• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

ವಿಕಲಚೇತನರಿಗೆ ಸಿಹಿಸುದ್ದಿ : ಎಲೆಕ್ಟ್ರಿಕ್‌ ವ್ಹೀಲ್‌ ಚೇರ್‌ ವಾಹನ ಸಂಶೋಧಿಸಿದ ಐಐಟಿ ವಿದ್ಯಾರ್ಥಿಗಳು!

ಫಾತಿಮಾ by ಫಾತಿಮಾ
June 24, 2022
in ವಿಶೇಷ
0
ವಿಕಲಚೇತನರಿಗೆ ಸಿಹಿಸುದ್ದಿ : ಎಲೆಕ್ಟ್ರಿಕ್‌ ವ್ಹೀಲ್‌ ಚೇರ್‌ ವಾಹನ ಸಂಶೋಧಿಸಿದ ಐಐಟಿ ವಿದ್ಯಾರ್ಥಿಗಳು!
Share on WhatsAppShare on FacebookShare on Telegram

ಒಂದೆಡೆ ಭಾರತದಲ್ಲಿ, ಗಿಗ್ ಆರ್ಥಿಕತೆ ಸೃಷ್ಟಿಸಿರುವ ಸವಾಲುಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಇನ್ನೊಂದೆಡೆ ಇದೇ ಆರ್ಥಿಕತೆ ಸೃಷ್ಟಿಸಿರುವ ಉದ್ಯೋಗಾವಕಾಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಚೈನ್ನೈನ ಗಣೇಶ್ ಮುರುಗನ್ ಎಂಬ ಡೆಲಿವರಿ ಬಾಯ್ ಗಾಲಿಕುರ್ಚಿಯಲ್ಲಿ ಕೂತು ಆಹಾರ ವಿತರಿಸುತ್ತಿದ್ದು ಇಡೀ ದೇಶದ ಗಮನ ಸೆಳೆದಿದ್ದಾರೆ.

ADVERTISEMENT

ಬೆನ್ನುಹುರಿ ಗಾಯಗೊಂಡಿರುವ ಚೆನ್ನೈನ 37 ವರ್ಷದ ಗಣೇಶ್ ಮುರುಗನ್ ಅವರು ಭಾರತದ ಮೊದಲ ಗಾಲಿಕುರ್ಚಿ ಆಹಾರ ವಿತರಣಾ ವ್ಯಕ್ತಿ.  ಐಐಟಿ ಮದ್ರಾಸ್‌ನ  ಸ್ಟಾರ್ಟ್-ಅಪ್‌ನಿಂದ ವಿನ್ಯಾಸಗೊಳಿಸಲಾದ ನವೀನ ಮೋಟಾರೀಕೃತ ಎಲೆಕ್ಟ್ರಿಕ್ ವೀಲ್‌ಚೇರ್ ಬಳಸಿ ಅವರು ಆಹಾರ ವಿತರಣೆ ಮಾಡುತ್ತಾರೆ. ಈ ಟು-ಇನ್-ಒನ್ ಮೋಟಾರೈಸ್ಡ್ ವ್ಹೀಲ್‌ಚೇರ್ ಅನ್ನು ಒಂದು ಗುಂಡಿಯನ್ನು ಒತ್ತುವ ಮೂಲಕ ಬೇರ್ಪಡಿಸಬಹುದು ಮತ್ತು ಹಾಗೆ ಮಾಡಿದಾಗ ಹಿಂದಿನ ಭಾಗವು ಸರಳವಾದ ಗಾಲಿಕುರ್ಚಿಯಾಗಿ ಬದಲಾಗುತ್ತದೆ. ಇದು ಆಹಾರವನ್ನು ಸಂಗ್ರಹಿಸಲು ಮತ್ತು ತಲುಪಿಸಲು ಪ್ರವೇಶಿಸಬಹುದಾದ ರೆಸ್ಟೋರೆಂಟ್‌ಗಳು ಅಥವಾ ಬಹುಮಹಡಿ ಕಟ್ಟಡಗಳಿಗೆ ಯಾರ ಸಹಾಯವೂ ಇಲ್ಲದೆ ಹೋಗಿ ಬರಲು ಅನುಕೂಲ ಮಾಡಿಕೊಡುತ್ತದೆ.

ಈ ವಾಹನದಿಂದ ಅಪಾರ ಆತ್ಮವಿಶ್ವಾಸವನ್ನು ಗಳಿಸಿಕೊಂಡಿರುವ ಗಣೇಶ್  “ಇತ್ತೀಚೆಗೆ ನಾನು ಅಂಬತ್ತೂರಿನಲ್ಲಿ 10 ನೇ ಮಹಡಿಯಲ್ಲಿ ಡೆಲಿವರಿ ಮಾಡಬೇಕಾಗಿತ್ತು. ನಾನು ಗ್ರಾಹಕರನ್ನು ಕೆಳಗೆ ಬರಲು ಹೇಳಲಿಲ್ಲ. ನಾನು ಮುಂಭಾಗದ ಚಕ್ರವನ್ನು ಬೇರ್ಪಡಿಸಿ ಗಾಲಿಕುರ್ಚಿಯಂತೆ ಮಾಡಿ ಲಿಫ್ಟ್‌ಗೆ ಹತ್ತಿದೆ. ಗ್ರಾಹಕರು ಇದರಿಂದ ತುಂಬಾ ಪ್ರಭಾವಿತರಾದರು. ನಾನು ಕೂಡ ಹೊಸ ಅನುಭವವನ್ನು ಆನಂದಿಸಿದೆ ಮತ್ತು ಗ್ರಾಹಕರು ಸಹ ಸಂತೋಷಪಟ್ಟರು” ಎನ್ನುತ್ತಾರೆ.

ಅದೇ ರೀತಿ ಪೋಲಿಯೊ ಪೀಡಿತರಾದ ರಾಜಾರಾಂ ಅವರು  ಅವರು ಸೈಕಲ್ ವಿಭಾಗದ ಅಡಿಯಲ್ಲಿ ಜೊಮಾಟೊ ಜೊತೆಗೆ ಸೈನ್ ಅಪ್ ಮಾಡಿಕೊಂಡಿದ್ದು  ಉತ್ತರ ಚೆನ್ನೈನಲ್ಲಿ ಆಹಾರ ವಿತರಿಸುತ್ತಿದ್ದಾರೆ. ಈ ವೀಲ್‌ಚೇರನ್ನೂ ಅವರೂ ಬಳಸುತ್ತಿದ್ದು ಮೋಟಾರೀಕೃತ ಗಾಲಿಕುರ್ಚಿ ತನ್ನ ಕನಸುಗಳಿಗೆ ರೆಕ್ಕೆಗಳನ್ನು ನೀಡಿದೆ ಎಂದು ಅವರು ಹೇಳುತ್ತಾರೆ. ಅವರ ಆದಾಯ ಈಗ ಮೊದಲಿಗಿಂತ ₹ 9,000 ಹೆಚ್ಚಾಗಿದೆ. ” ಈ ಆದಾಯದೊಂದಿಗೆ, ನನ್ನ ಮಾಸಿಕ ಬಾಡಿಗೆ ಮತ್ತು ಇತರ ಹೆಚ್ಚುವರಿ ವೆಚ್ಚಗಳನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತದೆ”  ಎಂದು ಅವರು ಹೇಳುತ್ತಾರೆ. “ನನ್ನ ಆಹಾರ ವಿತರಣಾ ಚೀಲವನ್ನು ನಾನು ಹೊತ್ತೊಯ್ಯುವಾಗ ಜನರು ನನ್ನನ್ನು ಮೆಚ್ಚುಗೆಯಿಂದ ಮತ್ತು ಹೆಮ್ಮೆಯಿಂದ ನೋಡುತ್ತಾರೆ. ಅವರು ಮೊದಲು ಮತ್ತು ಈಗ ನನ್ನನ್ನು ನೋಡುವ ರೀತಿಯಲ್ಲಿ ನಾನು ದೊಡ್ಡ ವ್ಯತ್ಯಾಸವನ್ನು ಗಮನಿಸಿದ್ದೇನೆ”ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

ಈ  ವಾಹನವನ್ನು ನಿಯೋಮೋಷನ್ ಅಸಿಸ್ಟೆವ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸ್ಟಾರ್ಟ್-ಅಪ್ ವಿನ್ಯಾಸಗೊಳಿಸಿದ್ದು  ಐಐಟಿ ಮದ್ರಾಸ್‌ನ ಮೂವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸ್ಥಾಪಿಸಿದ್ದಾರೆ.  ಈ ವಾಹನವು ಗಂಟೆಗೆ 25 ಕಿಮೀ ವೇಗದಲ್ಲಿ ಚಲಿಸುತ್ತದೆ.  ಚಾರ್ಜ್ ಮಾಡಲು 4 ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ 25 ಕಿ.ಮೀ ಚಲಿಸುತ್ತದೆ. ಈ ಟು-ಇನ್-ಒನ್ ವಾಹನದ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗಳಾಗಿದ್ದು  ವಿಕಲಚೇತನರನ್ನು ಸಬಲೀಕರಣಗೊಳಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.

ಸ್ಟಾರ್ಟ್ಅಪ್‌ನ ಸಂಸ್ಥಾಪಕರು ಈಗ ಕಾರ್ಪೋರೆಟ್ ಕಂಪೆನಿಗಳನ್ನು‌ ಸಂಪರ್ಕಿಸುತ್ತಿದ್ದು ಸಿಎಸ್ಆರ್ ನಿಧಿಗಳ ಮೂಲಕ‌ ಈ ವಾಹನಗಳ ವೆಚ್ಚವನ್ನು ಭರಿಸಲಾಗದ ವಿಕಲಚೇತನರಿಗೆ ವಾಹನ ಒದಗಿಸುವ ಬಗ್ಗೆ ಯೋಚಿಸುತ್ತಿದ್ದಾರೆ.‌‌ ಈಗಾಗಲೇ ಸ್ಟಾರ್ಟ್ ಅಪ್ ಸುಮಾರು 1300 ವಾಹನಗಳನ್ನು ಪೂರೈಸಿದೆ.  ಇವುಗಳಲ್ಲಿ ಸುಮಾರು 300 ವಾಹನಗಳು ಕಾರ್ಪೊರೇಟ್ ಪ್ರಾಯೋಜಕತ್ವವನ್ನು ಪಡೆದಿವೆ.

ಐಐಟಿ ಮದ್ರಾಸ್‌ನ ಈ ಆವಿಷ್ಕಾರವು ಇ-ಕಾಮರ್ಸ್‌ನಲ್ಲಿ ವಿಕಲಚೇತನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ಮತ್ತಷ್ಟು ಆಶಾವಾದ ವ್ಯಕ್ತಪಡಿಸುವ ಸಂಶೋಧಕರು ಇದು ಕೇವಲ ಪ್ರಾರಂಭವಾಗಿದೆ, ಇದಕ್ಕಿಂತ ಉತ್ತಮವಾದದ್ದು ಇನ್ನು ಬರಲಿದೆ ಎಂದು ಹೇಳುತ್ತಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದಲಿತ ಲೇಖಕರು ಹೊರಕ್ಕೆ, RSS ಸಿದ್ಧಾಂತ ಒಳಕ್ಕೆ : ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ

Next Post

ಗುಜರಾತ್ ಗಲಭೆ 2002 : ಪ್ರಧಾನಿ ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್

Related Posts

Top Story

ಡೀಪ್ಟೆಕ್ ದಶಕಕ್ಕೆ ಮುನ್ನುಡಿ ಬರೆದ ಬೆಂಗಳೂರು ಟೆಕ್ ಮೇಳ, ಡೀಪ್ಟೆಕ್ ನವೋದ್ಯಮಗಳಿಗೆ ₹ 400 ಕೋಟಿ ನೆರವು: ಸಚಿವ ಪ್ರಿಯಾಂಕ್ ಖರ್ಗೆ

by ಪ್ರತಿಧ್ವನಿ
November 20, 2025
0

ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಬೆಂಗಳೂರು, ನವೆಂಬರ್ 20: ಇಲ್ಲಿ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ಗುಜರಾತ್ ಗಲಭೆ 2002 : ಪ್ರಧಾನಿ ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್

ಗುಜರಾತ್ ಗಲಭೆ 2002 : ಪ್ರಧಾನಿ ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್

Please login to join discussion

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada