ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಇಂದು (ಸೋಮವಾರ) ನಡೆಯಲಿದ್ದು, ಇದರೊಂದಿಗೆ ಪಂಚರಾಜ್ಯಗಳ ಮತದಾನ ಪ್ರಕ್ರಿಯೆಗೆ ತೆರೆ ಇಂದು ಬೀಳಲಿದೆ.
ದೇಶಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆಯ ಕೊನೆಯ ಹಂತದ ಮತದಾನ ಉತ್ತರ ಪ್ರದೇಶದ 54 ಸ್ಥಾನಗಳಿಗೆ, ಇಂದು ನಡೆಯಲಿದೆ. ಯಾವ ಪಕ್ಷ ಗೆಲುವಿನ ನಗು ಬೀರುತ್ತದೆ ಎಂಬ ಕುತೂಹಲಕ್ಕೆ ಇದೇ ತಿಂಗಳು ಮಾರ್ಚ್ 10ಕ್ಕೆ ಉತ್ತರ ಸಿಗಲಿದೆ.

ಉತ್ತರ ಪ್ರದೇಶದ 403, ಉತ್ತರಾಖಂಡದ 70, ಪಂಜಾಬ್ 117, ಮಣಿಪುರ 60 ಮತ್ತು ಗೋಪಾದ 40 ಸ್ಥಾನಗಳು ಸೇರಿದಂತೆ 690 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫೆ.10ರಂದು ಆರಂಭವಾದ ಚುನಾವಣೆ ಮಾರ್ಚ್ 7ರ ಇಂದು ಮುಕ್ತಾಯಗೊಳ್ಳಲಿದೆ. ಎಲ್ಲಾ ರಾಜ್ಯಗಳ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.












