ಇಂದು ಮೌನಿ ಅಮಾವಾಸ್ಯೆಯ ಹಿನ್ನಲೆ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪುಣ್ಯ ಸ್ನಾನಕ್ಕೆ (Holy dip) ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಇಂದಿನ ಅಪೂರ್ವ ಪುಣ್ಯ ಸ್ನಾನದಲ್ಲಿ ಭಾಗಿಯಾಗಲು ಬಂದ 10 ಮಂದಿ ಭಕ್ತರು ಜನಜಂಗುಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಸೀರಿಯುವುದರಿಂದ ನೂಕು ನುಗ್ಗಲು, ಕಾಲ್ತುಳಿತ ಉಂಟಾಗಿದ್ದು ಈ ವೇಳೆ ಸುಮಾರು 10 ಮಂದಿ ಸಾವಿಗೀಡಾಗಿದ್ದಾರೆ.
ಈಗಾಗ್ಲೇ ಏನೆಲ್ಲ ಮುನ್ನೆಚ್ಚರಿಕ ಕ್ರಮ ಕೈಗೊಂಡರು ಕೂಡ ಈ ದುರಂತ ನಡೆದಿರುವುದು ವಿಪರಿಯಸ. ಮೊನ್ನೆಯಿಂದಲೇ ಉತ್ತರ ಪ್ರದೇಶ ಸರ್ಕಾರ ಪ್ರಯಾಗರಾಜ್ ನಲ್ಲಿ ವಾಹಲ ರಹಿತ ವಲಯ ಘೋಷಣೆ ಮಾಡಿ ಅಗತ್ಯ ಮುನ್ನೆಚ್ಚರಿಕ ಕ್ರಮ ಕೈಗೊಂಡಿತ್ತು. ಹೀಗಿದ್ದರೂ ಈ ದುರಂತ ಸಂಭವಿಸಿದ್ದು ದುರದೃಷ್ಟಕರ.