• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʼಮುಸ್ಲಿಂ ಪುರುಷರ ಸಾಮೂಹಿಕ ನೇಣುʼ ವ್ಯಂಗ್ಯ ಚಿತ್ರದ ಮೂಲಕ ಹಿಂದುತ್ವ ನೀಡಬಯಸಿದ ಸಂದೇಶವೇನು?

ಫೈಝ್ by ಫೈಝ್
February 25, 2022
in ದೇಶ
0
ʼಮುಸ್ಲಿಂ ಪುರುಷರ ಸಾಮೂಹಿಕ ನೇಣುʼ ವ್ಯಂಗ್ಯ ಚಿತ್ರದ ಮೂಲಕ ಹಿಂದುತ್ವ ನೀಡಬಯಸಿದ ಸಂದೇಶವೇನು?
Share on WhatsAppShare on FacebookShare on Telegram

ನರೇಂದ್ರ ಮೋದಿ (Narendra Modi) ಮತ್ತು ಅಮಿತ್‌ ಶಾ (Amit Shah) ಅವರನ್ನು ನಮಗೆ ನೀಡಿದ ಗುಜರಾತ್‌ ಬಿಜೆಪಿಯು (Gujarat BJP) ಈಗ ಯಹೂದಿಗಳ ವಿರುದ್ಧ ನಾಝಿಗಳು ಹಾಗೂ ಸಂಯುಕ್ತ ಅಮೇರಿಕಾದ ದಕ್ಷಿಣದ (South America) ಜನಾಂಗೀಯವಾದಿಗಳು ಹತ್ಯೆಗಳ ಸಂಭ್ರಮಾಚರಣೆಗೆ ಬಳಸಿದಂತಹ ವಿಷಪೂರಿತ ಹಾಗೂ ಅದಃಪತನದ ಚಿತ್ರವನ್ನು ನೆನಪಿಸುವಂತಹ ಕಾರ್ಟೂನ್‌ (Cartoon) ಅನ್ನು ಬಿಡುಗಡೆಗೊಳಿಸಿದೆ.

ADVERTISEMENT

ಬಿಜೆಪಿಯ ಅಧಿಕೃತ ಖಾತೆಯಿಂದ ಪೋಸ್ಟ್‌ ಮಾಡಲಾದ ಚಿತ್ರದಲ್ಲಿ ಮುಸ್ಲಿಂ ಪುರುಷರನ್ನು (Muslim Men’s) ಸಾಮೂಹಿಕವಾಗಿ ನೇಣಿಗೆ ಹಾಕುವಂತೆ ಚಿತ್ರಿಸಲಾಗಿದ್ದು, ಸದ್ಯ ಈ ಪೋಸ್ಟ್‌ ಅನ್ನು ಸ್ವಯಂ ಪ್ರೇರಿತವಾಗಿ ಪಕ್ಷ ಡಿಲಿಟ್‌ (Post delete) ಮಾಡಿದೆ. ʼಸತ್ಯವು ಮಾತ್ರ ಜಯಶಾಲಿಯಾಗುತ್ತದೆʼ ಎಂದು ಗುಜರಾತಿ ಭಾಷೆಯಲ್ಲಿ ಬರೆದ ಒಕ್ಕಣೆಯೊಂದಿಗೆ ಈ ಚಿತ್ರ ಹಂಚಲಾಗಿತ್ತು. ಭಾರತದ ಅಧಿಕೃತ ಲಾಂಛನವನ್ನು ಈ ಚಿತ್ರದಲ್ಲಿ ಬಳಸಲಾಗಿದೆ.

ಈ ಕಾರ್ಟೂನ್‌ನಲ್ಲಿ ಅಹಮದಾಬಾದ್ ಸರಣಿ ಸ್ಪೋಟ ಪ್ರಕರಣದ 77 ಆರೋಪಿಗಳಲ್ಲಿ 38 ಮಂದಿಗೆ ಗಲ್ಲು ಶಿಕ್ಷೆ ನೀಡಿದ ಕೋರ್ಟ್‌ ತೀರ್ಪು ಉಲ್ಲೇಖಿಸಲಾಗಿದೆ. ಸ್ಫೋಟಗಳಲ್ಲಿ 56 ಜನರು ಸಾವನ್ನಪ್ಪಿದರು ಮತ್ತು 200 ಜನರು ಗಾಯಗೊಂಡಿದ್ದರು. ಆರೋಪಿಗಳಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 28 ಜನರನ್ನು ಖುಲಾಸೆಗೊಳಿಸಲಾಗಿದೆ.

ಬಾಂಬ್ ಸ್ಫೋಟಗಳು ಜನರ ವಿರುದ್ಧದ ಘೋರ ಅಪರಾಧವಾಗಿದ್ದು, ದುಷ್ಕರ್ಮಿಗಳಿಗೆ ಯಾರೂ ಕರುಣೆ ತೋರಿಸಲು ಯಾವುದೇ ಕಾರಣಗಳಿಲ್ಲ. ಖಂಡಿತವಾಗಿಯೂ, ರಾಜ್ಯವು ಖುಲಾಸೆಗೊಂಡವರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತದೆ, ಅದೇ ವೇಳೆ ಅಪರಾಧ ಸಾಬೀತಾದವರಿಗೆ ಉನ್ನತ ನ್ಯಾಯಾಲಯಗಳ ಮೊರೆ ಹೋಗುವ ಹಕ್ಕಿದೆ. ಹಾಗಿದ್ದರೂ, ಕೇಂದ್ರ ಮತ್ತು ಗುಜರಾತಿನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಈ ಕಾರ್ಟೂನ್‌ ಪ್ರಕಟಿಸುವ ಮೂಲಕ ಏನು ಸಂದೇಶ ರವಾನಿಸಲು ಪ್ರಯತ್ನಿಸುತ್ತದೆ ಎನ್ನುವುದು ನಿಜವಾದ ಪ್ರಶ್ನೆ.

ನಿರ್ದಿಷ್ಟ ವ್ಯಕ್ತಿಗಳಿಗೆ ನ್ಯಾಯವನ್ನು ನೀಡಲಾಗಿದೆ ಎಂಬ ಅಂಶವನ್ನು ಶ್ಲಾಘಿಸುವ ಪಕ್ಷದ ಕೀಳು ಅಭಿರುಚಿಯ ಸಂದೇಶವೇ ಇದು? ಅಥವಾ ಟೋಪಿಗಳನ್ನು ಧರಿಸಿರುವ ಗಡ್ಡಧಾರಿ ಮುಸ್ಲಿಂ ಪುರುಷರು ವಿಡಂಬನಾತ್ಮಕವಾಗಿ ನೇತಾಡುತ್ತಿರುವಂತೆ ತೋರಿಸಿರುವುದು ಯಾವುದೋ ಒಂದು ರೂಪಕವೇ? ಒಟ್ಟಾರೆಯಾಗಿ ಮುಸ್ಲಿಮರು ಭವಿಷ್ಯದಲ್ಲಿ ಎದುರಿಸಲಿರುವ ಹಣೆಬರಹ ಇದು ಎಂದು ಬಿಜೆಪಿಯುತನ್ನ ಬೆಂಬಲಿಗರಿಗೆ ಈ ಮೂಲಕ ಸೂಚನೆ ನೀಡುತ್ತಿರಬಹುದೇ?

ಮುಸ್ಲಿಮರು ಆಕ್ರಮಿಸಿಕೊಂಡವರು ಎಂಬ ಬಗ್ಗೆ ವ್ಯವಸ್ಥಿತ ಪ್ರಚಾರ ಮತ್ತು ಸಿದ್ದಾಂತ ಹೊಂದಿರುವ ಬಿಜೆಪಿ (BJP) ಮತ್ತು ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಜೆಂಡಾದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಪ್ರಸ್ತುತವಾಗಿದೆ. ಚುನಾವಣಾ ಸಮಯದಲ್ಲಿ, ಈ ಮುಸ್ಲಿಮರು ಅನ್ಯರು ಎಂಬ ಪ್ರಚಾರ ಬಹುತೇಕ ವ್ಯವಸ್ಥಿತವಾಗಿ ನಡೆಯುತ್ತದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮೋದಿ, ಷಾ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ (Yogi adityanath) ಮತ್ತು ಇತರ ಪಕ್ಷದ ಪದಾಧಿಕಾರಿಗಳು ಮಾಡಿದ ಪ್ರಚಾರ ಭಾಷಣಗಳು ಮುಸ್ಲಿಮರ ಬಗ್ಗೆ ಸ್ಪಷ್ಟ ಅಥವಾ ಸೂಚ್ಯವಾಗಿ ಪ್ರತಿಕೂಲವಾದ ಉಲ್ಲೇಖಗಳಿಂದ ತುಂಬಿವೆ.

ಅವರ ವ್ಯಂಗ್ಯಚಿತ್ರವು ಭಯಾನಕತೆಯನ್ನು ಹುಟ್ಟುಹಾಕಲು ಕಾರಣವೆಂದರೆ ನಾವು ಈ ರೀತಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿರುವುದನ್ನು ಈ ಮೊದಲು ನೋಡಿದ್ದೇವೆ ಮತ್ತು ಅದು ಎಲ್ಲಿಗೆ ತಲುಪಿಸುತ್ತದೆ ಎಂದು ತಿಳಿದಿದೆ. ಜರ್ಮನಿಯಲ್ಲಿ ನಾಝಿ (Germen Nazi) ಕಾಲದಲ್ಲಿ ಬದುಕಿದ್ದ ಚಿಂತಕ ಕ್ಲೆಂಪೆರರ್‌, ತಮ್ಮ ಡೈರಿಯುದ್ದಕ್ಕೂ ನಾಝಿಗಳ ವರ್ತನೆಗಳ ಬಗ್ಗೆ ಗಮನ ಹರಿಸುತ್ತಾ ಹೋಗುತ್ತಾರೆ.

‘ರಾಜಕೀಯ ಪ್ರಪಂಚವನ್ನು ವ್ಯಕ್ತಿಗಳ ಮತ್ತು ವ್ಯಕ್ತೀಕರಣಗಳ ನಡುವಿನ ಸಂಘರ್ಷವಾಗಿ ಬದಲಾಯಿಸಿ’ ಒಂದು ರೀತಿಯ ಕಟ್ಟುಕತೆಯಾಧಾರಿತ ಜಗತ್ತನ್ನು ನಾಝಿ ಪ್ರೊಪಗಾಂಡ ಹುಟ್ಟು ಹಾಕಿತ್ತು. ಆ ಜಗತ್ತಿನಲ್ಲಿ ಸತ್ಶೀಲವಂತ ಯುವ ಜರ್ಮನಿ ಹೆಮ್ಮೆಯಿಂದ, ʼಯಹೂದಿ ಎನ್ನುವುದಕ್ಕಿಂತ ಮುಖ್ಯವಾಗಿ, ಒಂದು ದುಷ್ಟ ಶಕ್ತಿಯೊಂದಿಗೆʼ ಹೋರಾಟ ಮಾಡುತ್ತಿದ್ದರು. ಯಹೂದಿಗಳು ಮೊದಲು ಜರ್ಮನಿಯ ಒಳಗಿನ ರಾಜಕೀಯ ಸಂಘರ್ಷಗಳಲ್ಲಿ ಕ್ರಮೇಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಟ್ಟುಕತೆಯ ಒಂದು ಪ್ರಮುಖ ಭಾಗವಾಗಿಬಿಟ್ಟಿದ್ದರು. ಸದರಿ ದೌರ್ಜನ್ಯ ಮಾಡಲಿಕ್ಕಿರುವ ಉನ್ಮಾದ ಮತ್ತು ಚಿತ್ತ ಭ್ರಮೆ ಹಿಡಿದ ಕಲ್ಪನೆಯ ಎಳೆ ಜರ್ಮನ್ ಪ್ರೊಪಗಾಂಡದ ವಿವಿಧ ಧಾರೆಗಳನ್ನು ಒಂದೇ ನೂಲಿನಲ್ಲಿ ಪೋಣಿಸುವ ಘಟಕವಾಗಿತ್ತು. ಸುಳ್ಳಿಗಿಂತ ಹೆಚ್ಚಾಗಿ ಜಾಗತಿಕ ಘಟನೆಗಳ ಮೇಲೆ ಮತಿವಿಕಲ್ಪ ಬಾಧಿಸಿದ ವಿನ್ಯಾಸಗಳ ಹೇರಿಕೆಯೇ ನಾಝಿ ಪ್ರೊಪಗಾಂಡದ ಪ್ರಧಾನ ಲಕ್ಷಣ ಎಂದು E.H ಗಾಮ್ಬ್ರಿಚ್ (E.H. Gombrich) ತನ್ನ ಪ್ರಬಂಧದಲ್ಲಿ ವಿವರಿಸುತ್ತಾರೆ.’

ಆರೆಸ್ಸೆಸ್ ಮತ್ತು ಬಿಜೆಪಿಗೆ, ಎಲ್ಲಾ ಘಟನೆಗಳ ಮೇಲೆ ಮತಿವಿಕಲ್ಪದ ಮಾದರಿಯನ್ನು ಹೇರುವುದು ಅದರ ರಾಜಕೀಯ ಪ್ರಚಾರದ ಪ್ರಧಾನ ಅಂಶವಾಗಿದೆ. ನೈಜ ಮತ್ತು ಕಾಲ್ಪನಿಕದ ಪ್ರತಿ ಬೆದರಿಕೆಗೆ ಖಳನಾಯಕ ಮುಸ್ಲಿಂ ಆಗಿರುವಂತೆಯೂ, ಹಿಂದೂ ಬಲಿಪಶು ಆಗಿರುವಂತೆಯೂ ಪ್ರಚುರಪಡಿಸುತ್ತದೆ. ಮುಸ್ಲಿಮೇತರ ವಿರೋಧಿಗಳು ಈ ʼಖಳನಾಯಕʼನನ್ನು ಸಮಾಧಾನಪಡಿಸಿದ ಪಾಪಕ್ಕಾಗಿ ಹಲ್ಲೆಗೊಳಗಾಗುತ್ತಾರೆ.

ನರೇಂದ್ರ ಮೋದಿ ಅವರು ಇತ್ತೀಚಿನ ಚುನಾವಣಾ ರ್ಯಾಲಿಯಲ್ಲಿ, ಅಹಮದಾಬಾದ್ (Ahmedabad) ಬಾಂಬರ್‌ಗಳು ಬಳಸಿದ ಸೈಕಲ್ ಅನ್ನು ಸಮಾಜವಾದಿ ಪಕ್ಷದ ವಿರುದ್ಧ ಆರೋಪವನ್ನಾಗಿ ಪರಿವರ್ತಿಸಿದರು. ʼಅವರು ಯಾಕೆ ಸೈಕಲನ್ನು ಆರಿಸಿಕೊಂಡರು?ʼ ಎಂದು ಸಮೂಹವನ್ನು ಕೇಳಿ ಸಮಾಜವಾದಿ ಪಕ್ಷಕ್ಕೆ ಇರುವ ʼಭಯೋತ್ಪಾದಕ ಮುಸ್ಲಿಂ ಮತಗಳಿಂದಾಗಿ ಅದು ಕಲುಷಿತಗೊಂಡಿದೆʼ ಎಂಬರ್ಥದಲ್ಲಿ ಬಿಂಬಿಸಿದರು.

2019 ರಲ್ಲಿ ನರೇಂದ್ರ ಮೋದಿ ಅವರು ಯಾವುದೇ ಹಿಂದೂ ಭಯೋತ್ಪಾದಕರಾಗಲು (Hindu terrorist) ಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಘೋಷಿಸಿದರು. ಹಾಗಾಗಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಮತ್ತು ಆಕೆಯ ಸಹಚರರು ಈ ರೀತಿ ಕುಣಿಕೆಯಿಂದ ತೂಗಾಡುತ್ತಿರುವಂತೆ ಚಿತ್ರಿಸುವ ಕಾರ್ಟೂನ್ ಎಂದಿಗೂ ಇರುವುದಿಲ್ಲ ಎಂದು ನಾವು ಖಚಿತವಾಗಿ ಭಾವಿಸಬಹುದು. ಮೋಟಾರ್‌ಸೈಕಲ್‌ನ ಬಳಕೆಯನ್ನು ಒಳಗೊಂಡಿರುವ ಆ ಬಾಂಬ್‌ ಸ್ಪೋಟವು ಅಹಮದಾಬಾದ್ ಸ್ಫೋಟದ ಅದೇ ಸಮಯದಲ್ಲಿ ಸಂಭವಿಸಿದೆ. ವಾಸ್ತವವಾಗಿ, ಆಕೆಯ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಬಿಜೆಪಿಯ ಕಲ್ಪನೆಯಲ್ಲಿ ಭಯೋತ್ಪಾದನೆಯು ಸಂಪೂರ್ಣವಾಗಿ ಮುಸ್ಲಿಮರ ಕೈವಾಡವಾಗಿದೆ, ಹಾಗಾಗಿ ಇದನ್ನು ಸಮಸ್ಯೆಯಾಗಿ ಕಾಣಲಾಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ಕ್ಷೀಣಿಸುತ್ತಿರುವುದರಿಂದ, ‘ಮತಿವಿಕಲ್ಪ ಮಾದರಿ’ಯನ್ನು ಬೇರೆಡೆ ಹೇರಲಾಗಿದೆ. 2020 ರಲ್ಲಿ, ಬಿಜೆಪಿ ನಾಯಕರು ಸಾಂಕ್ರಾಮಿಕ ರೋಗಕ್ಕೆ ಮುಸ್ಲಿಮರನ್ನು ದೂಷಿಸುವ ಕೆಟ್ಟ ‘ಕರೋನಾ ಜಿಹಾದ್’ ಪ್ರಚಾರಕ್ಕೆ ಮುಕ್ತ ನಿಯಂತ್ರಣವನ್ನು ನೀಡಿದರು. ನಂತರ ಉಗುಳು ಜಿಹಾದ್, ಲ್ಯಾಂಡ್ ಜಿಹಾದ್, ಲವ್ ಜಿಹಾದ್, ಮಾಫಿಯಾ, ಅತಿಕ್ರಮಣಕಾರರು, ಗಲಭೆಕೋರರು, ನುಸುಳುಕೋರರು, ಗೆದ್ದಲುಗಳು ಮೊದಲಾದ ಪದಬಳಕೆಯನ್ನು ಬಳಸಲಾಯಿತು.

ಹಲವಾರು ವಿಶ್ಲೇಷಕರು ಹಿಂದುತ್ವ ಸಂಘಟನೆಗಳ (Hindi Organization) ‘ಕರೋನಾ ಜಿಹಾದ್’ ಅಭಿಯಾನ ಮತ್ತು ʼಟೈಫಸ್‌ ಸೋಂಕಿʼಗೆ ಯಹೂದಿಗಳನ್ನು ದೂಷಿಸುವ ನಾಝೀ ಪ್ರಚಾರದ ನಡುವಿನ ಸಮಾನಾಂತರ ಅಂಶಗಳನ್ನು ಗಮನಿಸಿದ್ದಾರೆ. ಯಹೂದಿ ಮತ್ತು ಮುಸಲ್ಮಾನರ ವಿರುದ್ಧ ಬಂದ ಸಮಾನ ಅಂಶಗಳ ವ್ಯಂಗ್ಯಚಿತ್ರ ನೋಡಿದ ಮೇಲಂತೂ ಈ ಹೋಲಿಕೆಯು ಇನ್ನಷ್ಟು ಗಮನಾರ್ಹವಾಗಿದೆ.

(ಯಹೂದಿಗಳ) ದೈಹಿಕ ಚಹರೆಗಳ ಕಡೆಗಿನ ಪೂರ್ವಾಗ್ರಹ ಪೀಡಿತ ಹಾಗೂ ಸ್ಟೀರಿಯೋಟೈಪ್‌ ದೃಷ್ಟಿಕೋನವು ಜರ್ಮನ್‌ ರಾಷ್ಟ್ರವಾದವನ್ನು ʼತಾರತಮ್ಯʼದಿಂದ ʼನರಮೇಧʼದ ಹಂತಕ್ಕೆ ತಲುಪಿಸುವ ವೇಗವರ್ಧಕವಾಗಿ ಕೆಲಸ ಮಾಡಿದೆ ಎಂದು ಫ್ಯಾಸಿಸಂ ಚರಿತ್ರೆಕಾರ ಜಾರ್ಜ್‌ ಎಲ್‌ ಮೊಸ್ಸೆ ಹೇಳುತ್ತಾರೆ. ಹಾಗಾಗಿ, ಈ ಒಟ್ಟಾರೆ ಚಿತ್ರಣವು, ಹಿಂದುತ್ವವನ್ನು ನಾವು ಸಾಮಾನ್ಯೀಕರಿಸಿ ನೋಡದೆ, (ಅಂದರೆ, ಅದೊಂದು ಸಾಮಾನ್ಯ ರಾಜಕೀಯ ಚಿಂತನೆ ಅಥವಾ ಸರಳ ಸಿದ್ದಾಂತ) ಗಂಭೀರವಾಗಿ ಪರಿಗಣಿಸಬೇಕು ಎನ್ನುವುದನ್ನು ಹೇಳುತ್ತದೆ.

ಸಹಜವಾಗಿ, ನಾಜಿಗಳು ಆರ್‌ಎಸ್‌ಎಸ್-ಬಿಜೆಪಿಗಿಂತ ಬಲವಾದ ಆದರ್ಶ ಮತ್ತು ನಿಂದನೀಯ ಪ್ರತಿರೂಪದ ಬಗ್ಗೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲ್ಪನೆಯನ್ನು ಹೊಂದಿದ್ದರು. ಆದರೆ, ಹಿಂದುತ್ವದ ಫ್ಯಾಸಿಸಂ ನಾಝಿ ಫ್ಯಾಸಿಸಂಗಿಂತ ವಿಭಿನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು.

ಅದೇನೆ ಇದ್ದರೂ, ಹಿಂದುತ್ವ ಫ್ಯಾಸಿಸಂ ಮುಸ್ಲಿಮರ ಗುರುತುಗಳಾದ ಅವರ ಗಡ್ಡ, ಅವರ ವಸ್ತ್ರಧಾರಣೆ, ಅವರ ಆಹಾರ ಪದ್ಧತಿ, ಅವರ ಪೂಜಾ ವಿಧಾನಗಳನ್ನು ಇಟ್ಟು ಅವರ ವಿರುದ್ಧ ಸ್ಟೀರಿಯೋಟೈಪ್‌ ಚಿತ್ರಣ ಕಟ್ಟಿಕೊಡುತ್ತಿದೆ, ಆ ಮೂಲಕ ಅವರ ಬಗ್ಗೆ ಭಯ ಹುಟ್ಟಿಸುವುದು ಅದೇ ಸಮಯ ಮುಸ್ಲಿಮರನ್ನು ಅವರದ್ದೇ ಆದ ಸ್ಥಾನದಲ್ಲಿ ಇರಿಸಬೇಕೆಂದು ಪ್ರತಿಪಾದಿಸುತ್ತಿದೆ. ಅಂದರೆ, ಅವರನ್ನು ಪರಕೀಯರನ್ನಾಗಿಸಿ ಇಡಬೇಕು ಎನ್ನುವುದನ್ನು.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ʼನೀವು ಅವರ ವಸ್ತ್ರದಿಂದಲೇ ಅವರನ್ನು ಗುರುತಿಸಬಹುದುʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದೀಗ ಅವರು 13 ವರ್ಷಗಳ ಕಾಲ ಆಳಿದ ಅವರ ತವರು ಗುಜರಾತಿನಿಂದ ನೇಣು ಕುಣಿಕೆಯಲ್ಲಿ ʼಅವರನ್ನುʼ (ಮುಸ್ಲಿಮರನ್ನು) ಗುರುತಿಸುವಂತಹ ಸಂದೇಶ ಹಂಚುವಲ್ಲಿಗೆ ಬಂದು ತಲುಪಿದೆ.

ಮೂಲ: ಸಿದ್ದಾರ್ಥ ವರದರಾಜನ್, The Wire Editor

Tags: being hangedBharatiya Janata PartyBJPCartoonsGujaratHangingHinduLocal newsMuslim menMuslimsnationalist PartyNooseremoved the postscreenshotsTwitter handleಮುಸ್ಲಿಂ ಪುರುಷವ್ಯಂಗ್ಯ ಚಿತ್ರಸಾಮೂಹಿಕ ನೇಣುಹಿಂದುತ್ವ
Previous Post

ಸಿಖ್ ಸಮುದಾಯದ ವಿದ್ಯಾರ್ಥಿನಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ

Next Post

ಪಂಜಾಬ್ ಚುನಾವಣಾ ಫಲಿತಾಂಶವು ಕೇಜ್ರಿವಾಲ್ ರಾಜಕೀಯ ಭವಿಷ್ಯವನ್ನು ಹೇಗೆ ಮರು ವ್ಯಾಖ್ಯಾನಿಸಲಿದೆ?

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ?

March 4, 2026
Next Post
ಪಂಜಾಬ್ ಚುನಾವಣಾ ಫಲಿತಾಂಶವು ಕೇಜ್ರಿವಾಲ್ ರಾಜಕೀಯ ಭವಿಷ್ಯವನ್ನು ಹೇಗೆ ಮರು ವ್ಯಾಖ್ಯಾನಿಸಲಿದೆ?

ಪಂಜಾಬ್ ಚುನಾವಣಾ ಫಲಿತಾಂಶವು ಕೇಜ್ರಿವಾಲ್ ರಾಜಕೀಯ ಭವಿಷ್ಯವನ್ನು ಹೇಗೆ ಮರು ವ್ಯಾಖ್ಯಾನಿಸಲಿದೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada