ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನ ಹಿಡಿದು 8 ವರ್ಷಗಳಾಗಿವೆ ಅವರು ಮಾಡುತ್ತಿರುವ ಸಂಭ್ರಮಾಚರಣೆ ಸುಳ್ಳಿನ ಸಂಭ್ರಮಾಚಾರಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇವರು ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂಬುದು ನನಗೆ ಇನ್ನು ಸಹ ಅರ್ಥವಾಗಿಲ್ಲ ಜನರನ್ನು ಕಷ್ಟದ ಕೂಪಕ್ಕೆ ತಳ್ಳಿದ ಖುಷಿಗ ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ವರ್ಷ ಎಂಟು ಅವಾಂತರ ನೂರೆಂಟು ಎಂಬ ಕಿರು ಹೊತ್ತಿಗೆಯನ್ನು ಈ ವೇಳೆ ಬಿಡುಗಡೆ ಮಾಡಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಿ 8 ವರ್ಷ ಮುಖ್ಯಮಂತ್ರಿಯಾಗಿ 12 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಪಕ್ಷವನ್ನ ಅಧಿಕಾರಕ್ಕೆ ತರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣವನ್ನ ವಾಪಸ್ ತರುತ್ತೇವೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು.

ಆದರೆ, ಅವರು ಆಡಿದ ಮಾತುಗಳಲ್ಲಿ ಯಾವುದಾದರು ಒಂದು ಈಡೇರಿದೆಯಾ 2014ರಲ್ಲಿ 14 ಕೋಟಿ ಹಾಗು 2019ರಲ್ಲಿ 22 ಕೋಟಿ ಜನ ಬಿಜೆಪಿಗೆ ಮತ ನೀಡಿದ್ದಾರೆ. ಪ್ರತಿ ಭಾರಿಯೂ ಚುನಾವಣೆ ಸಮಯದಲ್ಲಿ ಬಾಲಾಕೋಟ್, ಪುಲ್ವಾಮಾ ದಾಳಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಾರೆ ಎಂದು ಹೇಳಿದ್ದಾರೆ.
ಅಚ್ಚೇ ದಿನ ಆಯೇಗಾ ಎಂದು ಮೋದಿ ಭರವಸೆ ಕೊಟ್ಟರು ಆದರೆ, ಅಚ್ಚೇ ದಿನ ಎಲ್ಲಿ ಬಂತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ,ಮೋದಿ ಪ್ರಧಾನಿಯಾದ ಸಮಯದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ ಇಳಿಕೆಯಾಗಿತ್ತು ಕಾಂಗ್ರೆಸ್ ಸಮಯದಲ್ಲಿ ಜಾಸ್ತಿಯಿತ್ತು ಕಡಿಮೆ ಬೆಲೆಗೆ ತೈಲ ಸಿಕ್ಕಿದ್ದರು ಸಹ ಜನರಿಗೆ ಹೆಚ್ಚಿನ ಸುಂಕ ವಿಧಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ನೋಟುಗಳ ಅಮಾನ್ಯೀಕರಣ ಮಾಡಿದ್ದರು. ಆದರೆ, ಭ್ರಷ್ಟಾಚಾರ ಕಡಿಮೆ ಆಗಿದ್ದೇಯಾ. ಮೋದಿ ಅಧಿಕಾರಕ್ಕೇರಿದ ಮೇಲೆ ಸ್ವಾತಂತ್ರ್ಯ ಬಂದ ಮೇಲೆ ಇದ್ದ ಸಾಲ ಕಳೆದ ಎಂಟು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಆರ್ಥಿಕ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಪತಿಕ್ರಾಗೋಷ್ಠಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕರಾದ ಹೆಚ್.ಎಂ,ರೇವಣ್ಣ ಹಾಗು ಅಶೋಕ್ ಪಟ್ಟಣ ಉಪಸ್ಥಿತರಿದ್ದರು.