೧೨ ಸಾವಿರ ರೂಪಾಯಿ ಕಳೆದುಕೊಂಡು ಬಂದಿದ್ದಿಯಾ ಅಂತ ಹೆತ್ತ ತಂದೆಯೇ ಮಗನನ್ನು ಬೆಂಕಿ ಹಚ್ಚಿ ಕೊಂದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಆಜಾದ್ ನಗರದ ನಿವಾಸಿ ಸುರೇಂದ್ರ ಮಗ ಅರ್ಪಿತ್ ನನ್ನೇ ಪೆಟ್ರೋಲ್ ಸುರಿದು ಬೆಂಕಿ ಕೊಂದ ಕಿರಾತಕ ತಂದೆ.
ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಸುಟ್ಟ ಗಾಯಗಳಿಂದ ನರಳುತ್ತಿದ್ದ ಅರ್ಪಿತ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.