ಅಗಸೆ ಬೀಜ ಹೆಚ್ಚು ಪೋಷಕಾಂಶಗಳನ್ನ ತುಂಬಿರುವಂತಹ ಒಂದು ಪದಾರ್ಥ. ಇತ್ತೀಚಿನ ದಿನಗಳಲ್ಲಿ ಅಗಸೆ ಬೀಜವನ್ನ ಜನ ಹೆಚ್ಚಾಗಿ ಬಳಸುತ್ತಾರೆ ತಮ್ಮ ಡಯಟ್ ನಲ್ಲಿ ಉಪಯೋಗಿಸುವುದು ಮಾತ್ರವಲ್ಲದೇ ತಮ್ಮ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಅಗಸೆ ಬೀಜ ಬೆಸ್ಟ್ ಎನ್ನುವವರ ಸಂಖ್ಯೆ ಕೂಡ ಹೆಚ್ಚಿದೆ. ಹಾಗಿದ್ರೆ ಈ ಅಗಸೆ ಬೀಜದಿಂದ ನಮ್ಮ ತ್ವಚೆ ಮತ್ತು ಕೂದಲ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಜೊತೆಗೆ ಯಾವ ರೀತಿ ಬಳಸಬಹುದು ಎಂಬುದರ ಮಾಹಿತಿ ಹೀಗಿದೆ.

ಅಗಸೆ ಬೀಜದಿಂದ ಚರ್ಮಕ್ಕೆ ಆಗುವ ಪ್ರಯೋಜನಗಳು
ಹೈಡ್ರೇಶನ್
ಅಗಸೆ ಬೀಜದಲ್ಲಿ ಒಮೇಗಾ ತ್ರೀ ಫ್ಯಾಟಿ ಆಸಿಡ್ ಮತ್ತು ಆಂಟಿ ಆಕ್ಸಿಡ ಅಂಶ ಹೆಚ್ಚಿರುತ್ತದೆ. ಇದು ತ್ವಚೆಯನ್ನು ನ್ಯಾಚುರಲ್ ಆಗಿ ಮಾಯಿಶ್ಚರೈಸ ಮಾಡುವುದಲ್ಲದೆ, ಚರ್ಮದಲ್ಲಿ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ನಮ್ಮ ತ್ವಚೆ ಸಾಫ್ಟ್ ಮತ್ತು ಸ್ಮೂತ್ ಆಗಿರುತ್ತದೆ.

ಉರಿಯೂತ ನಿವಾರಕ
ಅಗಸೆ ಬೀಜದಲ್ಲಿ ಆಂಟಿ ಇನ್ಫ್ಲಮೇಟರಿ ಅಂಶ ಹೆಚ್ಚಿರುತ್ತದೆ. ನಮ್ಮ ತ್ವಚೆಗೆ ಕಿರಿಕಿರಿಯಾದಾಗ ಅಥವಾ ಕೆಂಪು ಗುಳ್ಳೆಗಳಾದಾಗ ಅದನ್ನು ನಿವಾರಿಸುವುದಕ್ಕೆ ತುಂಬಾನೇ ಸಹಾಯಕಾರಿ ಮಾತ್ರವಲ್ಲದೆಮೊಡವೆ ಪೀಡಿತ ಚರ್ಮಕ್ಕೆ ಅವು ಪ್ರಯೋಜನಕಾರಿಯಾಗುವಂತೆ ಮಾಡುತ್ತದೆ.
ಆಂಟಿ ಏಜಿಂಗ್
ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುವಂತಹ ಅಗಸೆ ಬೀಜ ತ್ವಚೆಯಲ್ಲಿ ಇರುವಂತಹ ಸುಕ್ಕುಗಳನ್ನ, ಫೈನ್ ಲೈನ್ಸ್ ನ ಕಡಿಮೆ ಮಾಡುತ್ತದೆ ಹಾಗೂ ಹಾಗೂ ಎಂಗ್ ಆಗಿ ಕಾಣುವಂತೆ ಮಾಡುತ್ತದೆ.

ಅಗಸೆ ಬೀಜದಿಂದ ಕೂದಲಿಗೆ ಆಗುವ ಪ್ರಯೋಜನಗಳು
ಡ್ಯಾಂಡ್ರಫ್
ಹೆಚ್ಚು ಜನಕ್ಕೆ ಡ್ಯಾಂಡ್ರಫ್ ಸಮಸ್ಯೆ ಇದೆ ಇದರಿಂದ ಕೂದಲು ಉದುರುವುದು ಕೂಡ ಜಾಸ್ತಿ. ಇನ್ನು ಅಗಸೆ ಬೀಜದಲ್ಲಿರುವಂತ ಒಮೆಗಾ ೩ ಫ್ಯಾಟಿ ಆಸಿಡ್ ಹಾಗೂ ಆಂಟಿ ಇನ್ಫ್ಲಾಮೇಟರಿ ಅಂಶದಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ . ಹಾಗೂ ಸ್ಕಾಲ್ಪ್ ಅಲ್ಲಿ ಆಗುವಂಥ ಕಿರಿಕಿರಿಯನ್ನ ನಿವಾರಣೆ ಮಾಡುತ್ತದೆ.
ಕೂದಲ ಬೆಳವಣಿಗೆ
ವಾರಕ್ಕೆ ಒಮ್ಮೆಯಾದರೂ ನಿಮ್ಮ ಕೂದಲಿಗೆ ಅಗಸೆ ಬೀಜದ ಮಾಸ್ಕ್ ಅನ್ನ ಹಾಕುವುದರಿಂದ ಕೂದಲ ಬೆಳವಣಿಗೆ ಉತ್ತಮ. ಹೇರ್ ಫಾಲ್ ಸಮಸ್ಯೆ ನಿವಾರಣೆಯಾಗಿ ದಟ್ಟವಾದ ಕೂದಲು ನಿಮ್ಮದಾಗುತ್ತದೆ.

ಕೂದಲ ಪೋಷಣೆ
ಅಗಸೆ ಬೀಜಗಳು ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇದು ಕೂದಲನ್ನು ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
ಬಳಸುವ ವಿಧಾನ
- ಒಂದೆರಡು ಟೇಬಲ್ ಸ್ಪೂನ್ ಅಷ್ಟು ಅಗಸೆ ಬೀಜವನ್ನ ಒಂದು ಲೋಟದಷ್ಟು ನೀರಲ್ಲಿ ಚೆನ್ನಾಗಿ ಕುದಿಸಿ, ಜಲ್ ರೂಪಕ್ಕೆ ಬಂದ ಮೇಲೆ ಅದನ್ನು ತಣ್ಣಗಾಗಲು ಬಿಡಿ. ಬಳಿಕ ನಿಮ್ಮತ್ವಚಿಕೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಫೇಸ್ ವಾಶ್ ಮಾಡಿ.

- ಇನ್ನು ಕೂದಲಿಗಾದರೆ ಒಂದು ಟೇಬಲ್ ಸ್ಪೂನ್ ಅಷ್ಟು ಅಗಸೆ ಬೀಜವನ್ನ ನೀವು ಬಳಸುವಂತಹ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ ಬೆಚ್ಚಿಗಾದ ಮೇಲೆ ನಿಮ್ಮ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಹಾಗೂ ಮೇಲ್ಕಂಡ ಸಮಸ್ಯೆಗಳು ನಿವಾರಣೆಯಾಗುತ್ತದೆ.