ಮಹಾರಾಷ್ಟ್ರದಲ್ಲಿ (Maharashtra) ಸದ್ಯದ ಮಟ್ಟಿಗೆ ಎರಡು ವಿಚಾರಗಳ ಕುರಿತು ಬಹಳ ದೊಡ್ಡ ಮಟ್ಟದ ಚರ್ಚೆಯಾಗುತ್ತದೆ ಒಂದು ಅಲ್ಲಿನ ರಾಜಕೀಯ ವ್ಯವಸ್ಥೆ (political system) ಮತ್ತೊಂದು ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋಮು ಸಂಘರ್ಷ (communal violence)., ಇತ್ತೀಚಿಗೆ ಕೊಲ್ಲಾಪುರದಲ್ಲಿ ಬಹಳ ದೊಡ್ಡ ಮಟ್ಟದ ಕೋಮು ಸಂಘರ್ಷ ನಡೆದಿತ್ತು ಇದನ್ನ ಹತ್ತಿಕ್ಕುವಲ್ಲಿ ಪೊಲೀಸರು (Police) ವಿಫಲರಾಗಿದ್ದರು. ಆದರೆ ಈಗ ಎಚ್ಚೆತ್ತಿರುವ ಪೊಲೀಸರು ಸೂಕ್ಷ್ಮ ಪ್ರಜ್ಞಾವಂತರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಇದರ ಬೆನ್ನೆಲೆ ಇದೀಗ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ
ಹೌದು.. ಮೊಘಲ್ (moghal) ದೊರೆ ಔರಂಗಜೇಬ್‌ನನ್ನು (Aurangzeb) ವೈಭವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ ಆರೋಪದ ಮೇಲೆ ಇದೀಗ 14 ವರ್ಷದ ಬಾಲಕನ ಮೇಲೆ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಸುದ್ದಿಯಲ್ಲಿದ್ದಾರೆ. ರಜೆಯ ಮೇಲೆ ಮುಂಬೈಗೆ (Mumbai) ಬಂದಿದ್ದ ಬಾಲಕ, ಮೊಘಲ್ ದೊರೆಯನ್ನ ವೈಭವೀಕರಿಸಿದ್ದಾನೆ ಎನ್ನುವ ಮಾತುಗಳು ಕೇಳಿ ಬಂದಿವೆ ಈ ವೇಳೆ ತನ್ನ ಪೋಸ್ಟ್‌ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅದನ್ನು ಅಳಿಸಿ ಕ್ಷಮೆಯಾಚಿಸುವ ವಿಡಿಯೋ ಕೂಡ ಅಪ್‌ಲೋಡ್ ಮಾಡಿ ಇದೀಗ ಈ ಬಾಲಕ ಸುದ್ದಿಯಲ್ಲಿದ್ದಾನೆ.
ಇನ್ನು ಕಳೆದ ಒಂದು ವಾರಗಳಿಂದ ಮಹರಾಷ್ಟ್ರ ಕೋಮು ಸಂಘರ್ಷದ ಬೇಗೆಯಲ್ಲಿ ಹೊತ್ತಿ ಉರಿಯುತ್ತಿದೆ. ಇತ್ತೀಚೆಗೆ ಅಹ್ಮದ್‌ನಗರದಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್‌ನ ಫೋಟೋಗಳನ್ನು ಮತ್ತು ಮೈಸೂರು ದೊರೆ ಅರಸನಾಗಿದ್ದ ಟಿಪ್ಪು ಸುಲ್ತಾನ್ ಚಿತ್ರವನ್ನು ಕೆಲವು ಯುವಕರು ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೇ, ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಆಡಿಯೋ ಸಂದೇಶದ ಜೊತೆಗೆ ಸ್ಟೇಟಸ್ ಕೂಡ ಹಾಕಿದ್ದರು. ಈ ವಿಷಯ ಬೃಹತ್ ಕೋಮು ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟತ್ತು, ಇದಾದ ಬಳಿಕ ಕೊಲ್ಹಾಪುರದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಇನ್ನು ಈ ಬಗ್ಗೆ ಮಾತನಾಡಿದ ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನಂದಕುಮಾರ್ ಠಾಕೂರ್ ಸ್ಪಷ್ಟನೆಯನ್ನ ನೀಡಿದ್ದಾರೆ, ” ಈ ಘಟನೆಗೆ ಸಂಬಂಧಿಸಿದಂತೆ ಕಳೆದ ರಾತ್ರಿ ಬಾಲಕನ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದೇವೆ. ಶಾಲಾ ರಜೆಯಲ್ಲಿ ಈ ಬಾಲಕ ಮುಂಬೈಗೆ ಬಂದಿದ್ದಾನೆ. ತಾನು ಹಾಕಿದ ಪೋಸ್ಟ್ ಆ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಯಿತು ಎಂಬುವುದನ್ನ ಆ ಬಾಲಕ ಅರ್ಥ ಮಾಡಿಕೊಂಡಿದ್ದಾನೆ, ಅದಾದ ಬಳಿಕ ಬಾಲಕ ಆ ಸಂದೇಶವನ್ನು ಅಳಿಸಿ ಹಾಕಿದ್ದಾನೆ. ಇದಾದ ನಂತರ ತನ್ನ ಈ ನಿಲುವಿನಿಂದ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುವೆ ಎಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ ಅಂತ ಹೇಳಿದ್ದಾರೆ. ಸದ್ಯ ಬಾಲಕನನ್ನ ಇದೀಗ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಅಂತ ಹೇಳಿದ್ದಾರೆ.