ಬೆಂಗಳೂರು: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ವಿಧಾನಸಭೆಗೆ ಅತ್ಯಂತ ಹಿರಿಯ ಸದಸ್ಯರು ಅವರನ್ನು ದೆಹಲಿ ಪ್ರತಿನಿಧಿ ಮಾಡಿ ದೆಹಲಿಗೆ ಕಳುಹಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ವಿಧಾನ ಸಭೆಯಲ್ಲಿ ಕರ್ನಾಟಕ ವಿಧಾನ ಮಂಡಳ ಅನರ್ಹತಾ ನಿವಾರಣಾ ವಿಧೇಯಕದ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಹಾಗೂ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರ ನೇಮಕ ಈಗಾಗಲೇ ಆಗಿದೆ. ನೇಮಕ ಮಾಡಿ ಈಗ ವಿನಾಯ್ತಿ ಕೊಡಲು ಕಾಯ್ದೆ ತಿದ್ದುಪಡಿ ಮಾಡುವುದು ಸರಿಯಲ್ಲ ಸರ್ಕಾರಕ್ಕೆ ಸಲಹೆ ನೀಡಿದರು.
ಟಿ. ಬಿ. ಜಯಚಂದ್ರ ಅವರು ಅತ್ಯಂತ ಹಿರಿಯ ಸದಸ್ಯರು. ಅವರು 1978 ನಲ್ಲಿ ಸದನಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ಅವರು ತಾವೇ ಸದನಕ್ಕೆ ಹಿರಿಯರು ಅಂತ ಹೇಳಿದ್ದಾರೆ. ಆದರೆ, ಜಯಚಂದ್ರ ಈ ಸದನದಲ್ಲಿ ಎಲ್ಲರಿಗಿಂತಲೂ ಹಿರಿಯರು ಅಂತಹ ಹಿರಿಯರನ್ನು ದೆಹಲಿಗೆ ಕಳುಹಿಸಿ ಚಳಿಯಲ್ಲಿ ನಡುಗಿಸುವುದು ಸರಿಯಲ್ಲ ಎಂದರು.