ಕಾಂಗ್ರೆಸ್ ಮಾಜಿ ಸಂಸದನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ತೀರ್ಪು ನೀಡಿದೆ. 1984ರಲ್ಲಿ ಪಂಜಾಬ್‌ನಲ್ಲಿ (Punjab) ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ (Sajjan kumar) ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.

1984ರಲ್ಲಿ ಪಂಜಾಬ್ ನ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದಿದ್ದ ಗಲಭೆಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ ದೀಪ್ ಸಿಂಗ್‌ರನ್ನು ದೊಡ್ಡ ಪ್ರಚೋದಿತ ಗುಂಪೊಂದು ಹತ್ಯೆಗೈದಿತ್ತು.
ಈ ಗುಂಪಿನ ನಾಯಕತ್ವವನ್ನು ಸಜ್ಜನ್ ಕುಮಾರ್ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಸುದೀರ್ಘ ವಿಚಾರಣೆ ನಡೆಸಲಾಗಿ ಸಜ್ಜನ್ ಕುಮಾರ್ ಪಾತ್ರ ಇರುವುದು ಸಾಬೀತಾದ ಹಿನ್ನಲೆ ಫೆ.12 ರಂದು ನ್ಯಾಯಾಲಯ ಇವರನ್ನು ಅಪರಾಧಿ ಎಂದು ಘೋಷಿಸಿತ್ತು.