ಬೆಂಗಳೂರಿನ ಆರ್.ಆರ್ ನಗರದಲ್ಲಿ (RR Nagar) ರಾಜಕೀಯ ಸಮಾರಾ ಮುಂದುವರೆದಿದೆ. ಶಾಸಕ ಮುನಿರತ್ನ (Muniratna) ಮತ್ತು ಕುಸುಮ (Kusuma) ಅವರ ನಡುವೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ.ಯುಗಾದಿ ಹಬ್ಬಕ್ಕೆ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಗಲಾಟೆ ಮಾಡಿದ್ದಾರೆ. ಆರ್.ಆರ್ ನಗರದಲ್ಲಿ ಬಿಜೆಪಿ ನಾಯಕರು ಮುನಿರತ್ನ ಫೋಟೋ ಬಳಸಿ ಕ್ಷೇತ್ರದ ಎಲ್ಲೆಡೆ ಪ್ರಚಾರ ಮಾಡಿದ್ದರು.ಈ ವೇಳೆ ಲಗ್ಗೆರೆ ವಾರ್ಡ್‌ನಲ್ಲಿ ಮುನಿರತ್ನ ಫ್ಲೆಕ್ಸ್ ಹಾಕಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಕಾರಣಕ್ಕೆ ಫ್ಲೆಕ್ಸ್ ಹಾಕಿಸಿದ್ದ ವಾಲೆ ವಿಜಿ ಎಂಬ ಬಿಜೆಪಿ ಕಾರ್ಯಕರ್ತನಿಗೆ ಕಾಂಗ್ರೆಸ್ ನಾಯಕರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.ಸಿದ್ದೇಗೌಡ ಎಂಬ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ನಾಯಕರ ಫ್ಲೆಕ್ಸ್ ಹಾಕು ಬೇಡ ಅನ್ನಲ್ಲ.ಆದ್ರೆ ಮುನಿರತ್ನ ಫ್ಲೆಕ್ಸ್ ಹಾಕಬಾರದು ಎಂದು ತಾಕೀತು ಮಾಡಲಾಗಿದ್ಯಂತೆ.ಆ ನಂತರ ಕ್ಷೇತ್ರದಲ್ಲಿ ಹಾಕಿದ್ದ ಫ್ಲೆಕ್ಸ್ ಮೇಲೆ 420 ಮುನಿರತ್ನ ಅಂತ ಬರೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ರೀತಿ ಫ್ಲೆಕ್ಸ್ ಹರಿದು ಹಾಕಿ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕಿ ಕುಸುಮ ಕಡೆಯವರು ಈ ರೀತಿ ಧಮ್ಕಿ ಹಾಕಿ ಗೂಂಡಾಗಿರಿ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.