ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Winter session) ನಡೆಯುತ್ತಿದ್ದು ಇದೇ ವೇಳೆ ಪಂಚಮಸಾಲಿ ಸಮುದಾಯದ ಹಲವರು 2ಎ ಮೀಸಲಾತಿ ಆಗ್ರಹಿಸಿ ಸಾವಿರಾರು ಜನ ಸೇರಿ ಪ್ರತಿಭಟನೆಗೆ ಮುಂದಾಗಿದ್ದರು.
ಈ ಪ್ರತಿಭಟನೆ ನಿನ್ನೆ ತೀರ್ವ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಲು ಮುಂದಾದರು. ಈ ವೇಳೆ ನಡೆದ ಕಲ್ಲು ತೂರಾಟ ನಡೆದ ಕಾರಣ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 17 ಜನರಿಗೆ ಗಾಯಗಳಾಗಿದೆ.
ಕಲ್ಲು ತೂರಾಟದಿಂದ ಸರ್ಕಾರಿ ವಾಹನಗಳು & ಪೊಲೀಸ್ ವಾಹನಗಳು ಕೂಡ ಜಖಂಗೊಂಡಿದ್ದವು. ಈ ಬಗ್ಗೆ ಪೊಲೀಸರು ಪ್ರತಿಭಟನಾಕಾರರು ಪ್ರಕರಣ ದಾಖಲಿಸಿದ್ದಾರೆ.