ಹೆಚ್ಚು ಜನ ಈ ಒಂದು ಸಮಸ್ಯೆಗೆ ಒಳಗಾಗ್ತಾ ಇದ್ದಾರೆ. ಯಾವುದು ಅಂದ್ರೆ ಫುಡ್ ಪಾಯಿಸನ್. ಫುಡ್ ಪಾಯ್ಸನಿಂಗ್ ಎಂದರೆ ಕಲುಷಿತ ಆಹಾರ ಸೇವನೆಯಿಂದ ಉಂಟಾಗುವ ಕಾಯಿಲೆ .ಈ ಫುಡ್ ಪಾಯಿಸನ್ ಆಗುವಂತದ್ದು ನಾವು ಹೆಚ್ಚಾಗಿ ಹೊರಗಿನ ಆಹಾರವನ್ನ ತಿನ್ನೋದ್ರಿಂದ ಲೈಕ್ ಜಂಕ್ ಫುಡ್ ಅಥವಾ ಹೊರಗಡೆ ಹೋಟೆಲ್ ಫುಡ್ ಹಾಗೂ ರೋಡ್ ಸೈಡ್ ಫುಡ್ ಗಳನ್ನು ತಿನ್ನೋದ್ರಿಂದ ಅದರಲ್ಲಿ ಇರುವಂತಹ ವಿಷಕಾರಿ ಅಂಶ ನಮ್ಮ ದೇಹವನ್ನು ಸೇರಿದಾಗ ನಮಗೆ ಫುಡ್ ಪಾಯಿಸನ್ ಆಗುತ್ತದೆ.

ಇನ್ನು ಕೆಲವರಿಗೆ ಮನೆಯಲ್ಲಿ ಇರುವಂತ ಆಹಾರವನ್ನ ತಿನ್ನೋದ್ರಿಂದ ಫುಟ್ಪಾಯ್ಸನ್ ಆಗುವಂತ ಚಾನ್ಸಸ್ ಇರುತ್ತೆ ಗೊತ್ತಿಲ್ಲದೆ ಕೆಲವೊಮ್ಮೆ ಲೈಟಾಗಿ ಹಾಳಾಗಿರುವ ಐಟಂ ಏನಾದ್ರೂ ತಿಂದಾಗ ಬ್ಯಾಕ್ಟೀರಿಯಾ ಗಳು ನಮ್ಮ ದೇಹಕ್ಕೆ ಸೇರಿ ವಿಷಕಾರಿ ಅಂಶವನ್ನು ನಮಗೆ ಫುಡ್ ಪಾಯಿಸನ್ ಆಗುತ್ತೆ.. . ಇದು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ ಮತ್ತು ಹೆಚ್ಚಿನ ಜನರು ಚಿಕಿತ್ಸೆಯಿಲ್ಲದೆ ಕೆಲವೇ ದಿನಗಳಲ್ಲಿ ಸುಧಾರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಆಹಾರವು ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಕಲುಷಿತಗೊಂಡಿದ್ದರೆ ಕ್ಯಾಂಪಿಲೋಬ್ಯಾಕ್ಟರ್ – ಆಹಾರ ವಿಷದ ಸಾಮಾನ್ಯ ಕಾರಣವಾಗಿದೆ.

ಈ ಫುಡ್ ಪಾಯಿಸನ್ ಆದಾಗ ಗಾಬರಿಯಾಗದೆ ಮನೆಯ ಮದ್ದನ್ನೇ ತಗೊಂಡ್ರೆ ಫುಡ್ ಪಾಯಿಸನ್ ಇಮ್ಮಿಡಿಯೇಟ್ ಆಗಿ ಕಡಿಮೆಯಾಗುತ್ತೆ..
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ನ್ಯಾಚುರಲ್ ಆಂಟಿಸಿಟ್ ಅಂಶ ಇರುತ್ತದೆ ಇದು ಅಜೀರ್ಣದಂತಹ ರೋಗಲಕ್ಷಣಗಳನ್ನ ನಿವಾರಿಸುತ್ತದೆ ಮತ್ತು ಬಾಳೆ ಹಣ್ಣು ಹೊಟ್ಟೆಯಲ್ಲಿ ಲೋಳೆಯನ್ನು ಉತ್ಪಾದನೆಯನ್ನ ಹೆಚ್ಚು ಮಾಡುತ್ತದೆ..ಹೊಟ್ಟೆಯಲ್ಲಿ ಆಗ್ತಾ ಇರುವಂತ ಇರ್ರಿಟೇಷನ್ ನ ದೂರ ಮಾಡುತ್ತದೆ..ಫುಡ್ ಪಾಯಿಸನ್ ಇಂದ ದೂರ ಆಗೋದಿಕ್ಕೆ ಬೆಸ್ಟ್ ರೆಮಿಡಿ..

ಆಪಲ್ ಸೈಡರ್ ವಿನಿಗರ್
ಆಪಲ್ ಸೈಡರ್ ವಿನಿಗರ್ ನಲ್ಲಿ ಆಂಟಿ ಬ್ಯಾಕ್ಟೀರಿಯ ಅಂಶ ಹೆಚ್ಚಿರುತ್ತದೆ. ಫುಡ್ ಪಾಯಿಸನ್ ಗೆ ಒಂದು ಎಫೆಕ್ಟಿವ್ ರೆಮಿಡಿ ಅಂತ ಹೇಳಿದರೆ ತಪ್ಪಾಗಲ್ಲ. ಒಂದು ಲೋಟ ಉಗುರು ಬೆಚ್ಚ ನೀರಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವೆನಿಗರನ್ನ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಫುಡ್ ಪಾಯಿಸನ್ ಬೇಗನೆ ನಿವಾರಣೆ ಆಗುತ್ತದೆ.

ನಿಂಬೆ ರಸ
ಒಂದು ಲೋಟ ನೀರಿಗೆ ಅರ್ಧದಷ್ಟು ನಿಂಬೆರಸವನ್ನ ಹಾಕಿ ಕುಡಿಯೋದ್ರಿಂದ ಇಮ್ಮಿಡಿಯೇಟ್ ಆಗಿ ಫುಡ್ ಪಾಯಿಸನ್ ಕಡಿಮೆ ಆಗುತ್ತೆ . ಫುಡ್ ಪಾಯಿಸನ್ ಗೆ ನಿಂಬೆಹಣ್ಣಿನ ರಸ ರಾಮಬಾಣ ಅಂತ ಹೇಳಿದ್ರೆ ತಪ್ಪಾಗಲ್ಲ ಇದು ನಮ್ಮ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ. ಇದು ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿದೆ ಏಕೆಂದರೆ ಇದು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ..
