
ಬೆಂಗಳೂರಿನಲ್ಲಿ ಮಗನೇ ತಂದೆಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬನ್ನೇರುಘಟ್ಟದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನಡೆದಿದೆ. 76 ವರ್ಷದ ವೇಲಾಯುದನ್ ಎಂಬುವರನ್ನು ವಿನೋದ್ ಕುಮಾರ್ ಎಂಬ ಮಗ ಕೊಲೆ ಮಾಡಿದ್ದಾನೆ.
ಮೂಲತಃ ಕೇರಳದ ಶಬರಿಮಲೆ ಬಳಿಯ ಏರಿಮಲೈ ಮೂಲದವರು. ಸಾಕಷ್ಟು ವರ್ಷಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದ ಕುಟುಂಬ ಇಲ್ಲೇ ಜೀವನ ನಡೆಸುತ್ತಿತ್ತು. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ತಂದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಪುತ್ರ ವಿನೋದ್.
ಇಬ್ಬರು ಕುಡಿಯುತ್ತ ಕುಳಿತಿದ್ದಾಗ ಮಗ ಚಡ್ಡಿ ಹಾಕಿಕೊಂಡು ಕುಳಿತಿದ್ದನ್ನು ಗಮನಿಸಿದ ತಂದೆ, ಪಂಚೆ ಹಾಕಿಕೊಂಡು ಕೂರುವಂತೆ ತಿಳಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ತಂದೆಯ ತಲೆಗೆ ಬಾರಿಸಿದ್ದಾನೆ. ಕೆಳಕ್ಕೆ ಬಿದ್ದ ತಂದೆಯನ್ನು ಕಾಲಿನಿಂದ ತುಳಿದು, ಕುತ್ತಿಗೆಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಇರಿದಿದ್ದಾನೆ. ವೇಲಾಯುಧನ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯರಿಂದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿ ಆರೋಪಿ ವಿನೋದ್ ಕುಮಾರ್ನನ್ನು ವಶಕ್ಕೆ ಪಡೆದಿದ್ದಾರೆ.
ಸಹೋದರ ವಿಮಲ್ ಕುಮಾರ್ಗೆ ಹಣ ಕೊಟ್ಟ ಮದ್ಯ ತರಲು ಹಣ ಕಳಿಸಿದ್ದ ವಿನೋದ್, ಆ ಬಳಿಕ ತಂದೆಗೂ ಮದ್ಯಪಾನ ಮಾಡಿಸುತ್ತ ಕುಳಿತಿದ್ದ. ಮನೆಯಲ್ಲಿಯೇ ತಂದೆ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದಾಗ ವಿನೋದ್ ಹಾಗೂ ತಂದೆ ವೇಲಾಯುದನ್ ನಡುವೆ ಸಣ್ಣ ಮಾತಿನ ಸಮರ ಕೊಲೆಯಲ್ಲಿ ಅಂತ್ಯವಾಗಿದೆ.
