ, ಚನ್ನಪಟ್ಟಣ ನಗರದ ಎನ್ಡಿಎ ಕಛೇರಿಯಲ್ಲಿ ಕೇಂದ್ರ ಸಚಿವರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರರವರು ಸೇರಿದಂತೆ ಎನ್ಡಿಎ ನಾಯಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಬಿ.ವೈ ವಿಜಯೇಂದ್ರರವರ ಜನ್ಮ ದಿನದ ಅಂಗವಾಗಿ ಎನ್ಡಿಎ ಕಛೇರಿಯಲ್ಲಿ ಕೇಕ್ ಕತ್ತರಿಸಿ ಶುಭ ಕೋರಿದರು.

Tags: by-election of Channapatna assembly constituencyCongress PartyFormer Minister Bandappa KhashempurHD Deve GowdaNDA candidate Nikhil KumaraswamyOpposition BJP leader R Ashokಜೆಡಿಎಸ್ಬಿಜೆಪಿ
Previous Post

ಬಹು ನಿರೀಕ್ಷಿತ “ಫಾರೆಸ್ಟ್”ಚಿತ್ರ ಸದ್ಯದಲ್ಲೇ ತೆರೆಗೆ

Next Post

ಬಿಗ್‌ಬಾಸ್‌ನಲ್ಲಿ ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ..?

Related Posts

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್
Top Story

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್

by ಪ್ರತಿಧ್ವನಿ
June 3, 2026
0

ಬೆಂಗಳೂರು, ಜೂ.03: “ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ” ಎಂದು ಸಿಎಂ ಡಿ.ಕೆ....

Read moreDetails
ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

ಸಿಎಂ ಪಟ್ಟಕ್ಕೇರಿದ ಡಿಕೆಶಿ; ಭಗವದ್ಗೀತೆಯ ಶ್ಲೋಕದೊಂದಿಗೆ ಮೊದಲ ಸಂದೇಶ, ಅದರ ಅರ್ಥವೇನು ?

June 3, 2026
ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

ಕಾಂಗ್ರೆಸ್‌ನಿಂದ ಎಂಎಲ್‌ಸಿ ಅಭ್ಯರ್ಥಿಗಳ ಘೋಷಣೆ

June 3, 2026
ಪ್ರಮಾಣ ವಚನದಲ್ಲಿ ಗಮನ ಸೆಳೆದ ಭಾವಚಿತ್ರಗಳಿವು : ಇಂದು ನೂತನ ಸಿಎಂ ಕಂಗೊಳಿಸಿದ್ಹೇಗೆ..?

ಪ್ರಮಾಣ ವಚನದಲ್ಲಿ ಗಮನ ಸೆಳೆದ ಭಾವಚಿತ್ರಗಳಿವು : ಇಂದು ನೂತನ ಸಿಎಂ ಕಂಗೊಳಿಸಿದ್ಹೇಗೆ..?

June 3, 2026
ನೂತನ ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ, ಯಡಿಯೂರಪ್ಪ, ವಿಜಯೇಂದ್ರ ಶುಭಹಾರೈಕೆ..

ನೂತನ ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ, ಯಡಿಯೂರಪ್ಪ, ವಿಜಯೇಂದ್ರ ಶುಭಹಾರೈಕೆ..

June 3, 2026
Next Post

ಬಿಗ್‌ಬಾಸ್‌ನಲ್ಲಿ ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada