ಸಚಿವ ಸತೀಶ್ ಜಾರಕಿಹೊಳಿ (satish jarakiholi) ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (priyanka jarakiholi) ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಅಂತಿಮವಾಗಿದೆ.
ಈ ಹಿಂದೆಯೇ ಸಿಎಂ ಸಿದ್ದರಾಮಯ್ಯ (siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (d k shivakumar) ಇಬ್ಬರೂ ಕೂಡ ಪ್ರಿಯಾಂಕಾ ಜಾರಕಿಹೊಳಿ ಅವರನ್ನೇ ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಸತೀಶ್ ಜಾರಕಿಹೊಳಿಗೆ ತಿಳಿಸಿದ್ರು.

ಮನೆಯಲ್ಲಿ ಒಂದು ಬಾರಿ ಮಾತನಾಡಿ ಅಂತಿಮವಾದ ನಿರ್ಣಯ ತಿಳಿಸುವುದಾಗಿ ಹೇಳಿದ್ದ ಸಚಿವ ಸತೀಶ್ ಜಾರಕಿಹೊಳಿ, ಈಗ ಅಧಿಕೃತವಾಗಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನೇ ಅಭ್ಯರ್ಥಿ ಮಾಡಲು ನಿರ್ಧರಿಸಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆಯಿಂದ ಹೊಸ ಸಂಚಲನ
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಫರ್ಧೆಯಿಂದ ಇಡೀ ಬೆಳಗಾವಿ ರಾಜಕಾರಣದಲ್ಲೇ ಹೊಸ ಸಂಚಲನ ಮೂಡಿದೆ. ಯುವಕರು ಖೋಟಾ, ಜಾರಕಿಹೊಳಿ ಕುಟುಂಬದ ಕುಡಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯ ಎಲ್ಲಕ್ಕಿಂತ ಹೆಚ್ಚು ಕುಟುಂಬದ ವರ್ಚಸ್ಸು. ಇದೆಲ್ಲಾ ಒಂದೆಡೆ ಸೇರಿ ಬೆಳಗಾವಿ ರಾಜಕಾರಣದಲ್ಲೇ ಲೆಕ್ಕಾಚಾರಗಳು ತಲೆಕೆಳಗಾಗಿಸಿದೆ.
ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸೆಡ್ಡು ಹೊಡೆಯಲು ಪ್ರಿಯಾಂಕಾ ಜಾರಕಿಹೊಳಿ ಮುಂದಾಗಿದ್ದು, ಈಗ ಆಖಾಡ ರಂಗೇರಿದೆ.
#karnataka #loksabhaelection #jatishjarakiholi #priyankajarakiholi #congress