ವಾಷಿಂಗ್ಟನ್ – ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Former President Donald Trump)ಅವರನ್ನು ಹತ್ಯೆಗೈಯ್ಯಲು ಶನಿವಾರ ರಾತ್ರಿ ವಿಫಲ ಯತ್ನ ನಡೆದಿದೆ. ಶಾರ್ಪ್ ಶೂಟರ್ ಹಾರಿಸಿದ ಗುಂಡು (bullet)ಅವರ ತಲೆಗೆ ತಗುಲುವ ಬದಲು ಕಿಯಿವ ಭಾಗಕ್ಕೆ ತಗುಲಿ ಅವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬಂದೂಕುಧಾರಿಯೊಬ್ಬ ಪೆನ್ಸಿಲ್ವೇನಿಯಾದಲ್ಲಿ ನಡೆಯುತಿದ್ದ ಟ್ರಂಪ್ ಅವರ ಚುನಾವಣಾ ಪ್ರಚಾರ ಸಭೆಯ ವೇಳೆ ಟ್ರಂಪ್ ಅವರ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿದನು ಮತ್ತು ಕೂಡಲೇ ಅಮೆರಿಕದ ಗುಪ್ತರಚ ಅಧಿಕಾರಿಗಳು ಆತನನ್ನು ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ. ಈಘಟನೆಯಲ್ಲಿ ಈರ್ವರು ನಾಗರಿಕರು ಹತ್ಯೆ ಆಗಿದ್ದಾರೆ.
“ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯ. ಶೂಟರ್ ಬಗ್ಗೆ ಈ ಸಮಯದಲ್ಲಿ ಏನೂ ತಿಳಿದಿಲ್ಲ, ಅವರು ಆತ ಸತ್ತಿದ್ದಾನೆ ಎಂದು ಟ್ರಂಪ್ ಸೋಶಿಯಲ್ ಮೀಡಿಯಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.”ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ತಾಗಿ ಬುಲೆಟ್ ಹೋಗಿದ್ದರಿಂದ ಗಾಯವಾಗಿದೆ ಎಂದರು. ಅಧ್ಯಕ್ಷ ಜೋ ಬಿಡೆನ್ ಗುಂಡಿನ ದಾಳಿಯನ್ನು ಖಂಡಿಸಿದರು, , “ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರ ಅಥವಾ ಹಿಂಸಾಚಾರವಿದೆ ಎಂಬ ಕಲ್ಪನೆ ಇಲ್ಲ , ಇದು ಸೂಕ್ತವಲ್ಲ. ಎಲ್ಲರೂ, ಪ್ರತಿಯೊಬ್ಬರೂ ಅದನ್ನು ಖಂಡಿಸಬೇಕು. ಎಂದರು. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಸ್ಥಳವಿಲ್ಲ. ಇದು ಅನಾರೋಗ್ಯ. ಇದು ಅನಾರೋಗ್ಯ, ”ಬಿಡೆನ್ ಸುದ್ದಿಗಾರರಿಗೆ ತಿಳಿಸಿದರು.ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಅವರು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು, ಆಗ ಗುಂಡಿನ ಧಾಳಿ ನಡೆದಿದ್ದು ರಿಪಬ್ಲಿಕನ್ ಅಭ್ಯರ್ಥಿಯು ವೇದಿಕೆಗೆ ಆಗಮಿಸುವ ಮೊದಲು ಈ ಧಾಳಿ ನಡೆದಿದೆ. ಕೆಲವು ಕ್ಷಣಗಳ ನಂತರ ಗುಪ್ತಚರ ಅಧಿಕಾರಿಗಳ ದಂಡು ಟ್ರಂಪ್ ಅವರನ್ನು ಅವರ ಕರೆತಂದಾಗ ಅವರ ಕಿವಿ ಮತ್ತು ಮುಖವು ರಕ್ತಸಿಕ್ತವಾಗಿತ್ತು. ಟ್ರಂಪ್ ಅವರು ವೇದಿಕೆಯಿಂದ ಮತ್ತು ರ್ಯಾಲಿಯಿಂದ ಹೊರಬರುತಿದ್ದಂತೆ ಗಾಳಿಯಲ್ಲಿ ಪ್ರತಿಭಟನೆಯ ಮುಷ್ಟಿಯನ್ನು ಎತ್ತಿದರು. ನನ್ನ ಕಿವಿಯಿಂದ ರಕ್ತಸ್ರಾವ ಆದಾಗಲೇ ನನ್ನ ಮೇಲೆ ಧಾಳಿ ನಡೆದಿದ್ದುದು ಗೊತ್ತಾಯಿತು. ದೇವರು ಅಮೆರಿಕಾವನ್ನು ಚೆನ್ನಾಗಿಟ್ಟಿರಲಿ ಎಂದರು.