ರಾಮನಗರ: ಸ್ನೇಹಿತರೆಲ್ಲ ಸೇರಿ ಪ್ರವಾಸಕ್ಕೆಂದು ತೆರಳಿ ಮಸಣ ಸೇರಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಈ ಘಟನೆ ಮೇಕೆದಾಟು (Mekedatu) ಹತ್ತಿರದ ಸಂಗಮದ ಕಾವೇರಿ ನದಿಯಲ್ಲಿ (Cauvery river) ನಡೆದಿದೆ. ಪ್ರವಾಸಕ್ಕೆಂದು ಒಟ್ಟು 12 ಜನ ಸ್ನೇಹಿತರು ತೆರಳಿದ್ದರು. ಈ ವೇಲೆ ಈಜಲು ಹೋಗಿ ಐವರು ಸಾವನ್ನಪ್ಪಿದ್ದಾರೆ. ಹರ್ಷಿತಾ (20), ಅಭಿಷೇಕ್ (20), ತೇಜಸ್ (21), ವರ್ಷ (20) ಹಾಗೂ ನೇಹಾ (19) ಎಂದು ಗುರುತಿಸಲಾಗಿದೆ. ಇನ್ನುಳಿದ 7ಮಂದಿ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಸಾವನ್ನಪ್ಪಿದವರೆಲ್ಲ ಬೆಂಗಳೂರು ಮೂಲದವರು ಎನ್ನಲಾಗಿದೆ. ಇವರೆಲ್ಲ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಎಲ್ಲರೂ ಸೇರಿ ಪ್ರವಾಸಕ್ಕೆಂದು ಬಂದಿದ್ದಾರೆ. ಈ ವೇಳೆ ನೀರಿನಲ್ಲಿ ಕೆಲವರು ಆಟವಾಡಿದ್ದಾರೆ. ಆದರೆ, ಈ ವೇಳೆ ನದಿಯ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೊಲೀಸರು ನೀರಿನಿಂದ ಹೊರಗೆ ತೆಗೆದಿದ್ದಾರೆ. ಈ ಕುರಿತು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.