ಹಿಂದೂ ಧಾರ್ಮಿಕ ಭಾವನೆಗಳೊಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ದ ಮಧ್ಯಪ್ರದೇಶದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿಗೆ ಹಿಂದೂ ದೇವತೆ ಕಾಳಿ ಮಾತೆಯ ಪೋಸ್ಟರ್ ವಿವಾದವನ್ನ ಹುಟ್ಟುಹಾಕಿತ್ತು.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ನನ್ನಗೆ ಕಾಳಿ ಮಾತೆಯು ಮಾಂಸಹಾರ ಹಾಗೂ ಮಧ್ಯ ಸೇವಿಸುವ ದೇವತೆಯಾಗಿದ್ದಾಳೆ ನಿಮ್ಮಗೆ ಬೇಕಾಗಿದ್ದನ್ನು ನೀವು ಊಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ವಿವಾದದ ಜ್ವಾಲೆ ಹೆಚ್ಚುವಂತೆ ಮಾಡಿದ್ದಾರೆ.
TMC leader Mahua Moitra disrespected Hindu goddess Maa Kali!
— BJP Bengal (@BJP4Bengal) July 5, 2022
How much more will you disgrace the culture of Bengal, Hindu deities for appeasement politics? pic.twitter.com/VgyCCK3VnV
ಮಹುವಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಆಡಳಿತರೂಢ ಟಿಎಂಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ ಮತ್ತು ಮೊಯಿತ್ರಾರನ್ನು ಬಂಧಿಸುವಂತೆ ಆಗ್ರಹಿಸಿ ಕೋಲ್ಕತದ ಬೌಬಜಾರ್ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದೆ.
ಇನ್ನು ಬಿಜೆಪಿ ಆರೋಪಕ್ಕೆ ಟ್ವೀಟ್ ಮಾಡಿರುವ ಮಹುವಾ ಮೋಯಿತಾ ನಾನು ಕಾಳಿ ಮಾತೆಯ ಪರಮ ಆರಾಧಕಿ ನಿಮ್ಮ ಮೂಡತೆ, ಗೂಂಡಾ ವರ್ತನೆಗೆ ನಾನು ಹೆದರುವವಳಲ್ಲ ಸತ್ಯೆಕ್ಕೆ ಬೆಂಬಲ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ.
Bring it on BJP!
— Mahua Moitra (@MahuaMoitra) July 6, 2022
Am a Kali worshipper. I am not afraid of anything. Not your ignoramuses. Not your goons. Not your police. And most certainly not your trolls.
Truth doesn’t need back up forces.