ತಾಜ್ ವೆಸ್ಟೆಂಡ್ ಹೋಟೆಲ್ (Taj west end hotel) ಗೆ ಬಾಂಬ್ ಬೆದರಿಕೆ (Bomb threat) ಮೇಲ್ ಬಂದ ಪ್ರಕರಣದ ಸಂಬಂಧ ಸದ್ಯ ಪೊಲೀಸರು FIR ದಾಖಲಿಸಿದ್ದಾರೆ. ಹೋಟೆಲ್ ನ ಸೆಕ್ಯೂರಿಟಿ ಎಕ್ಸ್ ಕ್ಯೂಟಿವ್ ಎಂ ವೈ ತಿಮ್ಮೇಗೌಡ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಮೇಲ್ ಐಡಿಗೆ ka_radhakrishnan@hotmail.com ಎಂಬ ಐಡಿ ಯಿಂದ ಬಾಂಬ್ ಬೆದರಿಕೆ ಬಂದಿದೆ. ಹೋಟೆಲ್ ನ ಹೈ ಗ್ರಾಸ್ ಪ್ರೆಶರ್ ಚೇಂಬರ್ (High gross pressure chamber) ನಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಅನಾಮಿಕ ಬೆದರಿಕೆ ಈ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಎಫ್ಐಆರ್ ನಲ್ಲಿ ಪ್ರಕರಣದಲ್ಲಿ ಆರೋಪಿಯಾಗಿ ರಾಧಾಕೃಷ್ಣನ್ ಕೆ ಐಪಿಎಸ್ ಎಂದು ಉಲ್ಲೇಖ ಮಾಡಲಾಗಿದೆ.ಸದ್ಯ ಈ ರೀತಿ ನಕಲಿ ಹೆಸರನ್ನ ಬಳಸಿಕೊಂಡು ಮೇಲ್ ಮಾಡಿರೋ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಹೈಗ್ರೌಂಡ್ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.