ಪ್ರಾಣಿ ಪ್ರಿಯರಿಗೆ ಶಾಕಿಂಗ್ ಅದೇಶವನ್ನು ನೀಡಲಾಗಿದೆ. ಭಾರತದಲ್ಲಿ ಇನ್ನು ಮುಂದೆ ಕೆಲವು ವಿದೇಶಿ ತಳಿಗಳ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ಅವುಗಳ ಸಂತಾನ ಶಕ್ತಿ ಹರಣ ಮಾಡುವಂತೆಯೂ ಇದೇ ವೇಳೆ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರ ಕೆಲವರಿಗೆ ಬೇಸರ ತರಿಸಿದ್ದಂತೂ ನಿಜ. ಆದರೆ, ಈ ತಳಿಗಳನ್ನು ನಿಷೇಧ ಮಾಡಬೇಕು ಎನ್ನುವುದು ಬಹುಕಾಲದ ಬೇಡಿಕೆಯಾಗಿತ್ತು.
![](https://pratidhvani.com/wp-content/uploads/2024/03/brindle-white-bull-terrier-dog-1024x751.webp)
ಯಾವ್ಯಾವ ತಳಿಗೆ ಬ್ಯಾನ್.. ?
ಪಿಟ್ಬುಲ್, ಟೆರಿಯರ್, ಅಮೆರಿಕನ್ ಬುಲ್ಡಾಗ್ , ರಾಟ್ವೀಲರ್ ಮತ್ತು ಮಾಸ್ಟಿಫ್ಸ್ ಸೇರಿದಂತೆ 23 ತಳಿಗಳನ್ನು ನಿಷೇಧ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅದಕ್ಕೆ ಮುಖ್ಯ ಕಾರಣ ಈ ನಾಯಿಗಳು ಕ್ರೂರ ಸ್ವಭಾವ ಹೊಂದಿದೆ ಎಂಬ ಕಾರಣಕ್ಕೆ. ಮಾರ್ಚ್ 12 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಈಗಾಗಲೇ ಸಾಕು ಪ್ರಾಣಿಗಳಾಗಿ ಇರಿಸಲಾಗಿರುವ ಈ ತಳಿಯ ನಾಯಿಗಳನ್ನು ಮತ್ತಷ್ಟು ಸಂತಾನೋತ್ಪತ್ತಿ ತಡೆಗಟ್ಟಲು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಬೇಕು ಎಂದು ಹೇಳಿದೆ.
![](https://pratidhvani.com/wp-content/uploads/2024/03/Faithfullbull_Spike_of_Mightybull.jpg)
ಸಾಕು ಪ್ರಾಣಿಗಳಾಗಿ ಇರಿಸಲಾದ ಈ ಮೇಲಿನ ಕ್ರೂರ ತಳಿಯ ನಾಯಿಗಳ ಕಡಿತದಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ. ಅದಕ್ಕಾಗಿಯೇ ಅವುಗಳನ್ನು ನಿಷೇಧ ಮಾಡಲಾಗುತ್ತಿದೆ. ಇಂಥ ನಾಯಿಗಳನ್ನು ಸಾಕುವುದರಿಂದ ಮನುಷ್ಯನ ಜೀವನಕ್ಕೆ ಅಪಾಯ ಇದೆ ಎಂದು ಹೇಳಲಾಗಿದೆ.