ಮೊದಲ ಮಹಿಳಾ ರಾಷ್ಟ್ರಪತಿ, ಮಹಿಳಾ ಪ್ರಧಾನಿ, ಮಹಿಳಾ ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ ನವರೇ ಎಂಬುದು ಬಿಜೆಪಿಗೆ ನೆನಪಿರಲಿ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿಗೆ ಟಾಂಗ್ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮೊದಲ ಮಹಿಳಾ ರಾಷ್ಟ್ರಪತಿ, ಮಹಿಳಾ ಪ್ರಧಾನಿ, ಮಹಿಳಾ ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ ನವರೇ ಎಂಬುದು ಬಿಜೆಪಿಗೆ ನೆನಪಿರಲಿ. ಅದೆಲ್ಲಾ ಸರಿ ಆದಿವಾಸಿ ನಾಯಕಿಯಾದ ಮುರ್ಮು ಅವರನ್ನು ವನವಾಸಿ ನಾಯಕಿ ಎಂದು ಕರೆಯುವುದೇಕೆ? ಆದಿವಾಸಿ ಜನಾಂಗದ ಮೂಲ ಪರಂಪರೆ ಅಳಿಸಿ ಹಾಕುವ ಹುನ್ನಾರವೇ? ಆದಿವಾಸಿಗಳೆಂದು ಕರೆಯಲು ಏನು ಸಮಸ್ಯೆ ಬಿಜೆಪಿಗರೇ? ಎಂದು ಪ್ರಶ್ನಿಸಿದೆ.