ಮಂಗಳೂರು ; ದಕ್ಷಿಣ ಕನ್ನಡ ( Dakshina kannada ) ಜಿಲ್ಲೆಯ ಬೆಳ್ತಂಗಡಿ ( Belthangadi ) ತಾಲೂಕಿನ ಪುದುವೆಟ್ಟಿಯಲ್ಲಿ ಖ್ಯಾತ ಕಬಡ್ಡಿ ಆಟಗಾರ ( kabaddi player ) ಆತ್ಮಹತ್ಯೆಗೆ ಶರಣಾದ ಘಟನೆ ಇಂದು ನಡೆದಿದೆ. ಪುದುವೆಟ್ಟು ನಿವಾಸಿ ಸ್ವರಾಜ್ ( swaraj ) (24) ಆತ್ಮಹತ್ಯೆಗೆ ಶರಣಾದ ಯುವಕ., ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಸ್ವರಾಜ್ ಕುಟುಂಬಸ್ಥರು ಹಾಗೂ ಸ್ನೇಹಿತರು ( Family and friends ) ಆಘಾತಕ್ಕೆ ಒಳಗಾಗಿದ್ದಾರೆ.
ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ವರಾಜ್ ಸಾವಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಕೂಡ ನಿಖರವಾಗಿ ತಿಳಿದು ಬಂದಿಲ್ಲ, ಸದ್ಯದ ಮಟ್ಟಿಗೆ ಈ ಪ್ರಕರಣ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನ ನಡೆಸುತ್ತಿದ್ದು, ವಿಚಾರಣೆಯನ್ನ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ
ಈ ಸುದ್ದಿ ಓದಿದ್ದೀರಾ ; ಹೆಚ್.ಡಿ.ಕುಮಾರಸ್ವಾಮಿ ಅವರು ಚೇತರಿಕೆ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್
ಇನ್ನು ಮೃತ ಸ್ವರಾಜ್ ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಕಬಡ್ಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ ಧರ್ಮಸ್ಥಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.