ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಎದುರು ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6ನೇ ಆರೋಪಿಯನ್ನು ಬಂಧಿಸಿದ್ದಾರೆ.
![](https://pratidhvani.com/wp-content/uploads/2024/05/salman-khan-1-1-1-1.webp)
ಆರೋಪಿಯನ್ನ ಹರ್ಪಾಲ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಪೊಲೀಸರು ಮೊಹಮ್ಮದ್ ರಫೀಕ್ ಚೌಧರಿ (Mohammed Rafique Chaudhary) ಹೆಸರಿನ 5ನೇ ಆರೋಪಿಯನ್ನು ರಾಜಸ್ಥಾನದ ನಾಗೌರ್ ನಲ್ಲಿ ಬಂಧಿಸಿದ್ದರು.
![](https://pratidhvani.com/wp-content/uploads/2022/07/ei3ojfgg_salman-khan-_625x300_15_July_22.jpg)
ಈ ಇಬ್ಬರೂ ಕೂಡ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.