ನಾವೇ ಕೆಲಸ ಶುರು ಮಾಡಿದ್ದು, ಇನ್ನ ಒಂದು ವಾರ, 10 ದಿನಗಳಲ್ಲಿ ಕಾಮಗಾರಿ ಪೂರ್ಣ ಮುಗಿಯಲಿದೆ. 50 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲ. ಜೈಕಾ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ. 1.45ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಅಳವವಡಿಕೆ. 110 ಕಿಲೋ ಮೀಟರ್ ದೂರದ ಪೈಪ್ ಲೈನ್. 110 ಹಳ್ಳಿಗಳು ಹೊಸದಾಗಿ ಬೆಂಗಳೂರು ನಗರಕ್ಕೆ ಸೇರಿದೆ. ಇಲ್ಲಿವರೆಗೆ ನಾಲ್ಕು ಹಂತದಲ್ಲಿ ನೀರೊದಗಿಸಲಾಗ್ತಿತ್ತು. ಈ ಒಂದೇ ಹಂತದಲ್ಲಿ 775 ದಶಲಕ್ಷ ಲೀಟರ್ ಸಾಮರ್ಥ್ಯದ ನೀರೊದಗಿಸುವ ಯೋಜನೆ. ದೇಶದಲ್ಲಿ ನೀರಾವರಿಗಾಗಿ ತೆಗೆದುಕೊಂಡ ಹೊಸದಾದ ದೊಡ್ಡ ಯೋಜನೆ ಇದು.
ಬೆಂಗಳೂರಿಗೆ ನೀರಿನ ಸಮಸ್ಯೆ ಬಾರದಂತೆ ಕ್ರಮ. ಕಾವೇರಿ ಐದನೇ ಹಂತದ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲು ಸಿದ್ಧತೆ. ಬೆಂಗಳೂರನ್ನ ವಾಟರ್ ಸಪ್ ಪ್ಲೇಸ್ ಮಾಡಬೇಕು ಅನ್ನೋದು ನಮ್ಮ ಗುರಿ. ಒಳಚರಂಡಿಗೂ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಕಾಮಗಾರಿಯನ್ನ ಕಣ್ಣಲ್ಲಿ ನಾನೇ ನೋಡಬೇಕು ಅಂತಾ ಬಂದಿದ್ದೇನೆ.
ಎತ್ತಿನಹೊಳೆ ಯೋಜನೆ ಆಗೋದಿಲ್ಲ ಅಂತಿದ್ದರು. ಅದಕ್ಕೂ ಚಾಲನೆ ಕೊಡಲಾಗಿದೆ. ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕೂಡ ಅಲ್ಪಾವಧಿಯಲ್ಲೇ ದುರಸ್ತಿಯಾಗಿದೆ. ನಿನ್ನೆ ಸಿಎಂ, ನಾನು ಎಲ್ಲರೂ ಬಾಗಿನ ಅರ್ಪಿಸಿದ್ದೇವೆ. ವಿಪಕ್ಷಗಳು ಟೀಕೆ ಮಾಡ್ತಿದ್ದವು. ಟೀಕೆಗಳು ಸಾಯ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮ ಕೆಲಸಗಳು ಉಳಿಯುತ್ತಿವೆ.
ಈ ಯೋಜನೆಗೆ ಅಮಾವಾಸ್ಯೆ ನಂತರ ಉದ್ಘಾಟನೆ. ದಸರಾ ಸಮಯದಲ್ಲಿ ಒಳ್ಳೆಯ ಸಮಯ, ದಿನಾಂಕ, ಮುಹೂರ್ತ ನೋಡಿ ಉದ್ಘಾಟನೆ. ಈಗಾಗಲೇ ಬೆಂಗಳೂರಿನಲ್ಲಿ 10 ಲಕ್ಷ ಕನೆಕ್ಷನ್ ಇದೆ. ಈ ಯೋಜನೆಯಿಂದ ಹೊಸದಾಗಿ 4 ಲಕ್ಷ ಕನೆಕ್ಷನ್ ಗೆ ಸಿದ್ಧತೆ.
ಕಾವೇರಿ ಆರತಿ ವಿಚಾರ.
ನಮ್ಮ ನಿಯೋಗ ಹೋಗಿ ಬಂದಿದೆ ನಮ್ಮ ಭಕ್ತಿ, ಭಾವನೆ ವಿಚಾರ, ಗಂಗೆ ರೀತಿಯಲ್ಲಿ ಕಾವೇರಿಗೆ ಆರತಿ ನಡೆಯುತ್ತದೆ. ಕಾವೇರಿಗೆ ವಿಶೇಷ ರೂಪ ಕೊಡಬೇಕು. ನಾಲ್ಕು ಇಲಾಖೆ ಸೇರಿಕೊಂಡು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕೆ.ಆರ್.ಎಸ್ ಉದ್ಯಾವನವನ್ನ ಮೇಲ್ದರ್ಜೆಗೆ ಏರಿಸಬೇಕಿದೆ. ಕಾಟಾಚಾರಕ್ಕೆ ಕಾವೇರಿ ಆರತಿ ಮಾಡಲ್ಲ. ಕಾವೇರಿ ಆರತಿಗೆ ಆರಂಭದಲ್ಲೇ ಅಪಸ್ವರ ವಿಚಾರ.
ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.
ಅಪಸ್ಪರದಿಂದ ಬದ್ಧತೆ ಜಾಸ್ತಿ. ಮಳವಳ್ಳಿ, ಮದ್ದೂರು ಭಾಗದ ಕೆರೆಗಳು ತುಂಬದ ವಿಚಾರ ಇದಕ್ಕಾಗಿ ಒಂದು ಕಾನೂನು ತರುತ್ತೇವೆ. ಪಂಪ್ ಸೆಟ್ ಗಳನ್ನ ಎತ್ತಿಸುವ ಕೆಲಸ ಮಾಡುತ್ತೇವೆ. ನಾಲೆಗಳಿಗೆ ಹಾಕಿರುವ ಪಂಪ್ ಸೆಟ್ ಗಳ ತೆರವು ಮಾಡುತ್ತೇವೆ. ಮಂಡ್ಯ ಜಿಲ್ಲೆಯ ರೈತರಿಗೆ ಶಾಕ್ ನೀಡಿದ ಡಿಕೆಶಿ. ಧಾರ್ಮಿಕ ಕೇಂದ್ರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ವಿಚಾರ. ನೋಡ್ರಿ ಬೇರೆ ಪಕ್ಷಗಳು, ಸ್ವಾಮಿಜೀಗಳು ಹೇಳಬಹುದು. ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ. ಮೊದಲಿನಿಂದ ಇದೆ.
ಮೊದಲಿನಿಂದ ಒಂದು ಸಂಪ್ರದಾಯ ಇದೆ. ಖಾಸಗಿ ದೇವಸ್ಥಾನ ಮಾಡಿಕೊಳ್ಳಲಿ. ನಾನು ಲಡ್ಡು ತಿನ್ನುವವನೇ. ಪ್ರಸಾದ ಬಂದರೇ ತಿನ್ನುತ್ತೇನೆ. ಅದು ದೇವರ ಪ್ರಸಾದ ಅಂತಾನೇ ಭಾವಿಸಿ ಸ್ವೀಕಾರ. ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ಮಠಾಧೀಶರ ಅಭಿಪ್ರಾಯ ವಿಚಾರ.
ನೋಡ್ರಿ ಬೇರೆ ಪಕ್ಷಗಳು, ಸ್ವಾಮಿಜೀಗಳು ಹೇಳಬಹುದು. ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ. ಮೊದಲಿನಿಂದಲೂ ಇದೆ. ಮೊದಲಿನಿಂದ ಒಂದು ಸಂಪ್ರದಾಯ ಇದೆ. ಖಾಸಗಿ ದೇವಸ್ಥಾನ ಮಾಡಿಕೊಳ್ಳಲಿ. ನಾನು ಲಡ್ಡು ತಿನ್ನುವವನೇ. ಪ್ರಸಾದ ಬಂದರೇ ತಿನ್ನುತ್ತೇನೆ ಅದು ದೇವರ ಪ್ರಸಾದ.