• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೌಟುಂಬಿಕ ಕಂಟಕಗಳು

ಪ್ರತಿಧ್ವನಿ by ಪ್ರತಿಧ್ವನಿ
December 22, 2024
in Top Story, ಜೀವನದ ಶೈಲಿ, ವಿಶೇಷ
0
Share on WhatsAppShare on FacebookShare on Telegram
ADVERTISEMENT

ಗಂಡ ಮತ್ತು ಹೆಂಡತಿ ಜಗಳದ ವಿಷಯದಲ್ಲಿ ಬಹುಪಾಲು ಭಾರತೀಯ ಕುಟುಂಬಗಳಲ್ಲಿ ವಿಚಿತ್ರ ಸಂಪ್ರದಾಯವಿದೆ. ಅದೆಂದರೆ ದಂಪತಿಗಳಲ್ಲಿ ಜಗಳವಾಗುತ್ತಿದ್ದಂತೆ ಗಂಡಿನ ಮನೆಯವರು ಗಂಡಿನ ಪರವಾಗಿ, ಹೆಣ್ಣಿನ ಕಡೆಯವರು ಹೆಣ್ಣಿನ ಪರವಾಗಿ ಸೈನ್ಯ ಕಟ್ಟುತ್ತಾ ರಣಘೋಷವನ್ನು ಮಾಡುತ್ತಾರೆ. ಅದು ಮುಂದುವರಿದಂತೆ ಗಂಡಿಗೆ ಬುದ್ದಿ ಕಲಿಸಲು ಹೆಣ್ಣಿನ ಕಡೆಯವರು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತುತ್ತಾರೆ. ಇನ್ನೂ ವಿಪರೀತಕ್ಕೆ ಹೋಗುತ್ತಾ ಕೋರ್ಟಿಗೆ ಮೊರೆ ಹೋಗುತ್ತಾರೆ. ಒಟ್ಟಾರೆ ಗಂಡಿನ ಕಡೆಯವರು ಗಂಡನ್ನು ಗೆಲ್ಲಿಸಲು ಮತ್ತು ಹೆಣ್ಣನ್ನು ಮಣಿಸಲು; ಹಾಗೆಯೇ ಹೆಣ್ಣಿನ ಕಡೆಯವರು ಹೆಣ್ಣನ್ನು ಗೆಲ್ಲಿಸಿ ಗಂಡನ್ನು ಸೋಲಿಸಲು ಭೀಷ್ಮ ಪ್ರತಿಜ್ಞೆ ಮಾಡುತ್ತಾರೆ. ಅಂತಿಮವಾಗಿ ಅವರು ಮರೆಯುವುದು ಅವರಿಬ್ಬರ ಸಂಬಂಧವನ್ನು ಸುಧಾರಿಸಲು.

ವಾಸ್ತವದಲ್ಲಿ ಗಂಡು ಮತ್ತು ಹೆಣ್ಣು ಭಿನ್ನವಾದ ಕೌಟುಂಬಿಕ ಹಿನ್ನಲೆಯಿಂದ, ವಂಶವಾಹಿ ಗುಣಗಳಿಂದ, ಅವರವರ ಪೌಷಕರ ತಿಳುವಳಿಕೆ ಮತ್ತು ನಡವಳಿಕೆಗಳ ಪ್ರಭಾವದಿಂದ ಬಂದಿದ್ದು, ಸಹಜವಾಗಿ ಒಬ್ಬರಿಗೊಬ್ಬರು ಭಿನ್ನರೇ ಆಗಿರುತ್ತಾರೆ. ಬಿನ್ನಾಭಿಪ್ರಾಯಗಳು ಅತ್ಯಂತ ಸ್ವಾಭಾವಿಕವೇ ಆಗಿರುತ್ತದೆ.

ಹಿನ್ನಲೆಗಳು, ಪ್ರಭಾವಗಳು, ಸ್ವಭಾವಗಳು ಬೇರೆ ಬೇರೆಯಾಗಿದ್ದು ಇಬ್ಬರೂ ಒಟ್ಟಾಗಿ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡು ಬಾಳ್ವೆ ಮಾಡಲು ಸಿದ್ಧವಾಗಬೇಕಾಗುತ್ತದೆಯೇ ಹೊರತು, ತನಗೆ ತಕ್ಕಂತಹ ಅಥವಾ ಅನುರೂಪವಾದ ಅಥವಾ ಅನುಕೂಲವಾದಂತಹ ವ್ಯಕ್ತಿಯನ್ನು ತರಲು ಆಗದು.

ತಮ್ಮ ಭಿನ್ನತೆಗಳ ಬಗ್ಗೆ ಅರಿವು ಮತ್ತು ಅದರೊಟ್ಟಿಗೆ ಅವರಿದ್ದಂತೆಯೇ ಪರಸ್ಪರ ಒಪ್ಪಿಕೊಳ್ಳುವ ಭಾವನಾತ್ಮಕವಾದ ಒಲವು ಸಂಬಂಧವನ್ನು ಗಟ್ಟಿಗೊಳಿಸುವುದು.

ಆದರೆ ಗಂಡ ಹೆಂಡಿರ ಜಗಳವಾದ ಕೂಡಲೇ ಅವರವರ ಮನೆಯವರು ಕೌರವರ ಪಕ್ಷ ಮತ್ತು ಪಾಂಡವರ ಪಕ್ಷ ವಹಿಸಿಕೊಂಡು ಕುರುಕ್ಷೇತ್ರ ಯುದ್ಧಕ್ಕೆ ರಣಘೋಷ ಮಾಡಿಯೇ ಬಿಡುತ್ತಾರೆ.
ಗೆಲುವು ಎಂಬುದು ಅಹಂಕಾರದ ಹಸಿವೆಯಾದ್ದರಿಂದ ದಂಪತಿಗಳ ಸಂಘರ್ಷಕ್ಕೆ ಅಥವಾ ಮನಸ್ತಾಪಕ್ಕೆ ಕಾರಣವಾಗಿರಬಹುದಾದ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಕುಟುಂಬಗಳು ಮಾಡುವುದೇ ಇಲ್ಲ.
ಇದರಿಂದಾಗಿ ಕುಟುಂಬಗಳು ದಂಪತಿಯನ್ನು ಕೂಡಿಸುವ ಬದಲು ಕಂದಕದ ಬಿರುಕನ್ನು ಇನ್ನಷ್ಟು ಹಿಗ್ಗಿಸುತ್ತಾರೆ.

ಇನ್ನು ಗಂಡ ಮತ್ತು ಹೆಂಡತಿಯ ಮನೆಗಳೆರಡಕ್ಕೂ ಸಾಮಾನ್ಯ ಮಿತ್ರರೋ, ಹಿತೈಷಿಗಳೋ ಆಗಿರುವ ವ್ಯಕ್ತಿಗಳು ವಿಶ್ವ ಯುದ್ಧವನ್ನು ತಪ್ಪಿಸಲು ಸಂಧಾನಕ್ಕೆಂದು ಬರುತ್ತಾರೆ.
ಅವರದ್ದೋ ಅರಳೀಕಟ್ಟೆಯ ಮೇಲೆ ಕೂತು ಪಟೇಲ, ಗೌಡ, ಶಾನುಭೋಗ, ತಳವಾರ ಮಾಡುವಂತಹ ಪಂಚಾಯಿತಿ ತೀರ್ಮಾನ.
ಹೆಂಡತಿಯಾದವಳು ಹೇಗಿರಬೇಕು, ಗಂಡನಾದವನು ಹೇಗಿರಬೇಕು ಎಂಬ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ವಿಚಾರಿಸಿ, ವಿವೇಚಿಸಿ, ಮೇಲಿನ ಸ್ತರಗಳ ವಿವೇಕ ಹೇಳಿ ಕಳುಹಿಸುತ್ತಾರೆ.

ಗಂಡ ಹೆಂಡತಿಯ ಸಮಸ್ಯೆ ಇರುವುದು ದಾಂಪತ್ಯದ ನಿಬಂಧನೆಗಳಲ್ಲಿ ಅಲ್ಲ. ಅವರಿಬ್ಬರ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳ ಅವ್ಯವಸ್ಥೆಯಲ್ಲಿ.
ಸಂಧಾನಕಾರರು ಗಂಡ ಹೆಂಡತಿಯರಿಬ್ಬರ ವೈಯಕ್ತಿಕವಾದ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಗುರುತಿಸಲು ವಿಫಲರಾಗಿರುತ್ತಾರೆ.
ಹಲ್ಲು ನೋವು ಬಂದಾಗ ಪೈನ್ ಕಿಲ್ಲರ್ ಕೊಟ್ಟ ಹಾಗೆ. ಸಮಸ್ಯೆಯನ್ನು ಅದುಮಿಡುವರೇ ಹೊರತು ಮೂಲ ಕಾರಣವನ್ನು ಗುರುತಿಸುವುದೂ ಇಲ್ಲ, ಅವರಿಗೆ ಸರಿಪಡಿಸಲು ಸಾಧ್ಯವೂ ಇರುವುದಿಲ್ಲ.

ಪೈಪೋಟಿ, ಗೆಲ್ಲುವ ಹಟದಿಂದ ಜಿದ್ದಾಜಿದ್ದಿಗೆ ಬೀಳುವ ಇವರು ಪೋಲೀಸು ಮತ್ತು ಕೋರ್ಟುಗಳಿಗೆ ಮೊರೆ ಹೋಗುತ್ತಾರೆ. ಪೋಲೀಸಾಗಲಿ, ಕೋರ್ಟಾಗಲಿ ಮತ್ತದೇ ಸಾಮಾಜಿಕ ನಿಬಂಧನೆಗಳ ಅರಳೀಕಟ್ಟೆ ಪಂಚಾಯಿತಿಯನ್ನೇ ಸಮಕಾಲಿನ ರೂಪದಲ್ಲಿ ಪ್ರಸ್ತುತಪಡಿಸುತ್ತದೆ ಅಷ್ಟೇ.

ಕಾನೂನು ತೊಡಕುಗಳಿಂದ ಮತ್ತು ಕಾನೂನುಗಳ ದುರುಪಯೋಗಗಳಿಂದ ಸಂಬಂಧಗಳು ಮತ್ತಷ್ಟು ಹಳಸುವುದು ಮಾತ್ರವಲ್ಲದೇ ವ್ಯಕ್ತಿಗತವಾದಂತಹ ಅಪಮಾನ ಮತ್ತು ನೋವುಗಳಿಂದ ಜೀವಗಳು ಮಾನಸಿಕವಾಗಿ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತವೆ.

ಕೋರ್ಟು ಮತ್ತು ಪೋಲೀಸು ಎಂತದ್ದೇ ಹೇಳಿ, ಹೆಂಗೋ ನಡೆದುಕೊಳ್ಳುವಂತೆ ಮಾಡಿದರೂ ಅದು ಹೃತ್ಪೂರ್ವಕವಾಗಿರದೇ ನಿರ್ಬಂಧಕ್ಕೆ ಒಳಪಟ್ಟಿರುವ ನಡವಳಿಕೆಗಳೇ ಆಗಿರುತ್ತದೆ. ಸಂಬಂಧಗಳು ಎನ್ನುವುದು ಪ್ರಾಮಾಣಿಕ, ಪಾರದರ್ಶಕ ಮತ್ತು ಖಾಸಗೀತನದ ಪರಿಶುದ್ಧತೆಯನ್ನು (Sanctity) ಹೊಂದಿರುವಂತದ್ದು.
ಆದರೆ ಕುಟುಂಬಗಳ ಮತ್ತು ಕಾನೂನು ವ್ಯವಸ್ಥೆಗಳ ಮಧ್ಯ ಪ್ರವೇಶಗಳು ಖಾಸಗೀತನದ ಪರಿಶುದ್ಧತೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ.

ಗಂಡ ಹೆಂಡತಿಯ ನಡುವೆ ಮನಸ್ತಾಪಗಳು ಬಂದಾಗ ಅವರು ಕುಟುಂಬದ ಅಕ್ಷೋಹಿಣಿ ಸೈನ್ಯವನ್ನು ಕರೆಯುವುದೋ ಅಥವಾ ಕಾನೂನು ವ್ಯವಸ್ಥೆಯ ಮೊರೆ ಹೋಗುವುದರ ಬದಲು ಕೌಟುಂಬಿಕ ಆಪ್ತ ಸಮಾಲೋಚಕರ ಬಳಿಗೆ ಹೋಗಬೇಕು.

ಏಕೆಂದರೆ ಯಾರ ಪಕ್ಷವನ್ನೂ ವಹಿಸದ ಅವರು ಇಬ್ಬರಲ್ಲೂ ಆಗುತ್ತಿರುವ ಭಾವನೆಗಳ ಸಂಘರ್ಷ ಮತ್ತು ಮಾನಸಿಕ ತುಮುಲಗಳನ್ನು ಅರಿತು ಪರಸ್ಪರರಿಗೆ ಅರ್ಥೈಸಿಕೊಳ್ಳಲು ನೆರವಾಗುತ್ತಾರೆ.

DK Shivakumar: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ..! #bjp #jds #ctravi #pratidhvani

ಆಪ್ತ ಸಮಾಲೋಚಕರ ಉದ್ದೇಶ ಕಾಳಗದ ಗೆಲುವಲ್ಲದಿರುವ ಕಾರಣದಿಂದ ಪರಸ್ಪರರ ವಾದ ಪ್ರತಿವಾದಗಳ ಬೆಂಕಿಗೆ ತುಪ್ಪ ಸುರಿಯದೇ ಸಂವಾದ ನಡೆಸಲು ನೆರವಾಗುತ್ತಾರೆ.
ಈ ಸಂವಹನದ ಸೇತುವೆಯಿಂದ ಪರಸ್ಪರರು ಹತ್ತಿರವಾಗಬಹುದು.
ಸಂಘರ್ಷದ ಮೂಲವನ್ನು ತಿಳಿದು, ಆ ಸಮಸ್ಯೆಯನ್ನು ಒಟ್ಟಾಗಿ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕುಟುಂಬಗಳ ಭಾವನಾತ್ಮಕ ಪಕ್ಷಪಾತಗಳ ಮಧ್ಯ ಪ್ರವೇಶದಿಂದ ಸಂಬಂಧಗಳು ಸುಧಾರಿಸುವ ಬದಲು ಸಮಸ್ಯೆಗಳು ಮತ್ತಷ್ಟು ಸಿಕ್ಕುಸಿಕ್ಕಾಗುತ್ತವೆ.

ಸಂಬಂಧಗಳು ಎನ್ನುವುದು ಬಲವಾಗುವುದು ಒಲವಿನ ತಳಹದಿಯ ಮೇಲೆಯೇ ಹೊರತು ಒಬ್ಬರನ್ನೊಬ್ಬರು ಗೆಲ್ಲುವುದರಲ್ಲಿ ಖಂಡಿತ ಅಲ್ಲ.

ಸಮಾನಾಂತರ ರೇಖೆಗಳು ಎಂದಿಗೂ ಸಂಧಿಸುವುದಿಲ್ಲ. ಇಲ್ಲಿ ಬಾಗುವುದು ಎಂದರೆ ಸೋಲುವುದಲ್ಲ, ಸಂಧಿಸಲು ಎಂಬ ಅರಿವು ಬೇಕಿದೆ.

ಮದುವೆ ಎಂಬುದು ಅಹಮಿಕೆಯ ಪೂರೈಕೆಗಲ್ಲ ಮತ್ತು ಒಬ್ಬರು ಮತ್ತೊಬ್ಬರನ್ನು ಅಧೀನಗೊಳಿಸಿಕೊಳ್ಳಲು ಖಂಡಿತ ಅಲ್ಲ. ಅದು ಇಬ್ಬರು ವ್ಯಕ್ತಿಗಳ ಮತ್ತು ಎರಡು ಕುಟುಂಬಗಳ ಭಾವನಾತ್ಮಕ ಬಂಧವನ್ನು ಬಲಗೊಳಿಸಿಕೊಂಡು ಸಂಬಂಧ ಎಂದು ಗೌರವಿಸಲು.

ಕುಟುಂಬಗಳು ಗಂಡ ಅಥವಾ ಹೆಂಡತಿಯ ಪರವಾಗಿ ಲಾಯರುಗಳಾಗಿ ವಾದಿಸುತ್ತಾ, ಪಕ್ಷಪಾತಿಗಳಾಗಿ ಸಂಬಂಧಗಳನ್ನು ಹದಗೆಡಿಸುವುದಕ್ಕಿಂತಲೂ ಇಬ್ಬರಿಗೂ ಅಪರಿಚಿತರಾಗಿರುವ ಆಪ್ತ ಸಮಾಲೋಚಕರನ್ನು ಕಾಣುವುದರಿಂದ ಬೆಸುಗೆಯ ವಿಷಯದಲ್ಲಿ ಒಂದಿಷ್ಟು ಭರವಸೆ

Revanth Reddy: ಶೋ ಅಥವಾ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ನೀಡುವುದಿಲ್ಲ. ಸಿಎಂ ರೇವಂತ್ ರೆಡ್ಡಿ..! #cm #telangana
Tags: baby keem family tiesbaby keem family ties cleanbaby keem family ties lyricsFamilyfamily tiesfamily ties 1982family ties 2015family ties baby keemfamily ties baby keem lyricsfamily ties castfamily ties cast how they changedfamily ties cast then and nowfamily ties lyricsfamily ties musicfamily ties reactionfamily ties showfamily ties vevokendrick lamar family tieskendrick lamar family ties lyricsties
Previous Post

ಅನ್ಯಾಯದ ವಿರುದ್ಧ ಮಾಜಿ IPS ಅಧಿಕಾರಿ ಸಂಜೀವ್ ಭಟ್ ಪುತ್ರಿ ಪೋಸ್ಟ್ – ತಂದೆ ನೆನೆದು ನ್ಯಾಯದ ಭರವಸೆ ವ್ಯಕ್ತಪಡಿಸಿದ ಆಕಾಶಿ ಭಟ್ !

Next Post

ಅಕ್ಕ.. ತಪ್ಪು ತಿಳ್ಕೋಬೇಡ ಅಕ್ಕ, ನಾನು ಹೃದಯದಿಂದ ಕೆಟ್ಟವನಲ್ಲ‌

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post

ಅಕ್ಕ.. ತಪ್ಪು ತಿಳ್ಕೋಬೇಡ ಅಕ್ಕ, ನಾನು ಹೃದಯದಿಂದ ಕೆಟ್ಟವನಲ್ಲ‌

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada