ಮಗು ಹುಟ್ಟಿದ ನಂತರ ತಾಯಿ ಮಗುವಿಗೆ ಮೊದಲು ತಿಂಗಳಿಂದ ಆರು ತಿಂಗಳವರೆಗೂ ಕನಿಷ್ಠ ಪಕ್ಷ 6 ತಿಂಗಳವರೆಗು ಹಾಲನ್ನ ಉಣಿಸಬೇಕು.. ಆದ್ರೆ ಇತ್ತೀಚಿನ ದಿನಗಳಲ್ಲಿ ತಾಯಂದಿರು ಬ್ರೆಸ್ಟ್ ಫೀಡ್ ಮಾಡುವುದನ್ನು ಅವಾಯ್ಡ್ ಮಾಡ್ತಾರೆ. ಕಾರಣ ಅಂದ ಕಡಿಮೆಯಾಗಬಹುದು ಹಾಗೂ ಏಜಿಂಗ್ ಪ್ರಾಬ್ಲಮ್ ಶುರುವಾಗುತ್ತೆ ಅನ್ನುವುದರಿಂದ. ಇದು ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತೆ.
![](https://pratidhvani.com/wp-content/uploads/2024/06/IMG_8475.jpeg)
ಕೆಲವು ತಾಯಿಯಂದಿರು ಮಗುವಿಗೆ ಮೊದಲ ಆರು ತಿಂಗಳು ಹಾಲನ್ನು ಉಳಿಸಿದರೆ, ಇನ್ನೂ ಕೆಲವರು 12 ತಿಂಗಳು ಹಾಗೂ ಇನ್ನೂ ಕೆಲವರು ಎರಡು ವರ್ಷದ ತನಕ ಹಾಲುಣಿಸುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ಉತ್ತಮ ಪ್ರಭಾವ ಬೀರುತ್ತದೆ..
![](https://pratidhvani.com/wp-content/uploads/2024/06/IMG_8478.jpeg)
- ಉತ್ತಮ ಪೋಷಕಾಂಶಗಳು ಮಗುವಿಗೆ ತಾಯಿಯ ಹಾಲುಣಿಸುವುದರಿಂದ ಉತ್ತಮ ಪೋಷಕಾಂಶಗಳು ದೊರೆಯುತ್ತದೆ ಹಾಗೂ ತಾಯಿಯ ಹಾಲು ಮೊದಲ ಲಸಿಕೆ ಎಂಬ ಮಾತು ಕೂಡ ಇದೆ.
- ತಾಯಿ ಹಾಲನ್ನು ಮಕ್ಕಳು ಕುಡಿಯುವುದರಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ ಹಾಗೂ ಓದು ಬರಹದಲ್ಲಿ ಮಕ್ಕಳು ಶಾರ್ಪ್ ಇರ್ತಾರೆ ಬ್ರೈನ್ ಫಂಕ್ಷನಿಂಗ್ಗೆ ತುಂಬಾನೇ ಒಳ್ಳೆಯದು.
- ಮಕ್ಕಳಿಗೆ ಕನಿಷ್ಠ ಒಂದು ವರ್ಷದವರೆಗೂ ಹಾಲುಣಿಸುವುದರಿಂದ ಮಕ್ಕಳ ಮೂಲೆಗಳು ಬಲವಾಗಿ ಹಾಗೂ ಗಟ್ಟಿಯಾಗಿ ಬೆಳೆಯುತ್ತವೆ. ಇಲ್ಲವಾದಲ್ಲಿ ದೊಡ್ಡವರಾಗ್ತಾ ಆಗ್ತಾ ಅನೇಕ ಮೂಳೆಗಳಿಗೆ ಸಂಬಂಧಿತ ಕಾಯಿಲೆಗಳು ಎದುರಾಗಬಹುದು.
- ಹಾಗೂ ಅಲ್ಪಾವಧಿಯ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ದೂರವಿರುತ್ತಾರೆ.
- ಮಕ್ಕಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಹಾಗಾಗಿ ತಪ್ಪದೆ ಮೊದಲ ಆರು ತಿಂಗಳವರೆಗೂ ಹಾಲುಣಿಸುದು ತಾಯಂದಿರ ಕರ್ತವ್ಯ .ಇಲ್ಲವಾದಲ್ಲಿ ಮಕ್ಕಳಿಗೆ ಅನೇಕ ಕಾಯಿಲೆಗಳು ನ್ಯೂಟ್ರಿಷನ್ ಹಾಗೂ ಪ್ರೊಟೆಕ್ಷನ್ ಕೊರತೆಯೂ ಕಾಣಬಹುದು ಎದುರಾಗಬಹುದು.