ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿಯನ್ನು ಮುಂದುವರೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಡೋಂಗಿ ರಾಷ್ಟ್ರಭಕ್ತಿ ಇರಬಾರದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.
ಡೋಂಗಿ ರಾಷ್ಟ್ರ ಭಕ್ತಿ ಇರಬಾರದು ಹಿಂದೆ ಸಂಘದ ಗೋಳ್ವಾಲ್ಕರ್ ಹಾಗೂ ಸಾವರ್ಕರ್ ಇಬ್ಬರು ತ್ರಿವರ್ಣ ಧ್ವಜವನ್ನ ವಿರೋಧಿಸಿದ್ದರು. ಈಗ ಅದೇ ಸಂಘದ ಭಾಗವಾದ ಬಿಜೆಪಿ ಹರ್ ಘರ್ ತಿರಂಗಾ ಅಭಿಯಾನ ಶುರು ಮಾಡಿದ್ದಾರೆ ಇದನ್ನು ಡೋಂಗಿ ರಾಜಕೀಯ ಎನ್ನದೆ ಬೇರೇನು ಹೇಳಲು ಸಾಧ್ಯ ಎಂದಿದ್ದಾರೆ.
ಇದರಲ್ಲಿ ರಾಜಕೀಯ ಏನು ಇಲ್ಲ RSSನವರು ಎಂದಾದರು ತಮ್ಮ ಕಚೇರಿ ಮೇಲೆ ತ್ರಿವರ್ಣ ಧ್ವಜವನ್ನ ಹಾರಿಸಿದ್ದಾರ ಅಭಿಯಾನದ ಅಂಗವಗಿ ಹಾರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನ ಸಂಘ ಪರಿವಾರದವರು ವಿರೋಧಿಸಿದವರು ಎಂದು ಕಿಡಿಕಾರಿದ್ದಾರೆ.

ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಸಿದ್ದು ಸಮಾಜವಾದಿ ಹಿನ್ನೆಲೆಯಿಂದ ಬಂದ ನಿತೀಶ್ ಕುಮಾರ್ NDA ಮೈತ್ರಿಕೂಟ ತೊರೆದಿರುವ ಬಗ್ಗೆ ನನ್ನಗೆ ಅಷ್ಟಾಗಿ ಗೊತ್ತಿಲ್ಲಾ. ಆದರೆ, ಕೋಮುವಾದಿ ಪಕ್ಷದೊಂದಿಗಿನ ಮೈತ್ರಿಯನ್ನ ತೊರೆದು ರಾಷ್ಟ್ರೀಯ ಜನತಾದಳ ಹಾಗೂ ಕಾಂಗ್ರೆಸ್ ಸಖ್ಯ ಬೆಳೆಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬುದು ಇನ್ನು ನಿರ್ಧಾರವಾಗಿಲ್ಲ ಕಾರ್ಯಕರ್ತರು ನಾನು ಹೊದ ಕಡೆಯಲೆಲ್ಲ ಇಲ್ಲಿಂದಲ್ಲೇ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ಆದರೆ, ಹೊದ ಕಡೆ ಎಲ್ಲಾ ಸ್ಪರ್ಧಿಸಲು ಸಾಧ್ಯವಿಲ್ಲ ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ತಿಳಿಸುತ್ತೇನೆ ಎಂದಿದ್ದಾರೆ.
ಮೂರನೇ ಮುಕಯಮಂತ್ರಿ ಕುರಿತು ಕೇಳಿದ ಪ್ರಶ್ನಗೆ ಹಿಂದೆ ಯಡಿಯೂರಪ್ಪನ್ನು ಬದಲಾವಣೆ ಮಾಡುವ ಸುದ್ದಿ ಗೊತ್ತಿತ್ತು. ಆದರೆ, ಬಸವರಾಜ್ ಬೊಮ್ಮಾಯಿ ಬದಲಾವಣೆ ಕುರಿತು ನನ್ನಗೆ ಮಾಹಿತಿ ಇಲ್ಲ ಆ ಬಗ್ಗೆ ಮಾತನಾಡಿರುವವನ್ನೇ ಕೇಳಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಿಂದ ಬಾದಾಮಿಗೆ ತೆರಳುವ ಮಾರ್ಗದಲ್ಲಿ ನವಲಗುಂದ ಸಮೀಪ ರೈತರ ಜಮೀನುಗಳಿಗೆ ಬೇಟಿ ನೀಡಿ ಮಳೆಯಿಂದ ಹಾನಿಗೊಳಗಾಗಿರುವ ಬೆಳೆಗಳನ್ನು ವೀಕ್ಷಿಸಿದ ಸಿದ್ದರಾಮಯ್ಯ ೀ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ಪರಿಹಾರ ಧನವ್ನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.











