• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಜರ್ಮನಿ ಪ್ರವಾಸದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಮೋದಿ ಹೇಳಿದ ಸುಳ್ಳುಗಳು

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
August 16, 2022
in ದೇಶ, ರಾಜಕೀಯ, ವಿದೇಶ
0
ಜರ್ಮನಿ ಪ್ರವಾಸದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಮೋದಿ ಹೇಳಿದ ಸುಳ್ಳುಗಳು

Indian Prime Minister Narendra Modi speaks as he attends a news conference during the German-Indian government consultations at the Chancellery in Berlin, Germany May 2, 2022. REUTERS/Lisi Niesner


Share on WhatsAppShare on FacebookShare on Telegram

ಫ್ಯಾಕ್ಟ್ ಚೆಕ್ ವರದಿ –

ADVERTISEMENT

ಭಾರತೊಳಗಿರಲಿ ಅಥವಾ ವಿದೇಶ ಪ್ರವಾಸದಲ್ಲಿರಲಿ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಯ ಕುರಿತು ವಾಸ್ತವ ಅಂಕಿಅಂಶಗಳನ್ನು ತಿರುಚಿ ಸುಳ್ಳು ಹೇಳುವುದು ಅನೇಕ ವೇಳೆ ರುಜುವಾತಾಗಿದೆ. ಮೋದಿ ಸುಳ್ಳುಗಳನ್ನು ಬಹಳ ಲೀಲಾಜಾಲವಾಗಿ ಹೇಳುವ ಕಲೆ ಸಿದ್ಧಿಸಿಕೊಂಡವರು. ಅವರು ತರಬೇತಿ ಪಡೆದ ಶಾಲೆಯೆ ಅಂತಹ ಸುಳ್ಳಿನ ಹಿನ್ನೆಲೆ ಹೊಂದಿರುವಂತದ್ದು. ಜುಲೈ ೪ ರ ಸ್ಕ್ರಾಲ್.ಇನ್ ವೆಬ್ ಜರ್ನಲಲ್ಲಿ ಪ್ರಕಟವಾದ ನಿಧಿ ಜಾಕೋಬ್ ಅವರ ಅಂಕಣವು ಜರ್ನಮಿಯಲ್ಲಿ ಮೋದಿ ಹೇಳಿದ ಸುಳ್ಳುಗಳನ್ನು ಅಂಕಿಅಂಶಗಳ ಸಮೇತ ನಿರೂಪಿಸಿದೆ. ಈ ಸತ್ಯಶೋಧನಾ ವರದಿಯು ಅಸಲಿ ಅಂಕಿಅಂಶಗಳ ಸಮೇತ ಮೊದಲು ಫ್ಯಾಕ್ಟ್ ಚೆಕ್ಕರ್. ಇನ್ ಪ್ರಕಟಿಸಿತ್ತು ಎನ್ನಲಾಗಿದೆ.

ಜೂನ್ ೨೬ ಮತ್ತು ಜೂನ್ ೨೮ ರ ಅವಧಿಯಲ್ಲಿ ೪೮ ನೇ ಜಿ೭ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಜರ್ಮನಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಏಳು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಭಾರತದಲ್ಲಾದ ಅಭಿವೃದ್ಧಿ ಮತ್ತು ತಮ್ಮ ಸಾಧನೆಗಳ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಿದ್ದರು. ಪ್ರಧಾನಿ ಮೋದಿ ಅವರು ತಮ್ಮ ಆಡಳಿತ ಅವಧಿಯಲ್ಲಿ ದೇಶದಲ್ಲಿ ಆಗಿದೆ ಎನ್ನಲಾದ ಬೆಳವಣಿಗೆಯ ಕಥೆಯನ್ನು ವರ್ಣಿಸುತ್ತಾ ದೇಶದ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವ ಉದ್ದೇಶದಿಂದ ಸರಕಾರವು ಕೈಗೊಂಡ ವಿವಿಧ ಉಪಕ್ರಮಗಳನ್ನು ಪ್ರಸ್ತಾಪಿಸಿದ್ದರು. ಭಾರತದ “ಯಶಸ್ಸಿನ ಕಥೆ” ಯನ್ನು ಉತ್ತೇಜಿಸುವಲ್ಲಿ ವಲಸಿಗರ ಕೊಡುಗೆಯನ್ನು ಅವರು ಶ್ಲಾಘಿಸಿದ್ದರು ಎನ್ನಲಾಗಿದೆ.

ಜರ್ಮನಿಯ ಮ್ಯೂನಿಚ್‌ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಆಡಳಿತಾವಧಿಯ ಕಳೆದ ಏಳು ವರ್ಷಗಳಲ್ಲಿ ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ, ಗ್ಯಾಸ್ ಸಂಪರ್ಕಗಳು ಮತ್ತು ಶೌಚಾಲಯ ಸೌಲಭ್ಯಗಳಂತಹ ವಿವಿಧ ಕ್ಷೇತ್ರಗಳಲ್ಲಿ ದೇಶ ಕಂಡ ಮಹತ್ತರವಾದ ಬೆಳವಣಿಗೆಯ ಕುರಿತು ಮಾತನಾಡಿದ್ದರು. ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಮೋದಿ ಹೇಳಿದ ನಾಲ್ಕು ಸುಳ್ಳುಗಳ ಕುರಿತು ಸತ್ಯಶೋಧನೆಯ ಆಧಾರದಲ್ಲಿ ಫ್ಯಾಕ್ಟ್ ಚೆಕ್ಕರ್.ಇನ್ ಅವುಗಳ ವಾಸ್ತವಾಂಶಗಳನ್ನು ಬಿಚ್ಚಿಟ್ಟಿದೆ.

ಮೋದಿ ಹೇಳಿಕೆ-೧: “ಇಂದು ಭಾರತದ ಪ್ರತಿಯೊಂದು ಗ್ರಾಮವೂ ಬಯಲು ಶೌಚ ಮುಕ್ತವಾಗಿದೆ.”

ಸತ್ಯ ಪರಿಶೀಲನೆ: ಮೋದಿಯವರ ಈ ಹೇಳಿಕೆ ಸಂಪೂರ್ಣ ಸುಳ್ಳುಗಳಿಂದ ಕೂಡಿದೆ.

ವಿವರಣೆ: ಅಕ್ಟೋಬರ್ ೨೦೧೯ ರಲ್ಲಿ ಒಕ್ಕೂಟ ಸರಕಾರದ ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ನ ನಿರ್ವಹಣಾ ಮಾಹಿತಿ ವ್ಯವಸ್ಥೆಯು ಭಾರತವನ್ನು ಸಂಪೂರ್ಣ ಬಯಲು ಶೌಚ ಮುಕ್ತ ಎಂದು ಘೋಷಿಸಿತ್ತು. ಆದಾಗ್ಯೂ, ಸರಕಾರದ ಸ್ವಚ್ಛ ಭಾರತ್ ಮಿಷನ್ ನೀಡಿದ ಮಾಹಿತಿ ಮತ್ತು ಇತರ ಅಧಿಕೃತ ವರದಿಗಳ ನಡುವಿನ ವ್ಯತ್ಯಾಸಗಳನ್ನು ಕೆಲವು ವರದಿಗಳು ತೋರಿಸತ್ತವೆ. ಸರಕಾರವು ದೇಶ “ಬಯಲು ಶೌಚ ಮುಕ್ತ” ಎಂದು ಘೋಷಿಸಿ ಅದನ್ನು ಈ ಕೆಳಗಿನಂತೆ ಸಾಧಿಸಲಾಗಿದೆ ಎಂದು ವಿವರಿಸಲಾಗಿದೆ:

೧. ದೇಶದ ಗ್ರಾಮೀಣ ಪರಿಸರದ ಬಯಲಿನಲ್ಲಿ ಯಾವುದೇ ಸ್ಥಳಗಳಲ್ಲಿ ಮಲ ಕಂಡುಬರುವುದಿಲ್ಲ.

೨. ಪ್ರತಿಯೊಂದು ಮನೆ ಮತ್ತು ಸಾರ್ವಜನಿಕ / ಸಮುದಾಯ ಸಂಸ್ಥೆಗಳು ಸುರಕ್ಷಿತ ತಂತ್ರಜ್ಞಾನ ಆಯ್ಕೆಯನ್ನು ಬಳಸುವ ಮೂಲಕ ಮಲ ವಿಲೇವಾರಿ ಮಾಡುತ್ತಿವೆ.

ಅಕ್ಟೋಬರ್ ೨, ೨೦೧೯ರ ಗಾಂಧಿ ಜಯಂತಿಯ ವೇಳೆಗೆ ದೇಶದ ಗ್ರಾಮೀಣ ಪ್ರದೇಶಗಳನ್ನು ಸಂಪೂರ್ಣ ಬಯಲು ಶೌಚ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಅನ್ನು ಅಕ್ಟೋಬರ್ ೨೦೧೪ ರಲ್ಲಿ ಪ್ರಾರಂಭಿಸಲಾಗಿತ್ತು. ಇದನ್ನು ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಶೌಚಾಲಯಗಳನ್ನು ಒದಗಿಸುವ ಮೂಲಕ ಸಾಧಿಸಲಾಗಿದೆ ಎಂತಲೂˌ ಫೆಬ್ರವರಿ ವೇಳೆಗೆ, ದೇಶದಲ್ಲಿ ಸುಮಾರು ೧೦.೯ ಕೋಟಿ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ಮೋದಿ ಸರಕಾರ ನೀಡಿದ ಈ ಹೇಳಿಕೆಯ ಹಕ್ಕನ್ನು ಪರಿಕ್ಷಿಸಲು ಫ್ಯಾಕ್ಟ್ ಚೆಕ್ಕರ್ ಮೂರು ಪ್ರಮುಖ ಡೇಟಾ ಮೂಲಗಳನ್ನು ಪರಿಶೀಲಿಸಿದೆಯಂತೆ: ಅವುಗಳಾವುವೆಂದರೆˌ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೫, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ನ ಜುಲೈ ೨೦೨೧ ರ ವರದಿ ಮತ್ತು ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ -೨೦೧೯-‘೨೦.

ಮಾರ್ಚ್‌ನಲ್ಲಿ ಪ್ರಕಟವಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೫ ರ ಪ್ರಕಾರ, ದೇಶದಲ್ಲಿ ೮೩% ಕುಟುಂಬಗಳು ಶೌಚಾಲಯ ಸೌಲಭ್ಯವನ್ನು ಹೊಂದಿದ್ದರೆ, ೧೯% ಕುಟುಂಬಗಳು ಯಾವುದೇ ಶೌಚಾಲಯ ಸೌಲಭ್ಯವನ್ನು ಹೊಂದಿರುವುದಿಲ್ಲ, ಅಂದರೆ ಆ ಕುಟುಂಬಗಳು ಬಯಲಿನಲ್ಲಿ ಶೌಚ ಮಾಡುತ್ತವೆ ಎಂದು ಆ ವರದಿಯ ಅರ್ಥ.

ಶೌಚಾಲಯಗಳ ಬಳಕೆಯು ಗ್ರಾಮೀಣ ಪ್ರದೇಶಗಳಿಗಿಂತ (೭೬%) ನಗರ ಪ್ರದೇಶಗಳಲ್ಲಿ (೯೬%) ಹೆಚ್ಚಿದೆ ಎನ್ನುತ್ತವೆ ವರದಿಗಳು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ವರ್ಗಗಳ ೬೯% ಕುಟುಂಬಗಳು ಮತ್ತು ಪರಿಶಿಷ್ಟ ಪಂಗಡದ ೯೩% ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿವೆಯಂತೆ. ಈ ಪಟ್ಟಿಯಲ್ಲಿ ೬೨% ಶೌಚಾಲಯ ಸೌಲಭ್ಯ ಹೊಂದಿರುವ ಬಿಹಾರ ಕೊನೆಯ ಸ್ಥಾನದಲ್ಲಿದ್ದರೆ ಅದರ ಮೇಲಿನ ಸ್ಥಾನಗಳಲ್ಲಿ ಜಾರ್ಖಂಡ್ (೭೦%) ಮತ್ತು ಒಡಿಶಾ (೭೧%) ನಿಲ್ಲುತ್ತವೆ ಎನ್ನುತ್ತವೆ ವರದಿಗಳು. ಒಟ್ಟಾರೆಯಾಗಿ, ಬಯಲು ಶೌಚದ ಕುಟುಂಬಗಳ ಸಂಖ್ಯೆಯ ಶೇಕಡಾವಾರು ಪ್ರಮಾಣವು ೨೦೧೫-‘೧೬ ರಲ್ಲಿ ೩೯% ರಿಂದ ೨೦೧೯-‘೨೧ ರಲ್ಲಿ ೧೯% ಕ್ಕೆ ಇಳಿದಿದೆಯಂತೆ.

ಈ ಹಿಂದೆ, ಜುಲೈ ೨೦೨೧ ರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ನ ನೀರು, ನೈರ್ಮಲ್ಯೀಕರಣ ಮತ್ತು ನೈರ್ಮಲ್ಯದ ವರದಿಯು ಭಾರತದಲ್ಲಿ ಒಟ್ಟು ಜನಸಂಖ್ಯೆಯ ಕನಿಷ್ಠ ೧೫% ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಾರೆ ಎಂದು ಹೇಳಿತ್ತು. ಇದರಲ್ಲಿ ಗ್ರಾಮೀಣ ಪ್ರದೇಶದ ೨೨% ಮತ್ತು ನಗರ ಪ್ರದೇಶ ೧% ಸೇರಿದೆ ಎನ್ನುತ್ತವೆ ಸತ್ಯ ಶೋಧನಾ ವರದಿಗಳು. ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯ ವರದಿಯ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ೯೧,೯೩೪ ಗ್ರಾಮೀಣ ಕುಟುಂಬಗಳಲ್ಲಿ ˌ ೯೪.೪% ಕುಟುಂಬಗಳು ಶೌಚಾಲಯಗಳನ್ನು ಹೊಂದಿವೆ. ಅಂದರೆ ಶೇ. ೫.೬% ರಷ್ಟು ಕುಟುಂಬಗಳಿಗೆ ಶೌಚಾಲಯದ ಸೌಲಭ್ಯವಿಲ್ಲ ಎನ್ನುತ್ತವೆ ವರದಿಗಳು.

ಮೋದಿ ಹೇಳಿಕೆ-೨: “ಇಂದು ಭಾರತದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ತಲುಪಿದೆ.”

ಸತ್ಯ ಪರಿಶೀಲನೆ: ಹೇಳಿಕೆಯು ಸಂಪೂರ್ಣ ಸುಳ್ಳಿನಿಂದ ಕೂಡಿದೆ.

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಸಮಗ್ರ ವಿದ್ಯುತ್ ವಿತರಣಾ ಯೋಜನೆ ಮತ್ತು ಉಜ್ವಲ್ ಡಿಸ್ಕಾಂ ಅಶ್ಯೂರೆನ್ಸ್ ಯೋಜನೆ ಸೇರಿದಂತೆ ದೇಶದ ಎಲ್ಲಾ ಮನೆಗಳಿಗೆ ೨೪X೭ ನಿರಂತರ ವಿದ್ಯುತ್ ಪೂರೈಕೆಗಾಗಿ ಮೇಲಿನ ಮೂರು ಕೇಂದ್ರ ಸರಕಾರದ ಯೋಜನೆಗಳಾಗಿವೆ. ಸರಕಾರವು ಡಿಸೆಂಬರ್ ೨೦೧೪ ರಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ದೇಶಾದ್ಯಂತ ಗ್ರಾಮೀಣ ವಿದ್ಯುದ್ದೀಕರಣಕ್ಕಾಗಿ ಪ್ರಾರಂಭಿಸಿತು ಮತ್ತು ಅಕ್ಟೋಬರ್ ೨೦೧೭ ರಲ್ಲಿ ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಗಳನ್ನು ಗ್ರಾಮೀಣ ಹಾಗು ನಗರ ಪ್ರದೇಶಗಳ ವಿದ್ಯುತ್ ರಹಿತ ಕುಟುಂಬಗಳಿಗೆ ವಿದ್ಯುದ್ದೀಕರಣಕ್ಕಾಗಿ ಪ್ರಾರಂಭಿಸಲಾಯಿತು.

ಏಪ್ರಿಲ್ ೨೮, ೨೦೧೮ ರಂದು, ಕೇಂದ್ರ ಸರಕಾರವು ೨೦೧೧ ರ ಜನಗಣತಿಯ ಪ್ರಕಾರ ಎಲ್ಲಾ ಜನವಸತಿ ಪ್ರದೇಶಗಳನ್ನು ಹಾಗು ಹಳ್ಳಿಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಘೋಷಿಸಿತು. ಸೌಭಾಗ್ಯ ಯೋಜನೆಯಡಿಯಲ್ಲಿ, ಮಾರ್ಚ್ ೨೦೨೧ ರ ಹೊತ್ತಿಗೆ, ಅದಕ್ಕಿಂತ ಮೊದಲು ಗುರುತಿಸಲಾದ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ೧೦೦% ವಿದ್ಯುದ್ದೀಕರಣ ಮಾಡಿದೆ ಎಂದು ಮೋದಿ ಸರಕಾರ ಘೋಷಿಸಿದೆ. ಕೇಂದ್ರ ವಿದ್ಯುತ್ ಸಚಿವಾಲಯವು ವಿದ್ಯುದೀಕರಣಗೊಂಡ ಗ್ರಾಮವನ್ನು ಹೀಗೆ ವ್ಯಾಖ್ಯಾನಿಸುತ್ತದೆ:

ವಿತರಣಾ ಪರಿವರ್ತಕ ಮತ್ತು ವಿತರಣಾ ಮಾರ್ಗಗಳಂತಹ ಮೂಲಭೂತ ಮೂಲಸೌಕರ್ಯಗಳನ್ನು ಜನವಸತಿ ಪ್ರದೇಶ ಮತ್ತು ಕುಗ್ರಾಮದಲ್ಲಿನ ದಲಿತ ಕೇರಿಗಳಿಗೆ ಒದಗಿಸಲಾಗಿದೆ.
ಸಾರ್ವಜನಿಕ ಸ್ಥಳಗಳಾದ ಶಾಲೆಗಳು, ಪಂಚಾಯತ್ ಕಚೇರಿ, ಆರೋಗ್ಯ ಕೇಂದ್ರಗಳು, ಔಷಧಾಲಯಗಳು ಮತ್ತು ಸಮುದಾಯ ಕೇಂದ್ರಗಳಿಗೆ ವಿದ್ಯುತ್ ಒದಗಿಸಲಾಗಿದೆ.


ವಿದ್ಯುದ್ದೀಕರಣಗೊಂಡ ಮನೆಗಳ ಸಂಖ್ಯೆಯು ಗ್ರಾಮದ ಒಟ್ಟು ಕುಟುಂಬಗಳ ಕನಿಷ್ಠ ೧೦% ಆಗಿರಬೇಕು. ಗ್ರಾಮವು ವಿದ್ಯುದ್ದೀಕರಿಸಲ್ಪಟ್ಟಿದೆ ಎಂದು ಘೋಷಿಸಲು ಗ್ರಾಮದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಗತ್ಯವಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎನ್ನುತ್ತವೆ ಸತ್ಯಶೋಧನಾ ವರದಿಗಳು.

ಸೌಭಾಗ್ಯ ಯೋಜನೆಯ ಅಡಿಯಲ್ಲಿ, ಮಾರ್ಚ್ ೨೦೨೧ ರವರೆಗೆ ದೇಶದಾದ್ಯಂತ ಸುಮಾರು ೨.೮೧೭ ಕೋಟಿ ಕುಟುಂಬಗಳು ವಿದ್ಯುದ್ದೀಕರಿಸಲ್ಪಟ್ಟಿವೆ. ಆದಾಗ್ಯೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೫ (೨೦೧೯-‘೨೧) ರ ಅಂಕಿಅಂಶಗಳ ಪ್ರಕಾರ, ೯೬.೮% ಜನಸಂಖ್ಯೆಯು ವಿದ್ಯುತ್ ಹೊಂದಿರುವ ಮನೆಗಳಲ್ಲಿ ವಾಸಿಸುತ್ತಿದೆ. ಇದರರ್ಥ ಭಾರತೀಯ ಜನಸಂಖ್ಯೆಯ ೩% ಕ್ಕಿಂತ ಹೆಚ್ಚು ಜನರು ವಿದ್ಯುತ್ ಇಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳುˌ ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಯ ಪ್ರಕಾರ ಸಂಪೂರ್ಣ ಉತ್ತರ ಪ್ರದೇಶವು ೨೪ ಗಂಟೆಗಳ ನಿರಂತರ ವಿದ್ಯುತ್ ಅನ್ನು ಪಡೆಯುತ್ತಿದೆ ಎಂಬ ಹೇಳಿಕೆಯನ್ನು ನವೆಂಬರ್ ೨೦೨೧ ರಲ್ಲಿ, ಫ್ಯಾಕ್ಟ್‌ಚೆಕರ್ ಪರಿಶೀಲನೆ ನಡೆಸಿದೆ. ಸತ್ಯ ಶೋಧನೆಯ ವರದಿಯು ಇಟಾಹ್ ಜಿಲ್ಲೆಯ ಒಂದು ಇಡೀ ಗ್ರಾಮದ ಸುಮಾರು ೪೫೦ ಜನರ ಕುಟುಂಬಗಳು ಇನ್ನೂ ವಿದ್ಯುದೀಕರಣವಾಗಬೇಕಿತ್ತು ಎನ್ನುವುದನ್ನು ಪತ್ತೆ ಹಚ್ಚಿದೆ. ಇದಲ್ಲದೆ, ಉತ್ತರ ಪ್ರದೇಶ ರಾಜ್ಯದ ನಗರ ಪ್ರದೇಶಗಳಲ್ಲಿ ಸರಾಸರಿ ೨೫ ಗಂಟೆ ೫೧ ನಿಮಿಷಗಳ ಕಾಲ ವಿದ್ಯುತ್ ಸರಬರಾಜು ಸ್ಥಗಿತಕ್ಕೆ ಕಾರಣವಾಗುವ ಸರಾಸರಿ ೭.೮೪ ಅಡಚಣೆಗಳು ಪತ್ತೆಯಾಗಿವೆ.

ಮೋದಿ ಹೇಳಿಕೆ-೩: “ಇಂದು ಭಾರತದ ಪ್ರತಿಯೊಂದು ಹಳ್ಳಿಯೂ ರಸ್ತೆ ಸಂಪರ್ಕವನ್ನು ಹೊಂದಿದೆ”

ಸತ್ಯ ಪರಿಶೀಲನೆ: ಈ ಹೇಳಿಕೆಯು ಸಂಪೂರ್ಣ ಸುಳ್ಳಿನಿಂದ ಕೂಡಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯು ೨೦೦೦ ರಲ್ಲಿ ಪ್ರಾರಂಭವಾಯಿತು, ಇದು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವಿಲ್ಲದ ವಾಸಸ್ಥಳಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯು ಬಯಲು ಪ್ರದೇಶಗಳಲ್ಲಿ ೫೦೦ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಹೊಂದಿರುವ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ೨೫೦ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಜನವಸತಿ ಪ್ರದೇಶಗಳಿ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಇಲ್ಲಿ ೨೦೦೧ ರ ಜನಗಣತಿಯ ಅಂಕಿಅಂಶಗಳು ಜನಸಂಖ್ಯಾ ಗಾತ್ರವನ್ನು ನಿರ್ಧರಿಸಲು ಆಧಾರವಾಗಿ ಬಳಸಲಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಫ್ಯಾಕ್ಟ ಚೆಕ್ಕರ್ ೨೦೧೭ ಮತ್ತು ೨೦೨೧ ರ ನಡುವಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಡೇಟಾವನ್ನು ಪರಿಶಿಲಿಸಿದೆ ಮತ್ತು ಈ ಅವಧಿಯಲ್ಲಿ ಕೇಂದ್ರವು ತನ್ನ ಯೋಜನೆಯಂತೆ ಯಾವುದೇ ರಸ್ತೆ ಸಂಪರ್ಕ ಕಾಮಗಾರಿಯ ಗುರಿಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬುದನ್ನು ಪತ್ತೆಹಚ್ಚಿದೆ. ೨೦೧೭-‘೧೮ ರಲ್ಲಿ, ಕೇಂದ್ರವು ತನ್ನ ಗುರಿಯಂತೆ ೯೫.೪% ಉದ್ದದ ರಸ್ತೆ ಸಂಪರ್ಕ ಕಾಮಗಾರಿಯನ್ನು ಪೂರೈಸಿದೆ. ಇದು ೨೦೧೮-‘೧೯ ರಲ್ಲಿ ೮೫% ಕ್ಕೆ ಇಳಿದಿದೆ ಎನ್ನುತ್ತದೆ ಸತ್ಯಶೋಧನಾ ವರದಿ. ೨೦೧೯-‘೨೦ ರಲ್ಲಿ, ಉದ್ದೇಶಿತ ರಸ್ತೆ ಸಂಪರ್ಕದ ವ್ಯಾಪ್ತಿಯು ೫೪.೪% ಕ್ಕೆ ಕುಸಿದಿದೆ. ೯ˌ೭೨೧ ಉದ್ದೇಶಿತ ವಸತಿಗಳಲ್ಲಿ, ೪,೧೪೯ ರಷ್ಟು ಜನ ವಸತಿ ಪ್ರದೇಶಗಳಿಗೆ ಮಾತ್ರ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ೨೦೨೦-‘೨೧ ರಲ್ಲಿ, ಈ ವ್ಯಾಪ್ತಿಯು ೭೯.೪% ಕ್ಕೆ ಏರಿದೆ ಮತ್ತು ೨೦೨೧-೨೨ ರಲ್ಲಿ, ಕೇಂದ್ರವು ೮೩.೯೪ % ರಸ್ತೆ ಸಂಪರ್ಕ ಜಾಲವನ್ನು ವಿಸ್ತರಿಸಿದೆ.

ಮೋದಿ ಹೇಳಿಕೆ-೪: “ಇಂದು ಭಾರತದಲ್ಲಿ ಪ್ರತಿಯೊಬ್ಬ ಬಡವರಿಗೂ ೫ ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆ ದೊರೆಯುತ್ತಿದೆ.”

ಸತ್ಯ ಪರಿಶೀಲನೆ: ಇದು ಸಂಪೂರ್ಣ ದಾರಿತಪ್ಪಿಸುವ ಹೇಳಿಕೆಯಾಗಿದೆ.

ಆಯುಷ್ಮಾನ್ ಭಾರತ್ ಎಂಬ ಹೆಸರಿನ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಸೆಪ್ಟೆಂಬರ್ ೨೦೧೮ ರಲ್ಲಿ ಪ್ರಾರಂಭಿಸಲಾಯಿತು ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಆಸ್ಪತ್ರೆಗಳಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೫ ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆದರೆ ಈ ವಿಮೆ ಸೌಕರ್ಯ ಪಡೆಯಲು ಅರ್ಹತೆಯ ಮಾನದಂಡಗಳಿರುವುದರಿಂದ ಬಡವರೆಲ್ಲರೂ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಈ ವಿಮೆಯನ್ನು ಪಡೆಯಲು ಅರ್ಹರಾಗಿರುವವರೆಂದರೆ ವಸತಿ ರಹಿತರು, ಮ್ಯಾನುಯಲ್ ಸ್ಕ್ಯಾವೆಂಜರ್ ಕುಟುಂಬಗಳು, ನಿರ್ಗತಿಕರು/ಭಿಕ್ಷುಕರು ಮತ್ತು ಪ್ರಾಚೀನ ಬುಡಕಟ್ಟು ಗುಂಪುಗಳು.

ಈ ಆರೋಗ್ಯ ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮುಂದಿನ ಮಾನದಂಡವೆಂದರೆ ‘ವಂಚಿತ ಮಾನದಂಡ’ ಎನ್ನಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳು, ೧೬ ರಿಂದ ೫೯ ವರ್ಷದೊಳಗಿನ ವಯಸ್ಕ ಪುರುಷ ಸದಸ್ಯರಿಲ್ಲದ ಮಹಿಳಾ ಮುಖ್ಯಸ್ಥರ ಕುಟುಂಬಗಳು ಮತ್ತು ಕುಟುಂಬದಲ್ಲಿ ಅಂಗವಿಕಲ ಸದಸ್ಯರನ್ನು ಒಳಗೊಂಡಿರುತ್ತದೆ.

೨೦೧೧ ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯಿಂದ ಗುರುತಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ ೧೦.೭೪ ಕೋಟಿ ಕುಟುಂಬಗಳು (೫೦ ಕೋಟಿ ಜನರು), ೩೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ೧೩. ೪೪ ಕೋಟಿ ಕುಟುಂಬಗಳನ್ನು (೬೫ ಕೋಟಿ ಜನರು) ಸೇರಿಸಲು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿವೆ. ಭಾರತದಲ್ಲಿ “ಪ್ರತಿಯೊಬ್ಬ ಬಡ ವ್ಯಕ್ತಿ” ಈ ಸೌಲಭ್ಯವನ್ನು ಪಡೆಯದಿರಲು ಕೆಳಗಿನ ಎರಡು ಕಾರಣಗಳನ್ನು ಗುರುತಿಸಲಾಗಿದೆ:

ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ದೆಹಲಿ ಈ ಯೋಜನೆಯನ್ನು ಜಾರಿಗೆ ತಂದಿಲ್ಲ.
ಭಾರತದ ಪ್ರತಿಯೊಬ್ಬ ಬಡವನೂ ಸರ್ಕಾರದ ನಿಗದಿತ ಮಾನದಂಡದ ಅಡಿಯಲ್ಲಿ ಬರುವುದಿಲ್ಲ.
ಇದಲ್ಲದೆ, ಗುಣಮಟ್ಟದ ಆರೋಗ್ಯ ಸೇವೆಯ ಪ್ರವೇಶವು ಭಾರತದಲ್ಲಿ ಹೆಚ್ಚಿನ ಪ್ರಮಾಣದ ಜನಸಂಖ್ಯೆಗೆ ಅಸ್ಪಷ್ಟವಾಗಿದೆ. ಕೋವಿಡ್ -೧೯ ಸಾಂಕ್ರಾಮಿಕ ಸನ್ನಿವೇಷ ಮತ್ತು ವಿಶೇಷವಾಗಿ ಅದರ ಎರಡನೇ ಅಲೆ ಹಲವಾರು ರಾಜ್ಯಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿನ ಗಂಭೀರ ಕೊರತೆಗಳನ್ನು ಬಹಿರಂಗಪಡಿದೆ ಎನ್ನುತ್ತದೆ ಸತ್ಯ ಶೋಧನಾ ವರದಿ.

ಇತರ ಭಾರತೀಯ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಉತ್ತಮ ಆರೋಗ್ಯ ಸೂಚ್ಯಾಂಕಗಳನ್ನು ಹೊಂದಿರುವ ಎರಡು ಭಾರತೀಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡುಗಳಲ್ಲಿ ಕಾರ್ಯಕ್ರಮದ ರೋಲ್‌ಔಟ್ ಅನ್ನು ಹೋಲಿಸಲು ಜೂನ್ ೨೦೨೨ ರಲ್ಲಿ ಅಧ್ಯಯನ ಒಂದನ್ನು ನಡೆಸಲಾಗಿದೆ. ಅದರ ಫಲಿತಾಂಶವು “ಕಡಿಮೆ ವಿಮಾ ಮರುಪಾವತಿ ದರಗಳು ಖಾಸಗಿ ಆಸ್ಪತ್ರೆಗಳ ಸಂಖ್ಯೆಯನ್ನು ಮಿತಿಗೊಳಿಸಬಹುದು ಎನ್ನುತ್ತವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಬಡವರ ಭಾಗವಹಿಸುವಿಕೆ ಮತ್ತು ಅರ್ಹತೆಗಾಗಿ ಮಾನದಂಡಗಳ ವರ್ಗೀಕರಣ ಕ್ರೀಯೆಯು ನವೀಕರಿಸಬೇಕಾಗ ಅಗತ್ಯವಿದೆ ಎನ್ನುತ್ತವೆ ಸತ್ಯ ಶೋಧನಾ ವರದಿಗಳು.

ಫ್ಯಾಕ್ಟ್‌ಚೆಕರ್ (ಸತ್ಯ ಶೋಧಕ) ತಂಡವು ಪ್ರಧಾನಿಯವರು ಜರ್ಮನ್ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ ಬಯಸಿ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಂತೆ. ಆದರೆ ಈ ಲೇಖನವನ್ನು ಪ್ರಕಟಿಸುವ ಹೊತ್ತಿಗೆ ಪ್ರಧಾನಿ ಕಚೇರಿಯಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲವೆಂತಲು ಹಾಗು ಒಂದು ವೇಳೆ ಪ್ರಧಾನಿ ಕಚೇರಿ ಈ ಕುರಿತು ಸ್ಪಷ್ಟೀಕರಣ ನೀಡಿದರೆ ಖಂಡಿತ ಸತ್ಯ ಶೋಧಕ ತಂಡವು ಆ ವರದಿಯನ್ನು ಪ್ರಕಟಿಸಲಿದೆ ಎಂದು ಘೋಷಿಸಿದೆ ಎಂದು ಸ್ಕ್ರಾಲ್.ಇನ್ ವರದಿಗಳು ಸ್ಪಷ್ಟಪಡಿಸಿವೆ.

ಹೀಗೆ ಪ್ರಧಾನಿ ಮೋದಿಯವರು ಹೋದಲ್ಲಿ ಬಂದಲ್ಲಿ ತಿರುಚಿದ ಅಂಕಿಅಂಶಗಳ ಸಹಾಯದಿಂದ ತಮ್ಮ ಆಡಳಿತ ಭಾರಿ ಅಭಿವೃದ್ಧಿ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆˌ ವಾಸ್ತವದಲ್ಲಿ ಮೋದಿ ಸರಕಾರ ಮಾಡಿದ್ದಕ್ಕಿಂತ ಮಾತನಾಡುವುದೇ ಹೆಚ್ಚು ಎನ್ನುವುದು ಅನೇಕ ವೇಳೆ ಸಾಬೀತಾಗಿದೆ.

~ ಡಾ. ಜೆ ಎಸ್ ಪಾಟೀಲ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಅಮೃತ ಮಹೋತ್ಸವದ ನಂತರ ರಾಷ್ಟ್ರ ಧ್ವಜಗಳ ವಿಲೇವಾರಿ ಹೇಗೆ? : ಇಲ್ಲಿದೆ ದೆಹಲಿಗರ ಪರಿಹಾರ

Next Post

ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಿಸಿ ಓವೈಸಿ ಸಂದೇಹವನ್ನು ಸುಳ್ಳು ಮಾಡಿದ ನರೇಂದ್ರ ಮೋದಿ

Related Posts

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
0

ಬೆಂಗಳೂರು: ಕಾಂಗ್ರೆಸ್‌ನಲ್ಲಿ ನವೆಂಬರ್‌ ಕ್ರಾಂತಿ ಗರಿಗೆದರಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. https://youtu.be/lJkxhAdZhXc?si=7skLOG-oaNLSzXaG ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಭೇಟಿ...

Read moreDetails
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

November 21, 2025
Next Post
ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಿಸಿ ಓವೈಸಿ ಸಂದೇಹವನ್ನು ಸುಳ್ಳು ಮಾಡಿದ ನರೇಂದ್ರ ಮೋದಿ

ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಿಸಿ ಓವೈಸಿ ಸಂದೇಹವನ್ನು ಸುಳ್ಳು ಮಾಡಿದ ನರೇಂದ್ರ ಮೋದಿ

Please login to join discussion

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada