
ಬೆಂಗಳೂರು :ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿರುವ ರಾಜ್ಯಪಾಲರ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರ ದಿನದಿಂದ ದಿನಕ್ಕೆ ಸಿಎಂ ಕುರ್ಚಿಗೆ ಕಂಟಕವಾಗುತ್ತಿದೆ.
ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ರದ್ದು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.ಒಂದು ವೇಳೆ ಸಿಎಂ ವಿರುದ್ಧ ಕೋರ್ಟ್ನಲ್ಲಿ ವ್ಯತಿರಿಕ್ತ ಆದೇಶ ಬಂದರೆ, ಸಿಎಂ ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದೆ.
ಹೊರಗೆ ಬೆಂಬಲ, ಒಳಗೆ ಹಂಬಲವಿಟ್ಟುಕೊಂಡಿರುವ ಕಾಂಗ್ರೆಸ್ ಮುಂದಾಳುಗಳೆಲ್ಲಾ @siddaramaiah ನವರು ಕುರ್ಚಿ ಖಾಲಿ ಮಾಡಲಿ, ಸಿಎಂ ಹುದ್ದೆ ತಮಗೆ ದಕ್ಕಲೆಂದು ಕಂಡ ಕಂಡ ಕಡೆ ಕೈಮುಗಿಯುತ್ತಿದ್ದಾರೆ.
— BJP Karnataka (@BJP4Karnataka) September 3, 2024
ಬಂಡೆಗೆ ಸೆಡ್ಡು ಹೊಡೆದು ಸಿಎಂ ಸ್ಪರ್ಧಾ ಕಣಕ್ಕೆ ಎಂಟ್ರಿ ಕೊಟ್ಟಿರುವ @RV_Deshpande ತಾವು ಸಿಎಂ ಆಕಾಂಕ್ಷಿ ಎಂದು ಹೇಳುವ ಮೂಲಕ ಗದ್ದುಗೆಗೆ… pic.twitter.com/pXXeSM8JUz
ಈ ಹಿನ್ನೆಲೆಯಲ್ಲಿ ರಾಜ್ಯ ಕಾಗ್ರೆಸ್ ಸರ್ಕಾರದಲ್ಲಿ ಉದ್ಭವಿಸಿರುವ ಸನ್ನಿವೇಶದ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ಟ್ವೀಟ್ ಮಾಡಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕೈನಾಯಕರು ಹೊರಗೆ ಬೆಂಬಲ ಸೂಚಿಸಿ ಬೆನ್ನಿಗೆ ನಿಂತಂತಿದ್ದಾರೆ.ಆದರೆ ಒಳಗೆ ತಾವು ಸಿಎಂ ಆಗಬೇಕು ಎಂಬ ಹಂಬಲವಿಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ಮುಂದಾಳುಗಳೆಲ್ಲಾ ಸಿದ್ದರಾಮಯ್ಯನವರು ಕುರ್ಚಿ ಖಾಲಿ ಮಾಡಲಿ, ಸಿಎಂ ಹುದ್ದೆ ತಮಗೆ ದಕ್ಕಲೆಂದು ಕಂಡ ಕಂಡ ಕಡೆ ಕೈಮುಗಿಯುತ್ತಿದ್ದಾರೆ. ಬಂಡೆಗೆ ಸೆಡ್ಡು ಹೊಡೆದು ಸಿಎಂ ಸ್ಪರ್ಧಾ ಕಣಕ್ಕೆ ಎಂಟ್ರಿ ಕೊಟ್ಟಿರುವ ಆರ್.ವಿ.ದೇಶಪಾಂಡೆ ತಾವು ಸಿಎಂ ಆಕಾಂಕ್ಷಿ ಎಂದು ಹೇಳುವ ಮೂಲಕ ಗದ್ದುಗೆಗೆ ಟವಲ್ ಹಾಕಿದ್ದಾರೆ ಎಂಬಂತೆ ಬಿಂಬಿಸುವ ವಿಡಂಬನಾತ್ಮಕ ಫೋಟೋವೊಂದನ್ನು ಬಿಜೆಪಿ ಶೇರ್ ಮಾಡಿದೆ.