ಬೆಂಗಳೂರು: ಬೆಂಗಳೂರು(BENGALURU) ನಗರದಲ್ಲಿ ವಾಸವಿದ್ದ ವಿದೇಶಿ ಪ್ರಜೆ ಮನೆಯಲ್ಲಿ ಬರೋಬ್ಬರಿ 5.15 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.

ಕಳೆದ ವಾರ ಸಿಸಿಬಿ ಆಂಟಿ ನಾರ್ಕೋಟಿಕ್ ವಿಂಗ್ ಮಾರತ್ ಹಳ್ಳಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನೈಜೀರಿಯಾ ಮೂಲದ ಎರ್ನೆಸ್ಟ್ ಉಘ ಎಂಬಾತ ಮನೆಯಲ್ಲೇ ಇಟ್ಟಿದ್ದ 5.15 ಕೋಟಿ ಮೌಲ್ಯದ ಎರಡೂವರೆ ಕೆಜಿ MDMA, 300 ಎಕ್ಸ್‌ಟೆಸಿ ಮಾತ್ರೆಗಳು ಪತ್ತೆಯಾಗಿದೆ.

ಸದ್ಯ ಡ್ರಗ್ಸ್ ಸೀಜ್ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಆರೋಪಿ ಉಘ ಈ ಹಿಂದೆಯೂ ಕಾಡುಗೋಡಿ, ಹೆಣ್ಣೂರು ಪೊಲೀಸರಿಂದ ಡ್ರಗ್ ಪೆಡ್ಲಿಂಗ್ ಕೇಸ್‌ನಲ್ಲಿ ಬಂಧಿತನಾಗಿ ಹೊರಗಡೆ ಬಂದಿದ್ದ. ಆದರೆ ಜೈಲಿನಿಂದ ಬಿಡುಗಡೆಯಾಗಿ ಬಂದು ಮತ್ತದೇ ಡ್ರಗ್ಸ್ ಪೆಡ್ಲಿಂಗ್ ಮಾಡಲು ಶುರು ಮಾಡಿದ್ದ. ಇದಕ್ಕಾಗಿ ಮನೆಯಲ್ಲಿ ಡ್ರಗ್ಸ್ ಸಂಗ್ರಹ ಮಾಡಿದ್ದ. ಆದರೆ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ಮಾಲ್ ಸಮೇತ ಸಿಕ್ಕಿಬಿದ್ದಿದ್ದಾನೆ.













