ಬಿಜೆಪಿ (Bjp) ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿದ್ದ ಕ್ಷೇತ್ರಗಳ ಪೈಕಿ ಚತ್ರದುರ್ಗ (chitradurga) ಕೇತ್ರವೂ ಕೂಡ ಒಂದು. ಚಿತ್ರದುರ್ಗದಿಂದ ಸಾಕಷ್ಟು ಆಕಾಂಕ್ಷಿಗಳಿದ್ದರು ಮತ್ತು ಹಾಲಿ ಸಂಸದ ನಾರಾಯಣ ಸ್ವಾಮಿ (narayana Swamy) ಕೂಡ ಸ್ಪರ್ಧೆ ಮಾಡೋ ವಿಚಾರದಲ್ಲಿ ಆಸಕ್ತಿ ಹೊಂದಿರಲಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಆರ್‌ಎಸ್ಎಸ್ (Ass, Bsy) ಮತ್ತು ಬಿಎಸ್‌ವೈ ಇಬ್ಬರ ಅಭಿಪ್ರಾಯವನ್ನೂ ಪಡೆದು, ಆಂತರಿಕ ಸರ್ವೆಯನ್ನೂ ಆಧರಿಸಿ ಹೈಕಮ್ಯಾಂಡ್ (HIGH COMMAND) ಒಂದು ನಿರ್ಧಾರಕ್ಕೆ ಬರಬೇಕಿತ್ತು. ಕೊನೆಗೂ ಆ ನಿರ್ಧಾರ ಪ್ರಕಟವಾಗಿದೆ.

ಕೋಟೆನಾಡು ಚಿತ್ರದುರ್ಗದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ (Govinda karajola) ಅವರ ಹೆಸರನ್ನು ಹೈಕಮ್ಯಾಂಡ್ ಫೈನಲ್ ಮಾಡಿದೆ. ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮೀಸಲು ಕ್ಷೇತ್ರ ಚಿತ್ರದುರ್ಗಕ್ಕೆ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಗೋವಿಂದ ಕಾರಜೋಳ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸೋದ್ರ ಮೂಲಕ ಬಿಎಸ್‌ವೈ (Bs yediyurappa) ಕೂಡ ಗೋವಿಂದ ಕಾರಜೋಳ ಪೆ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು. ಅಂತಿಮಾವಾಗಿ ಅಚರ ಹೆಸರನ್ನೇ ಬಿಜೆಪಿ ಘೋಷಿಸಿದೆ.

ಇದೀಗ ಹಾಲಿ ಸಂಸದ ನಾರಾಯಣ ಸ್ವಾಮಿಯವರ ಮುಂದಿನ ನಡೆ ಏನು ಎಂಬುದು ಕಾದುನೋಡಬೇಕಿದೆ. ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ, ಪಕ್ಷದ ವಿರುದ್ಧವೇ ಅಸಮಾಧಾನದ ಮಾತುಗಳನ್ನ ಬಹಿರಂಗವಾಗೇ ಮಾತನಾಡುತ್ತ ಬಂದಿದ್ದಾರೆ ಎಂಬ ಆರೋಪವೂ ಕೂಡ ಅವರ ಮೇಲಿತ್ತು, ಜೊತೆಗೆ ತಾನೂ ಕಣದಲ್ಲಿದ್ದೇನೆ ಎಂದು ನಾರಾಯಣಸ್ವಾಮಿ ಬಲವಾಗಿ ಪ್ರದಿಪಾದಿಸಿರಲಿಲ್ಲ ಕೂಡ. ಹಾಗಾಗಿ ಹಾಲಿ ಸಂಸದರನ್ನ ಪಕ್ಕಕ್ಕಿಟ್ಟು ಗೋವಿಂದ ಕಾರಜೋಳಗೆ ಟಿಕೆಟ್ ನೀಡಲಾಗಿದ್ದು, ನಾರಾಯಣ ಸ್ವಾಂಇ ಬೆಂಬಲ ಘೋಷಿಸುತ್ತಾರಾ ಅಥವಾ ಮುಂದೇನು ಎಂಬುದನ್ನ ಕಾದು ನೋಡಬೇಕಿದೆ.












