ಹಾಸನದ (Hassan) ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ (Pendrive) ಹರಿದಾಟ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಈ ಪೆನ್‌ಡ್ರೈವ್‌ಗಳನ್ನ ಹಾಸನದಾದ್ಯಂತ ಹಂಚಿಕೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಅಧಿಕಾರಿಗಳು ಹಂತ ಹಂತವಾಗಿ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ ಆಗಿದೆ. ಆ ಮೂಲಕ ತನಿಖೆ ಇದೀಗ ಮಾಜಿ ಶಾಸಕ ಪ್ರೀತಂ ಗೌಡ (Preetham gowda) ಕಡೆ ತಿರುಗಿದೆ.
ಪರನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಎಸ್‌ಐಟಿ (SIT) ಅಧಿಕಾರಿಗಳು ಚೇತನ್ (Chethan) ಹಾಗೂ ಲಿಖಿತ್ (Likith) ಎಂಬ ಇಬ್ಬರನ್ನು ಎಸ್.ಐ.ಟಿ ಟೀಮ್ ಬಂಧಿಸಿದೆ. ಈ ಇಬ್ಬರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಈ ಅರ್ಜಿ ವಜಾಗೊಂಡ ಬೆನ್ನಲ್ಲೇ ಇಬ್ಬರನ್ನೂ ತನಿಖಾಧಿಕಾರಿಗಳು ಬಂಧಿಸಿದ್ದಾರೆ.
ಹಾಸನ ಸೈಬರ್ ಕ್ರೈಂ (Cyber crime) ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇದೀಗ ಈ ಇಬ್ಬರ ಬಂಧನ ಆಗಿರೋದು ತನಿಖೆಯ ದಿಕ್ಕು ಬದಲಾಗುತ್ತಾ ಎಂಬ ಸಂಶಯ ಮೂಡುವಂತೆ ಮಾಡಿದೆ. ಯಾಕಂದ್ರೆ ಈ ಇಬ್ಬರೂ ಕೂಡ ಈ ಹಿಂದೆ ಮಾಜಿ ಶಾಸಕ ಪ್ರೀತಂ ಗೌಡ (preetham gowda) ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರೀತಂ ಗೌಡ ಹೆಸರು ತಳುಕಿ ಹಾಕಿಕೊಳ್ಳಬಹುದಾ ಎಂಬ ಗುಮಾನಿ ಶುರುವಾಗಿದೆ.