ಕೃಷಿ(Agriculture) ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು(Law) ಜಾರಿಯಾಗಬೇಕು, ರೈತ(Farmers) ರ ಸಾಲ ಸಂಪೂರ್ಣ ಮನ್ನಾ ಆಗಬೇಕು 60ವರ್ಷ ತುಂಬಿದ ರೈತರಿಗೆ ಪಿಂಚಣಿ(Pension) ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೆಹಲಿ(Delhi)ಯಲ್ಲಿ ಫೆ.13ರಂದು ಸಂಯುಕ್ತ ಕಿಸಾನ್ ಮೋರ್ಚಾ(Kisan Morcha) (ರಾಜಕೀಯೆತರ) ಸಂಘಟನೆ ದೆಹಲಿ ಚಲೋ ನಡೆಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದಲೂ ನೂರಾರು ರೈತರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಶನಿವಾರ ಮೈಸೂರಿನಿಂದ ದೆಹಲಿಯತ್ತ ಹೊರಟಿದ್ದಾರೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ, ರೈತರ ಹಿತ ಶಕ್ತಿಯನ್ನು ಕಾಪಾಡಬೇಕು, ಎಮ್ ಎಸ್ ಸ್ವಾಮಿನಾಥನ್ ರವರಿಗೆ ಭಾರತರತ್ನ ನೀಡಿ ಗೌರವಿಸುವ ಸರ್ಕಾರ ಅವರು ರೈತರ ಪರ ನೀಡಿರುವ ವರದಿಯನ್ನು ಯಾಕೆ ಜಾರಿ ಮಾಡುತ್ತಿಲ್ಲ ಅನುಮಾನ ಬರಿಸುತ್ತಿದೆ ರೈತರ ಹಕ್ಕೂತ್ತಾಯಗಳ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆ ರೈತರ ಪಾಲಿಗೆ ಕರಾಳ ಚುನಾವಣೆಯಾಗುತ್ತದೆ ಎಂದು ಎಚ್ಚರಿಸಿದರು ರಾಜ್ಯದ ಬೇರೆ ಬೇರೆ ಭಾಗದಿಂದ ಬೇರೆ ಬೇರೆ ರೈಲುಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಚಲೋ ನಡೆಸಲು ರೈತರು ಮುಂದಾಗಿದ್ದಾರೆ.
#Farmers #DelhiChalo #KisanMorcha #Mysore #KuruburuShanthkumar