• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BJP ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಡೆಡ್​​ಲೈನ್​.. ದಾರಿ ಎತ್ತಣ..?

ಕೃಷ್ಣ ಮಣಿ by ಕೃಷ್ಣ ಮಣಿ
April 15, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
BJP ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಡೆಡ್​​ಲೈನ್​.. ದಾರಿ ಎತ್ತಣ..?
Share on WhatsAppShare on FacebookShare on Telegram

ರಾಜ್ಯ ವಿಧಾನಸಭಾ ಚುನಾವಣೆ ಚುನಾವಣೆಯಲ್ಲಿ ಬಿಜೆಪಿ ಇನ್ನೂ 12 ಕ್ಷೇತ್ರಗಳ ಪಟ್ಟಿ ಬಿಡುಗಡೆ ಬಾಕಿ ಇದೆ. ಬೆಂಗಳೂರಿನ ಗೋವಿಂದರಾಜನಗರ, ಮಹದೇವಪುರ, ಹೆಬ್ಬಾಳ, ಶೆಟ್ಟರ್​​ ಶಾಸಕರಾಗಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್​, ಮೈಸೂರಿನ ಕೃಷ್ಣರಾಜ, ಶಿವಮೊಗ್ಗ ನಗರ, ವಿಜಯಪುರದ ನಾಗಠಾಣ, ಕಲಬುರಗಿಯ ಸೇಡಂ, ರಾಯಚೂರಿನ ಮಾನ್ವಿ, ಕೊಪ್ಪಳ, ಗದಗದ ರೋಣ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್​​ ಹಂಚಿಕೆ ಇನ್ನೂ ನಿಗೂಢವಾಗಿದೆ. ಆದರೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್, ಟಿಕೆಟ್​ಗಾಗಿ ಬಿಜೆಪಿ ಹೈಕಮಾಂಡ್​ಗೆ ಡೆಡ್​ಲೈನ್​ ನೀಡಿದ್ದಾರೆ. ದೆಹಲಿಗೆ ಹೋಗಿ ಬಂದು 2 ದಿನಗಳು ಕಳೆದು ಹೋಗಿವೆ. ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಈಗಲೂ ನಾನು ಆಶಾವಾದ ಹೊಂದಿದ್ದೇನೆ. ಶನಿವಾರ ಟಿಕೆಟ್​ ಘೋಷಣೆ ಆಗದೆ ಹೋದ್ರೆ ನಾನು ಯೋಚನೆ ಮಾಡ್ತೀನಿ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ. ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ ಎಂದಿದ್ದಾರೆ ಜಗದೀಶ್​ ಶೆಟ್ಟರ್. ಇಂದು ಬೆಳಗ್ಗೆ 11 ಗಂಟೆ ಒಳಗೆ ಬಿಜೆಪಿ ಟಿಕೆಟ್​ ಘೋಷಣೆ ಮಾಡದಿದ್ದರೆ ಜಗದೀಶ್​ ಶೆಟ್ಟರ್​ ದಾರಿ ಎತ್ತ ಕಡೆ ಎನ್ನುವಂತಾಗಿದೆ.

ADVERTISEMENT

ಮಾಜಿ ಸಿಎಂ ಶೆಟ್ಟರ್​​ಗೆ ಸಿಕ್ಕಿದೆ ಭರಪೂರ ಬೆಂಬಲ..!

ಬಿಜೆಪಿ ನಾಯಕರ ಮೇಲೆ ಜಗದೀಶ್​ ಶೆಟ್ಟರ್​ ಅಂತಿಮ ಹಂತದ ಒತ್ತಡ ತಂತ್ರ ಅನುಸರಿಸಿದ್ದಾರೆ. ಮೊದಲನೆಯದಾಗಿ ಶನಿವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದೇನೆ. ಟಿಕೆಟ್​ ಘೋಷಣೆ ಆಗದಿದ್ದರೆ ನಾನು ಅಭಿಮಾನಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಅದರ ಹೊರತಾಗಿಯೂ ಜಗದೀಶ್​ ಶೆಟ್ಟರ್​​ 2ನೇ ರೀತಿಯಲ್ಲಿ ಒತ್ತಡ ತಂತ್ರ ಅನುಸರಿಸಿದ್ದು, ಜಗದೀಶ್​ ಶೆಟ್ಟರ್​​ಗೆ ಟಿಕೆಟ್ ಘೋಷಣೆ ವಿಳಂಬದಿಂದ ರೊಚ್ಚಿಗೆದ್ದ ಹುಬ್ಬಳ್ಳಿ ಪಾಲಿಕೆಯ 16 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಭಿಮಾನಿಗಳು ಬಂದು ರಾಜೀನಾಮೆ ಕೊಡ್ತಿದ್ದಾರೆ. ನನಗೂ ಒಂದು ಲಿಮಿಟ್ ಇರುತ್ತೆ, ಎಲ್ಲಿವರೆಗೆ ಕಾಯೋದು..? ಎನ್ನುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರ್ತಾರಾ..? ಅನ್ನೋ ಪ್ರಶ್ನೆಗೆ ಕಾಂಗ್ರೆಸ್ ಆಗಲಿ, ಬೇರೆ ಯಾರೇ ಆಗಲಿ ನನ್ನನ್ನು ಸಂಪರ್ಕ ‌ಮಾಡಿಲ್ಲ. ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷೇತರ ಸ್ಪರ್ಧೆಗೆ ಅನಿಯಾಗ್ತಿದ್ದಾರೆ ಜಗದೀಶ್​ ಶೆಟ್ಟರ್​..!

ಜಗದೀಶ್​ ಶೆಟ್ಟರ್​ಗೆ ಪ್ರಮುಖ ಎದುರಾಳಿ ಅಂದರೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಎನ್ನುವ ಮಾತಿದೆ. ಈ ಹಿಂದೆ ನಡೆದಿದ್ದ ಕೆಲವು ವಾಕ್​ಸಮರದಿಂದ ಇಬ್ಬರೂ ನಾಯಕರ ನಡುವೆ ಮುಖಮನಸು ಇದೆ. ಅಂದಿನಿಂದ ಜಗದೀಶ್​ ಶೆಟ್ಟರ್​ಗೆ ಟಿಕೆಟ್​ ತಪ್ಪಿಸುವ ಉದ್ದೇಶದಿಂದ ಕೆಲಸ ಮಾಡಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿದೆ. ಇನ್ನು ಬಸವರಾಜ ಬೊಮ್ಮಾಯಿ ಹಾಗು ಜಗದೀಶ್​ ಶೆಟ್ಟರ್​ಗೂ ರಾಜಕೀಯ ಜಿದ್ದಾಜಿದ್ದಿ ಇದೆ. ಈ ಹಿಂದೆ ಕ್ಷೇತ್ರದ ವಿಚಾರಲ್ಲೂ ಇಬ್ಬರು ನಾಯಕರ ನಡುವೆ ನಡೆದಿದ್ದ ಜಟಾಪಟಿ ಈಗ ಟಿಕೆಟ್​​ ಕೊಡುವ ವಿಚಾರದಲ್ಲಿ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗ್ತಿದೆ. ಜಗದೀಶ್​ ಶೆಟ್ಟರ್​ಗೆ ಟಿಕೆಟ್​ ಕೊಡದಂತೆ ಹೈಕಮಾಂಡ್​ ಮೇಲೆ ಪ್ರಹ್ಲಾದ್​ ಜೋಷಿ ಹಾಗು ಬಸವರಾಜ ಬೊಮ್ಮಾಯಿ ಪ್ರಭಾವ ಹೆಚ್ಚಾಗಿದೆ ಎನ್ನುವ ಮಾತುಗಳಿವೆ. ಆದರೆ ಜಗದೀಶ್​ ಶೆಟ್ಟರ್​ ಮಾಜಿ ಸಿಎಂ ಆಗಿರುವ ಕಾರಣಕ್ಕೆ ಕಾಂಗ್ರೆಸ್​ ಹಾಗು ಜೆಡಿಎಸ್​​ಗೆ ಸೇರ್ಪಡೆ ಆಗುವುದು ಬಹುತೇಕ ಅನುಮಾನ. ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಶಕ್ತಿ ತೋರಿಸಬೇಕು ಎಂದು ಮಾತುಗಳು ನಡೆಯುತ್ತಿವೆ. ಇದೀಗ ಬಿಜೆಪಿ ಹೈಕಮಾಂಡ್​ ಜಗದೀಶ್​ ಶೆಟ್ಟರ್​ ಅವರನ್ನೂ ಬಿಟ್ಟುಕೊಡುತ್ತಾ..? ಅಥವಾ ಉಳಿಸಿಕೊಳ್ಳುವ ಮನಸ್ಸು ಮಾಡುತ್ತಾ ಅನ್ನೋದು ಗುಟ್ಟಾಗಿ ಉಳಿದಿದೆ.

ನಳೀನ್​ ಕುಮಾರ್​ ಹೇಳಿದ್ದ ಮಾತು ಸತ್ಯವಾಗುತ್ತಾ..?

ಈ ಹಿಂದೆ ನಳೀನ್​ ಕುಮಾರ್​ ಕಟೀಲ್​ ಬಿಜೆಪಿ ಹೈಕಮಾಂಡ್​ ಮಟ್ಟದಲ್ಲಿ ಜಗದೀಶ್​ ಶೆಟ್ಟರ್​ ಹಾಗು ಕೆ.ಎಸ್​ ಈಶ್ವರಪ್ಪ ಅವರನ್ನು ಪಕ್ಷದಿಂದ ಬದಿಗೆ ಸರಿಸುವ ನಿರ್ಧಾರ ಆಗಿದೆ. ಇನ್ಮುಂದೆ ನಮ್ಮ ಹಿಡಿತಕ್ಕೆ ಪಕ್ಷ ಬರಲಿದೆ ಎಂದಿದ್ದರು. ಈಗಾಗಲೇ ಕೆ.ಎಸ್​ ಈಶ್ವರಪ್ಪ ಅವರಿಗೆ ಟಿಕೆಟ್​ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಈಶ್ವರಪ್ಪ ಈಗಾಗಲೇ ರಾಜಕೀಯ ನಿವೃತ್ತಿ ಘೋಷಣೆ ಆಗಿದೆ. ಇದೀಗ ಜಗದೀಶ್​ ಶೆಟ್ಟರ್​ಗೂ ರಾಜಕೀಯ ನಿವೃತ್ತಿಯ ಒತ್ತಡ ಹಾಕಲಾಗಿದೆ ಎನ್ನಲಾಗಿದ್ದು, ಜಗದೀಶ್​ ಶೆಟ್ಟರ್​ ಪಕ್ಷದ ಹೈಕಮಾಂಡ್​ ಮಾತಿಗೆ ತಿರುಗಿ ಬಿದ್ದಿದ್ದಾರೆ. ಇದೀಗ ಪಾಲಿಕೆಯ 16 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಮುಖ ನಿರ್ಧಾರ ಎಂದಿದ್ದಾರೆ. ಬಿ.ಎಸ್​. ಯಡಿಯೂರಪ್ಪ, ಲಕ್ಷ್ಮಣ ಎಂ ಸವದಿ ಬಳಿಕ ಮತ್ತೋರ್ವ ಲಿಂಗಾಯತ ನಾಯಕ ಜಗದೀಶ್​ ಶೆಟ್ಟರ್​​ ಬಿಜೆಪಿ ಪಕ್ಷದಿಂದ ಹೊರಬರುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಮಾಜಿ ಸಿಎಂ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದು ‘ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಚಿಂತನೆ’ ಎಂಬ ಹೇಳಿಕೆಯನ್ನು ನೆನಪು ಮಾಡಿಕೊಳ್ಳಬಹುದು. ಲಿಂಗಾಯತ ನಾಯಕರು ಏಕಾಏಕಿ ಬಿಜೆಪಿ ಪಕ್ಷದಿಂದ ನಿರಂತರವಾಗಿ ಪಕ್ಷ ಬಿಡುತ್ತಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯನ್ನು ತೋರಿಸುತ್ತಿದೆ.

ಕೃಷ್ಣಮಣಿ

Tags: BJPBJP GovernmentbjpkarnatakabjptcketmissbsyediyurappacmbommaiHubli - Dharwad Assembly ConstituencyJagadish ShettarKarnataka ElectionKarnataka PoliticskarnatakatodaynalinkumarkateelUnion Minister Prahlad Joshiಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಬ್ಕಾ ಸಾಥ್ˌ ಶಿರ್ಫ್ ದೋ ಕಾ ವಿಕಾಸ್..!

Next Post

ಸಮಂತಾ ನಟನೆಯ  ʻಶಾಕುಂತಲಂʼ ಸಿನಿಮಾ ಬಿಡುಗಡೆ.. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

April 16, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

April 15, 2026
Next Post
ಸಮಂತಾ ನಟನೆಯ  ʻಶಾಕುಂತಲಂʼ ಸಿನಿಮಾ ಬಿಡುಗಡೆ.. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

ಸಮಂತಾ ನಟನೆಯ  ʻಶಾಕುಂತಲಂʼ ಸಿನಿಮಾ ಬಿಡುಗಡೆ.. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada