
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟ ತೋರುವವರ ಸಂಖ್ಯೆ ಹೆಚ್ಚಾಗ್ತಿದೆ. ಪಟಾಕಿ ಕಿಡಿ ಹಾರಿದ್ದ ಕೋಪಕ್ಕೆ ನಡುರೋಡಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕಿದ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.

ಭಾನುವಾರ ರಾತ್ರಿ ಷರೀಫ್ ಎಂಬಾತ ಮೊನ್ನೆ ರಾತ್ರಿ 11 ಘಂಟೆಯ ಸುಮಾರಿಗೆ ದೊಡ್ಡರಾಮಣ್ಣ ಬಡಾವಣೆ ಬಳಿಯಲ್ಲಿ ಹೋಗುವಾಗ ದಾರಿಯಲ್ಲಿ ಸ್ಥಳೀಯರಯ ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ಸಣ್ಣ ಕಿಡಿಯೊಂದು ಷರೀಫ್ ಗೆ ಹಾರಿದೆ. ಇದರಿಂದ ಸ್ಥಳದಲ್ಲಿ ಸ್ಥಳೀಯರಿಗೂ ಷರೀಫ್ ಗೂ ಗಲಾಟೆಯಾಗಿದೆ. ಬಳಿಕ ಮನೆಗೆ ತೆರಳಿದ್ದ ಷರೀಫ್ ವಾಪಸ್ ತನ್ನ ಸಹಚಚರನ್ನು ಮತ್ತು ಸಂಬಂಧಿಕರನ್ನು ಘಟನೆ ಸ್ಥಳಕ್ಕೆ ಕರೆತಂದಿದ್ದ. ಈ ವೇಳೆ ಮಾರಕಾಸ್ತ್ರಗಳ ಜೊತೆ ಬಂದ ಷರೀಫ್ ಮತ್ತು ಸಹಚರರು ಸ್ಥಳೀಯರಿಗೆ ಬೆದರಿಸಿ ಕೆಲವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ ನಾಲ್ಕೈದು ಜನರ ಈ ಆಟಾಟೋಪ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಪೊಲೀಸರಿಗೂ ಮುಟ್ಟಿದೆ.
ವಿಚಾರ ತಿಳಿದ ತಕ್ಷಣ ಕೇಸ್ ದಾಖಲಿಸಿ ತನಿಖೆಗೆ ಇಳಿದ ಹೆಣ್ಣೂರು ಪೊಲೀಸರು ಅಮೀಮ್ ಶರೀಫ್, ಸೈಯದ್ ಖಾದರ್, ಸೈಯದ್ ಅರ್ಭಾಜ್ ಎಂಬುವರನ್ನ ಬಂಧಿಸಿ ಜೈಲಿಗಟ್ಟಿದ್ದು, ಉಳಿದ ಇಬ್ಬರಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ತನಿಖೆ ವೇಳೆ ಗಲಾಟೆ ವಿಚಾರದ ನೆಪದಲ್ಲಿ ಏರಿಯಾದಲ್ಲಿ ಹವಾ ಮೇಂಟೇಂನ್ ಮಾಡಲು ಈ ಆರೋಪಿಗಳು ಲಾಂಗ್ ಹಿಡಿದು ಓಡಾಟ ನಡೆಸಿರೋದು ಗೊತ್ತಾಗಿದೆ. ಸದ್ಯ ಪೊಲೀಸರು
ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮೂವರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.
