ಬಿಜೆಪಿ ರೆಬೆಲ್ ನಾಯಕ ಯತ್ನಾಳ್‌ಗೆ ನೋಟಿಸ್ ವಿಚಾರವಾಗಿ ಗೊಂದಲ ಮೂಡಿದ್ದು, ಯಾವುದೇ ನೋಟಿಸ್ ಬಂದಿಲ್ಲ ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಯತ್ನಾಳ್, ನನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ. ನೋಟಿಸ್ ಬಂದಾಗ ಸರಿಯಾದ ಉತ್ತರ ಕೊಡ್ತೀನಿ ಅಂದಿದ್ದಾರೆ. ಇದುವರೆಗೆ ನನಗೆ 3 ಸಲ ನೋಟಿಸ್ ಕೊಟ್ಟಿದ್ದಾರೆ. 2 ಬಾರಿ ನೋಟಿಸ್‌ಗೆ ಉತ್ತರ ಕೊಟ್ಟಿದ್ದೇನೆ. 3ನೇ ಬಾರಿ ಕೊಟ್ಟಿರುವ ನೋಟಿಸ್ ನಕಲು ಅನ್ಸ,ುತ್ತೆ. ಆದಕ್ಕೆ ಉತ್ತರನೇ ಕೊಟ್ಟಿಲ್ಲ. ಇದೆಲ್ಲಾ ವಿಜಯೇಂದ್ರ ಮಾಡ್ಸಿದ್ದು ಅಂತ ನೇರ ಆರೋಪ ಮಾಡಿದ್ದಾರೆ ಯತ್ನಾಳ್.

ಅಪ್ಪನ ಸಹಿಯ್ನನೇ ನಕಲು ಮಾಡಿ ಸಾವಿರಾರು ಫೈಲ್ ಕ್ಲಿಯರ್ ಮಾಡಿದ್ದ ಎಂದು ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ನನಗೆ ಯಾವ Mail ಬಂದಿಲ್ಲ, ರಿಜಿಸ್ಟರ್ ಪೋಸ್ಟ್ ಕೂಡಾ ಬಂದಿಲ್ಲ. ಅವಕ್ಕೆಲ್ಲಾ ಸರಿಯಾದ ಉತ್ತರ ಕೊಡ್ತೀನಿ. ವಂಶವಾದ, ಭ್ರಷ್ಟಾಚಾರ, ಅಡ್ಜೆಸ್ಟ್‌ಮೆಂಟ್ ರಾಜಕೀಯದ ವಿರುದ್ಧ ಮಾತನಾಡಬಾರದಾ..?ಹಿಂದುತ್ವದ ಪರ ಮಾತಾಡೋದು ಅಪರಾಧಾನಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಹೊಸದಾಗಿ ವಿಜಯೇಂದ್ರ ಪರವಾಗಿ ಇದನ್ನು ತಿದ್ದುಪಡಿ ಆಗಿದ್ಯಾ..? ಇದೆಲ್ಲಾ ಅಪರಾಧ ಅಂತ ಹೇಳಿದ್ರೆ ಒಪ್ಪೋಕೆ ಅಸಾಧ್ಯ ಎಂದು ದೆಹಲಿಯಲ್ಲಿ ಬಸನಗೌಡ ಪಾಟೀಲ್ ಮಾತಿನ ದಾಳಿ ಮಾಡಿದ್ದಾರೆ.

ಇನ್ನು ಅಖಂಡ ಬಿಜೆಪಿ ಪಕ್ಷ ನಮ್ಮ ಜೊತೆ ಇರುತ್ತೆ. ನಾನು ಇನ್ನಷ್ಟು ಬಲಿಷ್ಠವಾಗ್ತೀನಿ ಎಂದಿರುವ ಬಂಡಾಯ ನಾಯಕ ಯತ್ನಾಳ್, ಯಡಿಯೂರಪ್ಪ ಕಥೆ ಮುಗಿದೇ ಹೋಯ್ತು. ಕೆೆಜೆಪಿ ಕಟ್ಟಿದ್ದ ಯಡಿಯೂರಪ್ಪ ಎಷ್ಟು ಸೀಟು ತಂದಿದ್ರು..? ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ. ಯತ್ನಾಳ್ ಅಬ್ಬರಿಸುತ್ತಿದ್ದ ಹಾಗೆ ಇತ್ತ ಇಡೀ ಬಂಡಾಯ ಟೀಂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಿಡಿದು ನಿಮತಿದೆ. ರಮೇಶ್ ಜಾರಕಿಹೊಳಿ, ಕುಮಾರಬಂಗಾರಪ್ಪ ಸೇರಿದಂತೆ ಹಲವರು ಯತ್ನಾಳ್ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಮೇಶ ಜಾರಕಿಹೊಳಿ, ಯತ್ನಾಳ್‌ಗೆ ನೋಟಿಸ್ ಬಗ್ಗೆ ಎರಡು ದಿನಗಳ ಹಿಂದೆ ಗೊತ್ತಿತ್ತು. ಈ ಬಗ್ಗೆ ಶೀಘ್ರದಲ್ಲೇ ಉತ್ತರ ಕೊಡ್ತಿವಿ. ನಮ್ಮನ್ನು ಯಾರು ಟಾರ್ಗೆಟ್ ಮಾಡ್ತಿಲ್ಲ. ವಕ್ಪ್ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಯತ್ನಾಳ್ ಬಂದ ಬಳಿಕ ಸಭೆ ಮಾಡಿ ತೀರ್ಮಾನ ಮಾಡ್ತಿವಿ ಎಂದಿದ್ದಾರೆ. ಇನ್ನು ರೇಣುಕಾಚಾರ್ಯ ಒಳ್ಳೆಯ ಮನುಷ್ಯನೆ ಎಂದಿರುವ ರಮೇಶ್ ಜಾರಕಿಹೊಳಿ, ಅಪ್ಪ, ಮಕ್ಕಳ ಸಂಬಂಧ ಅನಿವಾರ್ಯ ಇದೆ. ಶಿವಮೊಗ್ಗದಲ್ಲಿ ರೇಣುಕಾಚಾರ್ಯ ಬದುಕಬೇಕಲ್ಲ..! ನಮ್ಮಂತವರಿಗೆ ಅಪ್ಪ, ಮಕ್ಕಳು ಇಲ್ಲಿಗೆ ಬಂದು ಕಾಡುತ್ತಾರೆ. ಯಡಿಯೂರಪ್ಪ ಅವರಿಗೆ ಅಂಜಿ ಹೀಗೆ ಮಾತನಾಡುತ್ತಿದ್ದಾನೆ. ವಕ್ಪ್ ಹೋರಾಟ ತಪ್ಪು ಎಂದು ಹೈಕಮಾಂಡ್ ಹೇಳಲಿ. ಮುಂದೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಒಳ್ಳೆಯ ಉದ್ದೇಶಿಂದ ವಕ್ಪ್ ಹೋರಾಟ ಮಾಡುತ್ತಿದ್ದೇವೆ. ಅಧ್ಯಕ್ಷ ಕೇವಲ ಪ್ರೇಸ್ ಮೀಟ್ ಮಾಡಿ ಮನೆಯಲ್ಲಿ ಮಲಗಿದ್ದಾನೆ. ಎರಡು ಸಲ ಹೋರಾಟಕ್ಕೆ ಕರೆ ಕೊಟ್ಟು ಬರಲಿಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಹಳ ಚೈಲ್ಡಿಸ್ಟ್ ಇದ್ದಾನೆ, ಹುಡುಗ, ಇನ್ನೂ ಸಿನಿಯರ್ ಇಲ್ಲ. ವಿಜಯೇಂದ್ರ ಹಾಗು ಸಿಡಿ ಶಿವು ಇಬ್ಬರದ್ದು ಬ್ಲ್ಯಾಕ್ ಮೇಲ್ ಉದ್ಯೋಗ. ಅವರಿಬ್ಬರು ಪಾಲುದಾರರು. ಬಿಜೆಪಿ ಮುಂದಿನ ದಿನಗಳಲ್ಲಿ ಒಳ್ಳೆಯ ದಿನ ಬರಲಿದೆ. ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯತ್ನಿಸಲಾಗ್ತಿದೆ. ನಾನು ಬಿಜೆಪಿ ಬಿಟ್ಟು ಹೋಗಲಿ ಅಂತ ಕಿರುಕುಳ ಕೊಟ್ಟರು. ನಾನು ಇಲ್ಲೇ ಇದ್ದು ಪಕ್ಷ ಕಟ್ಟುತ್ತೇನೆ. ಯಾವುದಕ್ಕೂ ಹೆದರಲ್ಲ, ಇಲ್ಲಿಯೇ ಇದ್ದು ಪಕ್ಷ ಕಟ್ಟುತ್ತೇನೆ ಎಂದಿದ್ದಾರೆ.