
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ನಡೆಯಲಾಗದ ಪರಿಸ್ಥಿತಿಯಲ್ಲಿರುವ ದೃಶ್ಯವೊಂದು ನಿನ್ನೆ (ಆ.05) ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಡಿಯೋ ನೋಡಿದ ಕ್ರಿಕೆಟ್ ದಿಗ್ಗಜ, ‘ಮಾಸ್ಟರ್ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್, ತಮ್ಮ ಸ್ನೇಹಿತನ ಪರಿಸ್ಥಿತಿ ಕಂಡು ದುಃಖಿತರಾಗಿದ್ದಾರೆ.
ತಕ್ಷಣವೇ ಅವರ ನೆರವಿಗೆ ಮುಂದಾಗಿರುವ ಸಚಿನ್, ಕಂಬ್ಲಿ ಆರೋಗ್ಯ ಸ್ಥಿತಿ ಹೇಗಿದೆ ಎಂದು ವಿಚಾರಿಸಿದ್ದಾರೆ.52 ವರ್ಷ ವಯಸ್ಸಿನ ವಿನೋದ್ ಕಾಂಬ್ಳಿ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಎಡಗೈ ಬ್ಯಾಟರ್ ಆಗಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು.ಕ್ರಿಕೆಟ್ ವೃತ್ತಿಯಲ್ಲಿ ಉತ್ತಮ ಹೆಸರು ಸಂಪಾದಿಸಿರುವ ವಿನೋದ್ ಅವರು, 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ, ಕ್ರೀಡಾ ಲೋಕಕ್ಕೆ ಗುಡ್ಬೈ ಹೇಳಿದ್ದರು.ಆದ್ರೆ, ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು, ಸರಿಯಾಗಿ ನಡೆಯಲಾರದ ಸ್ಥಿತಿಯಲ್ಲಿರುವುದು ವೈರಲ್ ವಿಡಿಯೋಗಳ ಮೂಲಕ ಸ್ಪಷ್ಟವಾಗಿದೆ.
Vinod Kambli urgently needs assistance. I sincerely hope someone from Indian cricket steps forward to help him. It's heartbreaking to see him in this condition.pic.twitter.com/hWkew6Lxsm
— Out Of Context Cricket (@GemsOfCricket) August 6, 2024
ಅನಾರೋಗ್ಯದಿಂದ ಒದಾಡುತ್ತಿರುವ ಕಾಂಬ್ಳಿ, ಜನಸಂದಣಿಯಿರುವ ಸ್ಥಳದಲ್ಲಿ ನಡೆದಾಡಲು ಪರದಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕ್ಷಣಮಾತ್ರದಲ್ಲಿ ವೈರಲ್ ಆದ ವಿಡಿಯೋ ಕಂಡು ದಂಗಾದ ನೆಟ್ಟಿಗರು,ಸಚಿನ್ರನ್ನು ಟ್ಯಾಗ್ ಮಾಡಿ, ಸಹಾಯಹಸ್ತ ನೀಡುವಂತೆ ಮನವಿ ಮಾಡಿದರು.ಕೂಡಲೇ ಮಾಹಿತಿ ಕಲೆಹಾಕಿದ ಸಚಿನ್, ಇದೀಗ ವಿನೋದ್ ಸಹಾಯಕ್ಕೆ ಮುಂದಾಗಿದ್ದಾರೆ. ತಮ್ಮ ಬಾಲ್ಯ ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿದ ಸಚಿನ್ಗೆ ಇದೀಗ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳು ಹರಿದುಬರುತ್ತಿವೆ.











