ಕೇಂದ್ರ ಸರ್ಕಾರ ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳುತ್ತಿದೆ, ಮಲೇಷಿಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ, ಇದ್ರಿಂದ ನಮ್ಮ ಭಾರತ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ನಾಯಕ ಕುರುಬೂರು ಶಾಂತಕುಮಾರ್ ಹೇಳಿಕೆಯನ್ನ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಸರ್ಕಾರದ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಚೀನಾದಿಂದ ರೇಷ್ಮೆ ನೂಲು ಆಮದಿಗೆ ಅನುಮತಿ ನೀಡಲಾಗಿದೆ, ಇದ್ರಿಂದ ರಾಜ್ಯದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ, ಕ್ವಿಂಟಾಲ್ಗೆ 12 ಸಾವಿರ ಇದ್ದ ಕೊಬ್ಬರಿ ಬೆಲೆ 6 ಸಾವಿರಕ್ಕೆ ಇಳಿದಿದೆ, ಈ ಎಲ್ಲಾ ಬೆಳವಣಿಗೆಗಳಿಂದ ದೇಶದ ರೈತರು ಕಂಗಾಲಾಗಿದ್ದಾರೆ, ಇಷ್ಟೆಲ್ಲಾ ಆದರೂ ಸಂಸದರು ಏನು ನಿದ್ದೆ ಮಾಡುತ್ತಿದ್ದಾರಾ..?, ಆಮದು ಉತ್ಪನ್ನಗಳಿಗೆ ಏಕೆ ತೆರಿಗೆ ವಿನಾಯಿತಿ ನೀಡಿದ್ದೀರಿ..?, ಕೇಂದ್ರ ಸರ್ಕಾರ ದೇಶದ ರೈತರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕ್ಯಾಸಿನೋ, ಆನ್ಲೈನ್ ಜೂಜಾಟ, ರೇಸ್ಗೆ ತೆರಿಗೆ ವಿಧಿಸುವುದಿಲ್ಲ, ಆದ್ರೆ, ಸಾಮಾನ್ಯರು ಕೊಳ್ಳುವ ಅಗತ್ಯ ವಸ್ತುಗಳಿಗೆ GST ವಿಧಿಸುತ್ತಿದ್ದಾರೆ, ಮೋಜು-ಮಸ್ತಿಗೆ ಇಲ್ಲದ GST ಅಗತ್ಯ ವಸ್ತುಗಳ ಮೇಲೆ ಏಕೆ ಹಾಕ್ತೀರಿ..?, ಎಂದು ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರಶ್ನೆ ರಾಜ್ಯದ ಸಂಸದರಿಗೆ ಪ್ರಶ್ನೆಯನ್ನ ಮಾಡಿದ್ದಾರೆ. ಸಿಎಂ ಸಿದ್ದು ಬಜೆಟ್ನಲ್ಲಿ ರೈತರಿಗೆ ಪೂರಕವಾದ ಅಂಶಗಳನ್ನು ಅಳವಡಿಸಬೇಕು, ರೈತರ ಸಾಲಮನ್ನಾ ಮಾಡಬೇಕು.. ಸಾಲ ನೀತಿಯನ್ನ ಸರಳೀಕರಿಸಬೇಕು, ಎಂದು ಬಜೆಟ್‌ನಲ್ಲಿ ರೈತ ಪರವಾದ ಯೋಜನೆಗಳನ್ನ ಜಾರಿಗೆ ತರಬೇಕು ಎಂದು ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಬಜೆಟ್‌ನಲ್ಲಿ ರೈತರ ನಿರೀಕ್ಷೆಯನ್ನ ಕೂಡ ವಿವರಿಸಿದ್ದಾರೆ

ಒಟ್ಟಾರೆಯಾಗಿ ಕೇಂದ್ರ ಸರ್ಕಾರ ವಿದೇಶದಿಂದ ವಿವಿಧ ಉತ್ಪನ್ನಗಳನ್ನ ಆಮದು ಮಾಡಿಕೊಳ್ಳುತ್ತಿದ್ದು, ದೇಶದ ಸಣ್ಣ ಕಸಬುದಾರರಿಗೆ ಮತ್ತು ನೂತನ ಉದ್ಯಮಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ, ಅದರಲ್ಲೂ ಪ್ರಮುಖವಾಗಿ ರೈತ ಉತ್ಪನ್ನಗಳನ್ನ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದು, ದೇಶಿಯ ರೈತರಿಗೆ ಕೇಂದ್ರ ಸರ್ಕಾರ ಬಹಳ ದೊಡ್ಡ ಅನ್ಯಾಯವನ್ನ ಮಾಡುತ್ತಿದೆ ಎಂಬುವುದು ರೈತ ನಾಯಕ ಕುರುಬೂರು ಶಾಂತಕುಮಾರ್ ಅವರ ಆರೋಪವಾಗಿದೆ.