ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷಗಳು ಬಾಕಿ ಇರುವ ಸಮಯದಲ್ಲಿ ಕಾಂಗ್ರೆಸಿನಲ್ಲಿ ಬಣ ರಾಜಕೀಯ ಜೋರಾದಂತೆ ಕಾಣಿಸುತ್ತಿದ್ದೆ.
ಮಂಗಳವಾರ ಬೆಂಗಳೂರಿನ ಅರಮನೆಮೈದಾನದ ನಲಪಾಡ್ ಪೆವಿಲಿಯನ್ನಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ಗೆ ಆಹ್ವಾನ ನೀಡದಿರುವುದು ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ.
ಇಷ್ಟು ದಿನ ದಲಿತ ಮತ್ತು ಹಿರಿಯ ಕಾಂಗ್ರೆಸ್ ನಾಯಕರ ನಡುವೆ ಜೀವಂತವಾಗಿದ್ದ ಬಣ ರಾಜಕೀಯ ಇದೀಗ ಅಲ್ಪಸಂಖ್ಯಾತ ನಾಯಕರವರೆಗೂ ವಿಸ್ತರಿಸಿರುವುದು ಕಾಂಗ್ರೆಸ್ನ ಮತ್ತೊಂದು ಬಣ ರಾಜಕೀಯ ಎಲ್ಲೆಡೆ ಪ್ರಸಿದ್ದಿ ಪಡೆದಿದೆ.
ಶಾಸಕ ಹ್ಯಾರಿಸ್ ಮತ್ತು ಜಮೀರ್ ನಡುವೆ ಶುರುವಾಯ್ತ ಕೋಲ್ಡ್ ವಾರ್ !
ಇಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರವರ ನಡುವೆ ಬಣ ರಾಜಕೀಯದ ಹೆಸರಲ್ಲಿ ಕೋಲ್ಡ್ ವಾರ್ ಜೋರಾಗಿ ನಡೆದಿತ್ತು. ಇವರಿಬ್ಬರ ನಡುವೆ ಅಲ್ಲದೆ ಹಿರಿಯ ಕಾಂಗ್ರೆಸ್ ನಾಯಕರ ನಡುವೆಯೂ ಬಣ ರಾಜಕೀಯ ಈಗಲೂ ಸಹ ಜೀವಂತವಾಗಿದೆ.
ಇದೀಗ ಹಿರಿಯ ನಾಯಕರ ಬಣ ರಾಜಕೀಯವು ಕಾಂಗ್ರೆಸ್ನ ಸಣ್ಣ ಸಣ್ಣ ಘಟಕಗಳಿಗು ವಿಸ್ತರಾಣೆಯಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಶಾಸಕ ಹ್ಯಾರಿಸ್ ಮತ್ತು ಜಮೀರ್ ನಡುವಿನ ಕೋಲ್ಡ್ ವಾರ್, ಯುವ ಕಾಂಗ್ರೆಸ್ನಲ್ಲಿ ರಕ್ಷಾ ರಾಮಯ್ಯ ಮತ್ತು ನಲಪಾಡ್ ನಡುವಿನ ಕೋಲ್ಡ್ ವಾರ್.

ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನವನ್ನು ಶಾಸಕ ಜಮೀರ್ ತಮ್ಮ ಆಪ್ತ ಬೆಂಬಲಿಗನಿಗೆ ಕೊಡಿಸಲು ಪ್ರಯತ್ನಿಸಿದ್ದರು. ಅದನ್ನು ತಪ್ಪಿಸಿದ ಶಾಸಕ ಹ್ಯಾರಿಸ್ ತಮ್ಮ ಆಪ್ತ ಮಾಜಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಮೂಲಕ ಹ್ಯಾರಿಸ್ ಜಮೀರ್ ವಿರುದ್ದದ ಹಳೇ ಸೇಡನ್ನು ತೀರಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರ ನೇಮಕವನ್ನು ಸ್ವತಃ ಹ್ಯಾರಿಸ್ರವರೇ ಇತ್ತೀಚಿಗೆ ಸುದ್ಧಿಘೋಷ್ಠಿಯನ್ನ ನಡೆಸಿ ಕಾರ್ಯಕ್ರಮದ ದಿನಾಂಕವನ್ನ ಸಹ ಘೋಷಿಸಿದ್ದರು.
ಹೌದು, ಈ ಹಿಂದೆ ಕರ್ನಾಟಕದಲ್ಲಿ 2018ರಲ್ಲಿ ಭಾರೀ ವಿವಾದವೊಂದು ಸದ್ದು ಮಾಡಿತ್ತು. ರಾಜ್ಯ ರಾಜಕೀಯದಲ್ಲಿ ಬರೀ ಸಂಚಲನ ಮೂಡಿಸಿತ್ತು. ಅದೇ, ಶಾಸಕ ಹ್ಯಾರಿಸ್ರವರ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಪಬ್ ಒಂದರಲ್ಲಿ ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಶಿಕ್ಷಯನ್ನು ಸಹ ಅನುಭವಿಸಿದ್ದರು.
ಈ ವಿವಾದದಿಂದ ತಮ್ಮ ಹೆಸರು ಸಹ ತಳುಕು ಹಾಕಿಕೊಂಡಿತ್ತು ಅದರಿಂದ ಹೊರಬರಲು ಮತ್ತು ಮಗನನ್ನು ಹೊರತರಲು ಶಾಸಕರು ಇನ್ನಿಲ್ಲದ ಪ್ರಯತ್ನವನ್ನ ಮಾಡಿದ್ದರು ಸಹ ಅದು ಫಲ ಕೊಡಲಿಲ್ಲ. ತಮ್ಮ ಮಗ 115 ದಿನಗಳ ಸೆರೆವಾಸ ಅನುಭವಿಸಿದ ನಂತರ ಹೊರ ತರಲು ಯಶಸ್ವಿಯಾಗಿದ್ದರು.
ಈ ಘಟನೆಯ ನಂತರ ಕ್ರಮೇಣವಾಗಿ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಇಮೇಜ್ ಡ್ಯಾಮೇಜ್ ಆಗುವುದನ್ನು ತಡೆಯಲು ಹ್ಯಾರಿಸ್ರಿಂದ ಅಂತರವನ್ನು ಕಾಯ್ದುಕೊಳ್ಳಲು ಶುರು ಮಾಡಿದ್ದರು(ಸಿದ್ಧರಾಮಯ್ಯರನ್ನು ಒಳಗೊಂಡಂತೆ). ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ವರೆಗೂ ಸಹ ತಲುಪಿತ್ತು 2018ರಲ್ಲಿ ಹ್ಯಾರಿಸ್ರವರಿಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಹ ಕೈ ತಪ್ಪುವ ಹಂತದಲ್ಲಿತ್ತು. ಆದರೆ, ಹ್ಯಾರಿಸ್ರವರು ದೆಹಲಿಯಲ್ಲಿ ನಿರಂತರ ಲಾಬಿ ನಡೆಸಿದ ಕಾರಣ ಅವರಿಗೆ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿತ್ತು.
ಚುನಾವಣೆಯಲ್ಲ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿಯನ್ನ ಹಿಡಿಯಿತ್ತು. ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆಯಲು ಶ್ರಮಿಸಿದರು ಸಹ ಇವರ ಪಾಲಿಗೆ ಅದು ಫಲ ನೀಡಲಿಲ್ಲ. ಬದಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮಾಪ್ತ ಶಾಸಕ ಜಮೀರ್ಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಹ್ಯಾರಿಸ್‌ಗೆ ಕೈಕಮಾಂಡ್‌ನ ಹಿರಿಯ ನಾಯಕರು ಬಿಎಂಟಿಸಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಹ್ಯಾರಿಸ್‌ರನ್ನು ನೇಮಿಸುವಂತೆ ಆದೇಶಿಸಿತ್ತುಅದರಂತೆಯೇ ಹ್ಯಾರಿಸ್ ಅಧಿಕಾರ ಸ್ವೀಕರಿಸಿ ಕೇವಲ ಒಂದುವರೆ ತಿಂಗಳಾಗಿತ್ತಷ್ಟೇ ಆರಂಭದಲ್ಲಿ ಒಂದೆರಡು ಸಭೆ ನಡೆಸಿದ್ದ ಹ್ಯಾರಿಸ್ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದರು. ಹ್ಯಾರಿಸ್ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಅಷ್ಟರಲ್ಲಾಗಲೇ ಬಿಜೆಪಿ ಆಪರೇಷನ್ ಕಮಲದ ಮೂಲಕ ಇಡೀ ಸಮ್ಮಿಶ್ರ ಸರ್ಕಾರವನ್ನೇ ಪತನ ಮಾಡಿತ್ತು.
ಇದಾದ ಬಳಿಕ ಮೊದ ಮೊದಲು ಶಾಸಕ ಹ್ಯಾರಿಸ್ ಮತ್ತು ಜಮೀರ್ ನಡುವೆ ಎಲ್ಲವು ಸರಿ ಇದ್ದಂತೆ ಕಾಣುತ್ತಿತ್ತು. ಆದರೆ, ಬರು ಬರುತ್ತ ಇವರಿಬ್ಬರ ನಡುವೆ ಮುಸುಕಿನ ಗುದ್ದಾಟ ಶುರುವಾಯಿತು. ಅದು ಎಲ್ಲಿಯವರೆಗೆ ಎಂದರೆ 2019 ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಈ ಇಬ್ಬರು ನಾಯಕರು ಬೆಂಗಳೂರಿನಲ್ಲಿ ನಡೆದ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ(ಮುಖ್ಯವಾಗಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ) ಈ ಇಬ್ಬರು ನಾಯಕರು ಜಿದ್ದಿಗೆ ಬಿದ್ದವರಂತೆ ಅಲ್ಪಸಂಖ್ಯಾತರ ಮತಗಳ ಕ್ರೂಡೀಕರಣದಲ್ಲಿ ಬ್ಯುಸಿ ಆಗಿದ್ದರು. 2020-21 ನೇ ಸಾಲಿನಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಮೀರ್ ತಮ್ಮದೇ ಸಮುದಾಯದವರಾದ ನಲಪಾಡ್‌ಗೆ ಬೆಂಬಲಿಸುತ್ತಾರೆ ಎಂದು ಹ್ಯಾರಿಸ್ ಉಪೇಕ್ಷಿಸಿದ್ದರು ಆದರೆ, ಜಮೀರ್ ತಮ್ಮ ನಾಯಕರಾದ ಸಿದ್ದರಾಮಯ್ಯರ ಒಲವು (ರಕ್ಷಾ ರಾಮಯ್ಯ) ಯಾರ ಕಡೆ ಹೆಚ್ಚು ವ್ಯಕ್ತಪಡಿಸಿದ್ದರೋ ಅವರಿಗೆ ಜಮೀರ್ ಮತ್ತವರ ಬೆಂಬಲಿಗರು ಬೆಂಬಲಿಸಿದ್ದರು. ಇದು ಕೂಡ ಜಮೀರ್ ಮೇಲಿನ ಕೋಪ ಮತ್ತಷ್ಟು ಹೆಚ್ಚುತ್ತ ಹೋಯಿತ್ತು.

ಇಷ್ಟೇ ಅಲ್ಲದೆ ಜಮೀರ್ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ನಾಯಕನಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹೊರಟಿದ್ದಾರೆ. ಇತ್ತ ಹ್ಯಾರಿಸ್ ಕೂಡ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಮಗ (ನಲಪಾಡ್)ನ ಸದಾ ಒಂದಿಲ್ಲೊಂದು ವಿವಾದಗಳು ಅವರನ್ನು ಮಜುಗರಕ್ಕೀಡು ಮಾಡುತ್ತಿದೆ. ಇತ್ತ ಜಮೀರ್ ಅಹಮದ್ ರಾಜಕೀಯವಾಗಿ ಬೆಂಗಳೂರಿಗೆ ಸೀಮಿತವಾಗಿಲ್ಲ ಅವರನ್ನು ರಾಜ್ಯದಲ್ಲಿ ಎಲ್ಲೇ ಉಪಚುನಾವಣೆ ನಡೆದರು ಸಹ ಅಲ್ಪಸಂಖ್ಯಾತರ ಮತಗಳ ಕ್ರೂಡೀಕರಣಕ್ಕೆ ಜಮೀರ್ ಅವರು ಹೆಸರು ಸದಾ ಮುನ್ನೆಲೆಯಲ್ಲಿರುತ್ತದೆ.
ಅದಕ್ಕೆ ಉತ್ತಮ ಉದಾಹರಣೇ ಎಂದರೆ ರಾಜ್ಯದಲ್ಲಿ ಈ ವರ್ಷ (2021)ರಲ್ಲಿ ನಡೆದ ನಾಲ್ಲು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡರಲ್ಲಿ ಜಯ ಸಾಧಿಸಿರುವುದು. ಮಸ್ಕಿ ಮತ್ತು ಹಾನಗಲ್ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ವಿಭಜನೆ ಆಗದಂತೆ ಕ್ರೂಡೀಕರಿಸಿ ಕಾಂಗ್ರೆಸ್ಗೆ ಜಯ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು. ಹಾನಗಲ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದರು ಸಹ ಮತ ವಿಭಜನೆ ಆಗದಂತೆ ನೋಡಿಕೊಂಡಿದ್ದರು ಇದ್ದು ಜಮೀರ್ರವರು ರಾಜ್ಯ ನಾಯಕ ಎಂದು ಗುರುತಿಸಿಕೊಳ್ಳಲು ಮತ್ತಷ್ಟು ಸಹಕಾರಿಯಾಯಿತ್ತು.
ಇನ್ನು ಅಲ್ಪಸಂಖ್ಯಾತರ ಪದಗ್ರಹಣ ಸಮಾರಂಭದಲ್ಲಿ ಜಮೀರ್ರನ್ನು ಹೊರಗಿಟ್ಟು ಹ್ಯಾರಿಸ್ ಕಾರ್ಯಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಜಮೀರ್ ಬೆಂಬಲಿಗರು ಕಾರ್ಯಕ್ರಮ ಶುರುವಾದಾಗಿನಿಂದಲೂ ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗದರುವವರೆಗೂ ಘೋಷಣೆಗಳನ್ನು ಕೂಗುವುದನ್ನು ಅವರ ಬೆಂಬಲಿಗರು ನಿಲ್ಲಿಸಲಿಲ್ಲ.
ಈ ವೇಳೆ ಗರಂ ಆದ ಡಿ.ಕೆ.ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರವರು ಭಾಷಣ ಮಾಡುವಾಗ ಅಡ್ಡಿಪಡಿಸುತ್ತೀರಿ ನಿಮ್ಮಿಂದ ಅವರು ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದರು. ನೀವೆಲ್ಲ ನಮ್ಮ ಪಕ್ಷದವರ ನೀವೆಲ್ಲ ಪಕ್ಷ ದ್ರೋಹಿಗಳು ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆಗೆ ಯಾವತ್ತು ನಾವು ಆದೈತೆ ನೀಡಿಲ್ಲ. ನೀವು ಹೀಗೆ ಮಾಡಿದರೆ ಪಕ್ಷದಿಂದ ನಿಮ್ಮನೆಲ್ಲ ಉಚ್ಛಾಟಿಸುತ್ತೇನೆ ಎಂದು ಎಚ್ಚರಿಸಿದ ನಂತರ ಜಮೀರ್ ಬೆಂಬಲಿಗರು ಸುಮ್ಮನಾದರೂ.
ಸಿದ್ದರಾಮಯ್ಯ vs ಡಿ.ಕೆ.ಶಿ ನಡುವಿನ ಕೋಲ್ಡ್ ವಾರ್ ಗೆ ಬಲಿಯಾಗಲಿದ್ದಾರ ಅಲ್ಪಸಂಖ್ಯಾತ ನಾಯಕರು
ಕರ್ನಾಟಕದಲ್ಲಿ ಕೆಲವೇ ಕೆಲವು ಜನ ಅಲ್ಪಸಂಖ್ಯಾತ ನಾಯಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ತಾವುಗಳು ರಾಜ್ಯ ಮಟ್ಟದ ನಾಯಕರೆಂದು ಬಿಂಬಿಸಿಕೊಳ್ಳಲು ತಮ್ಮ ತಮ್ಮ ನಡುವೆಯೇ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದಾರೆ.

ಇತ್ತ ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದ್ದರು ಎಂಬಂತೆ ಈಗಾಗಲೇ ಕಾಂಗ್ರೆಸ್ನ ಇಬ್ಬರು ನಾಯಕರು ಮತ್ತವರ ಬೆಂಬಲಿಗರು ನಮ್ಮ ನಾಯಕರೇ ಮುಂದಿನ ಸಿಎಂ ಎಂದು ಹೇಳಿಕೊಂಡು ತಿರುಗಿತ್ತಿದ್ದಾರೆ.
ಇತ್ತ ಹಿರಿಯ ಕಾಂಗ್ರೆಸ್ ನಾಯಕರು ಸಹ ಇವರ ಕಿರಿಯ ನಾಯಕರುಗಳ ಬಣ ರಾಜಕೀಯಕ್ಕೆ ಬೆಂಬಲ ನೀಡಿದಂತೆ ಕಾಣುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ ಜಮೀರ್ರನ್ನು ಬೆಂಬಲಿಸಿದ್ದರೆ ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹ್ಯಾರಿಸ್ ಮತ್ತು ಅವರ ಪುತ್ರ ನಲಪಾಡ್ನನ್ನು ಬೆಂಬಲಿಸುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಹಲವು ಭಾರೀ ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಎಂದು ಶಾಸಕ ಜಮೀರ್ ಹೇಳಿದ್ದಾರೆ ಅದು ಎಷ್ಟರ ಮಟ್ಟಿಗೆ ಎಂದರೆ ಕಾಂಗ್ರೆಸ್ನ ಹೈಕಮಾಂಡ್ ಶಿಸ್ತು ಕ್ರಮದ ಎಚ್ಚರಿಕೆ ನೀಡುವವರೆಗೂ ಮುಂದುವರೆದಿತ್ತು.
ಹೀಗಾಗಿ ಈ ಇಬ್ಬರು ಹಿರಿಯ ನಾಯಕರ ಕೋಲ್ಡ್ ವಾರ್ ಸಮುದಾಯದ ಕಿರಿಯ ನಾಯಕರ ವರೆಗೂ ಬಂದು ನಿಂತಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.