Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Fact Check : ಪ್ರಧಾನಿ ನರೇಂದ್ರ ಮೋದಿಗೆ ನೋಬೆಲ್ ಶಾಂತಿ​ ಪ್ರಶಸ್ತಿ.. ಸುಳ್ಳಿನ ಹಿಂದಿನ ಸತ್ಯ..

ಪ್ರತಿಧ್ವನಿ

ಪ್ರತಿಧ್ವನಿ

March 17, 2023
Share on FacebookShare on Twitter

ನವದೆಹಲಿ:ಮಾ.17: ಪ್ರಧಾನಿ ನರೇಂದ್ರ ಮೋದಿಗೆ ನೋಬೆಲ್​ ಶಾಂತಿ ಪ್ರಶಸ್ತಿ ಸಿಗುವ ಎಲ್ಲಾ ಅರ್ಹತೆಗಳು ಇವೆ ಎಂದು ನೋಬೆಲ್​ ಶಾಂತಿ ಪ್ರಶಸ್ತಿ ಡೆಪ್ಯುಟಿ ಲೀಡರ್​​ ಅಸ್ಲೆ ತೋಜೆ ಅಭಿಪ್ರಾಯಪಟ್ಟಿದ್ದಾರೆ ಎಂದು ಭಾರತೀಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಪ್ರಧಾನಿ ಮೋದಿ ವಿಶ್ವ ಮನ್ನಣೆ ಪಡೆದಿರುವ ನಾಯಕ. ಭಾರತದಲ್ಲಿ ಸಾಕಷ್ಟು ವರ್ಷಗಳಿಂದ ಮೋದಿ ನಾಯಕತ್ವ ಆಳ್ವಿಕೆ ನಡೆಯುತ್ತಿದೆ. ರಷ್ಯಾ ಹಾಗು ಉಕ್ರೇನ್​ ನಡುವಿನ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು ನೊಬೆಲ್ ಪ್ರಶಸ್ತಿಗೆ ಪರಿಗಣಿಸಬಹುದು ಎಂದು ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ ಹೇಳಿದ್ದಾರೆ ಎಂದು ಟ್ವೀಟ್​ ಮಾಡಲಾಗಿತ್ತು. ಈ ವಿಚಾರ ಅಬ್ಬರದ ಪ್ರಚಾರ ವೇಗವನ್ನೂ ಪಡೆದಿತ್ತು. ಆದರೆ ಇದೀಗ ನಕಲಿ ಟ್ವೀಟ್ ಪೋಸ್ಟ್ ಮಾಡಲಾಗಿದೆ ಎಂದು ಸ್ವತಃ ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ (Nobel Prize Committee Asle Toje) ಉಲ್ಲೇಖಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಒಂದೇ ದಿನದಲ್ಲಿ ಸುಳ್ಳಿನ ಹೇಳಿಕೆಗೆ ಬಿತ್ತು ಬ್ರೇಕ್​..!

(Nobel Prize Committee Asle Toje) ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದನ್ನು ಗಮನಿಸಿದ್ದ ಅಸ್ಲೆ ತೋಜೆ, ನಾನು ಅದನ್ನು ಹೇಳಿದ್ದೇನೆ ಎನ್ನುವ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವರದಿಗಳು ಸುಳ್ಳು ಎಂದಿದ್ದಾರೆ. ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ, ನಾವು ನೋಬೆಲ್​ ಬಗ್ಗೆ ಚರ್ಚಿಸಬಾರದು. ನಾನು ಆ ರೀತಿಯ ಅಭಿಪ್ರಾಯ ಬರುವಂತಹ ಹೇಳಿಕೆಯನ್ನೂ ನೀಡಿಲ್ಲ. ಭಾರತಕ್ಕೆ ನಾನು ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕನಾಗಿ ಬಂದಿಲ್ಲ. ನಾನು ಅಂತಾರಾಷ್ಟ್ರೀಯ ಶಾಂತಿ ಮತ್ತು ಜಾಗೃತಿ ನಿರ್ದೇಶಕನಾಗಿ ಹಾಗು ಭಾರತದ ಸ್ನೇಹಿತನಾಗಿ ಇಲ್ಲಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾ ಹಾಗು ಉಕ್ರೇನ್ ಸಂಘರ್ಷದ ಸಮಯದಲ್ಲಿ “ಇದು ಯುದ್ಧದ ಯುಗವಲ್ಲ” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಮೋದಿ ನೆನಪಿಸಿದ ವಿಚಾರವಾಗಿ ಮಾತನಾಡಿದ್ದರು. ಇದೇ ಕಾರಣಕ್ಕೆ ನೋಬೆಲ್​ ಶಾಂತಿ ಪ್ರಶಸ್ತಿ ಎನ್ನುವ ವರದಿಗಳು ಆಗಿದ್ದವು.

‘ಭಾರತ ಸ್ನೇಹಿತನಾಗಿ ರಷ್ಯಾ ಎಚ್ಚರಿಸಿತ್ತು’

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಮಾತನಾಡಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಒಂದು ದುರಂತ. ಯುದ್ಧ ಅಂತ್ಯ ಮಾಡಬೇಕಿದೆ. ವಿಶ್ವದ ಇತರೆ ರಾಷ್ಟ್ರಗಳು ಯುದ್ಧ ನಿಲ್ಲಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಭಾರತದ ಮಧ್ಯಸ್ಥಿಕೆಯನ್ನು ನಾವು ನೆನಪಿಸಿಕೊಳ್ಳಬೇಕು. ಪರಮಾಣು ಶಸ್ತ್ರಾಸ್ತ್ರ ಬಳಕೆ ಸರಿಯಲ್ಲ. ವಿವಾದಗಳನ್ನು ಯುದ್ಧದ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಬಾರದು. ಇದೇ ಸಂದೇಶವನ್ನು ಭಾರತ ರಷ್ಯಾಗೆ ನೀಡಿದೆ ಎಂದಿದ್ದರು. ಭಾರತ ಯಾವುದೇ ಏರು ದನಿಯಲ್ಲಿ ಇದನ್ನು ಮನದಟ್ಟು ಮಾಡಲಿಲ್ಲ. ಆದರೆ ಇದೇ ವಿಷಯವನ್ನು ಭಾರತ ಸ್ನೇಹಪರವಾಗಿ ತಿಳಿಸಿತು. ಭಾರತವು ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಇದರ ಅಗತ್ಯವಿದೆ ಎಂದಿದ್ದರು.

ಭಾರತದಲ್ಲಿ ಸುಳ್ಳನ್ನೇ ಸತ್ಯ ಎನ್ನುವ ಜಮಾನ..!!

ಭಾರತದಲ್ಲಿ ಸುಳ್ಳನ್ನು ಹೇಳಿ ಜನರನ್ನು ನಂಬಿಸುವ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಯಾವುದಾದರೂ ಚುನಾವಣೆಗಳು ಬಂದ ವೇಳೆ ಹಸಿ ಸುಳ್ಳುಗಳನ್ನೇ ಪ್ರಚಾರ ಮಾಡಲಾಗುತ್ತದೆ. ವಾಟ್ಸ್​ ಆ್ಯಪ್​, ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರ ಮುಗ್ದತೆಯನ್ನು ಸೆಳೆಯುವ ಕೆಲಸ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಉತ್ಪೇಕ್ಷೆ ಮಾಡಿ ರಿಪೋರ್ಟ್​ ಹಾಕುವುದು. ಇಡೀ 70 ವರ್ಷದಲ್ಲಿ ಮಾಡಿದ್ದ ಸಾಲವನ್ನು ತೀರಿಸಿದ್ದಾರೆ ಅಂತಾ ಸುಳ್ಳು ಹೇಳುವುದು. ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಚೇತರಿಕೆಗೆ ಸಾಥ್​ ನೀಡಿದ್ದಾರೆ ಎನ್ನುವುದು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಮೇಲೆ ನಡೆದ ಏರ್​ ಸ್ಟ್ರೈಕ್​ನಲ್ಲಿ 400 ಜನ ಪಾಕಿಸ್ತಾನಿ ಭಯೋತ್ಪಾಧಕರನ್ನು ಹೊಡೆದು ಹಾಕಿದ್ದೇವೆ ಎನ್ನುವುದು. ಹೀಗೆ ಚುನಾವಣೆ ಬರುತ್ತಿದ್ದ ಹಾಗೆ ಸುಳ್ಳುಗಳ ವಿಶ್ವವಿದ್ಯಾಲಯಗಳು ಆರಂಭವಾಗುತ್ತವೆ. ಅಭಿವೃದ್ಧಿ ಹೆಸರಿನಲ್ಲಿ ಗೆಲ್ಲಲಾಗದ ಬಿಜೆಪಿ ರಾಮಮಂದಿರ, ದೇವರು, ಮಂದಿರ, ಮಸೀದಿ , ಚರ್ಚ್​ ವಿಚಾರದಲ್ಲಿ ಸಂಘರ್ಷ ಸೃಷ್ಟಿಸಿ ಗೆಲುವು ಸಾಧಿಸುತ್ತದೆ ಎನ್ನುವುದು ವಿಪಕ್ಷಗಳ ಆರೋಪ. ಇದೇ ಆರೋಪಕ್ಕೆ ನೋಬೆಲ್​ ಶಾಂತಿ ಪುರಸ್ಕಾರ ಕೂಡ ಸೇರಿಕೊಳ್ಳಲಿದೆ ಎನ್ನಬಹುದು.

—–ಕೃಷ್ಣಮಣಿ—-

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

SUMALATHA | MANDYA | ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಛಿದ್ರ … ದಳಪತಿಗಳಿಗೆ ಸುಮಲತಾ ಅಂಬರೀಷ್ ಚಾಲೆಂಜ್
ಇದೀಗ

SUMALATHA | MANDYA | ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಛಿದ್ರ … ದಳಪತಿಗಳಿಗೆ ಸುಮಲತಾ ಅಂಬರೀಷ್ ಚಾಲೆಂಜ್

by ಪ್ರತಿಧ್ವನಿ
March 26, 2023
ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ
Top Story

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

by ಮಂಜುನಾಥ ಬಿ
March 21, 2023
ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಬಂಧನ..!
Top Story

ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಬಂಧನ..!

by ಪ್ರತಿಧ್ವನಿ
March 21, 2023
DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS
ಇದೀಗ

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS

by ಪ್ರತಿಧ್ವನಿ
March 26, 2023
ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI
ಇದೀಗ

ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI

by ಪ್ರತಿಧ್ವನಿ
March 23, 2023
Next Post
ಸೋಮಣ್ಣ ಮುಚ್ಚಿಟ್ಟಿದ್ದನ್ನು ಯಡಿಯೂರಪ್ಪ ಬಿಚ್ಚಿಟ್ಟಿದ್ಯಾಕೆ..? ಬಿಜೆಪಿಯಲ್ಲಿ ಏನಾಗ್ತಿದೆ..? : Why did Yediyurappa Reveal What Somanna Had hidden?

ಸೋಮಣ್ಣ ಮುಚ್ಚಿಟ್ಟಿದ್ದನ್ನು ಯಡಿಯೂರಪ್ಪ ಬಿಚ್ಚಿಟ್ಟಿದ್ಯಾಕೆ..? ಬಿಜೆಪಿಯಲ್ಲಿ ಏನಾಗ್ತಿದೆ..? : Why did Yediyurappa Reveal What Somanna Had hidden?

PRIYANKA UPENDRA | ಫಸ್ಟ್ ಟೈಂ ರೆಟ್ರೂ ಲುಕ್ ನಲ್ಲಿ ಉಪೇಂದ್ರ ಆಕ್ಟಿಂಗ್ #PRATIDHVANI

PM Modi..  Do you Collect toll without Service? Democracy is being Destroyed By your Government : ಮೋದಿ ಏನಪ್ಪಾ ನಿಂದು ಅಂಧ ದರ್ಬಾರ್ ? ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ : ಎಚ್.ವಿಶ್ವನಾಥ್

PM Modi.. Do you Collect toll without Service? Democracy is being Destroyed By your Government : ಮೋದಿ ಏನಪ್ಪಾ ನಿಂದು ಅಂಧ ದರ್ಬಾರ್ ? ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ : ಎಚ್.ವಿಶ್ವನಾಥ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist