ಬಿಜೆಪಿಯಿಂದ (BJP) 6 ವರ್ಷಗಳಿಗೆ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil yatnal), ಪಕ್ಷದಿಂದ ಹೊರಬಿದ್ದ ನಂತರವೂ ಬಿ.ಎಸ್ ಯಡಿಯೂರಪ್ಪ (BS Yediyurappa) ಮತ್ತು ಕುಟುಂಬದ ವಿರುದ್ಧ ಕಿಡಿಕಾರುವುದನ್ನು ಮುಂದುವರೆಸಿದ್ದಾರೆ.

ಈ ಬಗ್ಗೆ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿರುವ ಯತ್ನಾಳ್, ನನ್ನನ್ನು ಸೋಲಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಯತ್ನಾಳ್, ನನ್ನನ್ನು ಸೋಲಿಸುವುದಕ್ಕೆ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ನಾನು ಕೇವಲ ಹಿಂದುಗಳ ಮತಗಳಿಂದ ಗೆದ್ದಿದ್ದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಬಿ .ಎಸ್ ಯಡಿಯೂರಪ್ಪ ಬ್ಲ್ಯಾಕ್ಮೇಲ್ ಮಾಡಿ ರಾಜಕೀಯದಲ್ಲಿ ದೊಡ್ಡ ವ್ಯಕ್ತಿ ಆಗಿದ್ದಾನೆ ಎಂದು ಹರಿಹಾಯ್ದಿದ್ದಾರೆ. ಯಡಿಯೂರಪ್ಪ ಕಡು ಭ್ರಷ್ಟ.ಇದೇ ಕಾರಣಕ್ಕೆ ಭ್ರಷ್ಟಾಚಾರ ಮಾಡಿ ತಗಲಾಕೊಂಡು ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.






