
ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಸಚಿವ ಸತೀಸ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಬೃಹತ್ ಜಾತ್ರೆಯಲ್ಲಿ ನೆಕ್ಸ್ಟ್ ಸಿಎಂ ಜಾರಕಿಹೊಳಿ ಫ್ಲೆಕ್ಸ್ ಬ್ಯಾನರ್ ಹಾಕಲಾಗಿದೆ. ನಾಯಕನಹಟ್ಟಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಫೋಟೋ ಪ್ರದರ್ಶನ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆಯುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಆಗ್ರಹಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಾಳೆ ಹಣ್ಣಿನ ಮೇಲೆ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಬರೆದಿದ್ದಾರೆ ಅಭಿಮಾನಿಗಳು. ಬೃಹತ್ ರಥಕ್ಕೆ ಬಾಳೆ ಹಣ್ಣು ಎಸೆದು ಹರಕೆ ಹೊತ್ತಿದ್ದಾರೆ ಅಭಿಮಾನಿಗಳು. NEXT CM ಸತೀಶ್ ಜಾರಕಿಹೊಳಿ ಅನ್ನೋ ಪ್ರಿಂಟಿಂಗ್ ಇರುವ ಟೀ ಶರ್ಟ್ ಧರಿಸಿ ಜಾತ್ರೆಗೆ ಬಂದಿದ್ದಾರೆ ಅಭಿಮಾನಿಗಳು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ ಬಸವರಾಜ್ ಹಾಗು ಚಿತ್ರದುರ್ಗ ಜಿಲ್ಲಾ ST ಸೆಲ್ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಮದ್ಯ ಕರ್ನಾಟಕದ ಆರಾಧ್ಯ ದೈವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಭಕ್ತ ಸಾಗರವೇ ಹರಿದು ಬಂದಿದೆ. ಮಾಡಿದಷ್ಟು ನೀಡು ಭಿಕ್ಷೆ ಎಂಬ ನಾಣ್ಡುಡಿಯ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ತಿಪ್ಪೇರುದ್ರಸ್ವಾಮಿ ತೇರು ಎಳೆದಿದ್ದಾರೆ ಸಾವಿರಾರು ಭಕ್ತರು. ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು. ತೇರಿಗೆ ಬಾಳೆಹಣ್ಣು ಎಸೆದು, ಕೊಬ್ಬರಿ ಸುಟ್ಟು ಹರಕೆ ತೀರಿಸಿದ್ದಾರೆ ಭಕ್ತರು. ಬೃಹತ್ ರಥೋತ್ಸವದಲ್ಲಿ ಭಾಗಿಯಾಗಿ ಭಕ್ತರು ಪುನೀತರಾಗಿದ್ದಾರೆ. ರಥದ ಮುಕ್ತಿ ಭಾವುಟವನ್ನ 63 ಲಕ್ಷಕ್ಕೆ ಹರಾಜು ಕೂಗಿಕೊಂಡಿದ್ದಾರೆ ಬೆಂಗಳೂರು ಮೂಲದ ಉದ್ಯಮಿ ತಿಪ್ಪೇರುದ್ರಸ್ವಾಮಿ ಭಕ್ತ ತೇಜಸ್ವಿ ಆರಾಧ್ಯ.
