ಹಿಮಾಚಲ ಪ್ರದೇಶದ (Himahal pradesh) ಶಿಮ್ಲಾದ (Shimla ಸಂಕಟ್ ಮೋಚನ್ ದೇವಸ್ಥಾನದ ಬಳಿ ಇರುವ ಕಾಡಿನಲ್ಲಿ ಬೆಂಕಿ ಹೊತ್ತಿ ಕಾಣಿಸಿಕೊಂಡಿದ್ದು, ನಿರಂತರ ಕಾರ್ಯಾಚರಣೆ ನಡುವೆಯೂ ನಂದಿಸಲು ಹರಸಾಹಸ ಮಾಡಲಾಗ್ತಿದೆ.

ಕಳೆದ ಕೆಲ ದಿನಗಳಿಂದ ಶಿಮ್ಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ಕಾಡಿಗೆ ಬೆಂಕಿ ಬಿದ್ದಿರೋದ್ರಿಂದ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತು ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಿಗೆ ಅಪಾರ ಹಾನಿಯನ್ನುಂಟಾಗಿತ್ತು.

ಹಲವು ಬಾರಿ ಬೆಂಕಿ ನಂದಿಸುವ ಪ್ರಯತ್ನಗಳಾಗಿದ್ರೂ, ಇದೀಗ ಮತ್ತೆ ಕಾಲಚ್ಚು ಹೊತ್ತಿಕೊಂಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.