ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಘುನಂದನ್ ಶೆಟ್ಟಿ ತಲೆಮಾರಿಸಿಕೊಂಡಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿಗಮದ ಎಂಡಿ ಡಿ.ರೂಪಾ ನಗರ ಪೊಲೀಸರ ಕಾರ್ಯವನ್ನ ಪ್ರಶ್ನಿಸಿದ್ದಾರೆ.
ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಘುನಂದನ್ ಶೆಟ್ಟಿ ವಿರುದ್ದ ನ್ಯಾಯಾಲಯ ಸುಮಾರು 10-12 ಭಾರೀ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದರು ಸಹ ಕೋರ್ಟ್ ಆದೇಶ ಪಾಲಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ನಗರ ಪೊಲೀಸರು ನಿಗಮದ ಅಧ್ಯಕ್ಷರು ಕಾಣೆಯಾಗಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ ಅಂದೆ ಏನರ್ಥ ಎಂದು ರೂಪಾ ಪ್ರಶ್ನಿಸಿದ್ದಾರೆ.
2019 ರಿಂದ ಇವತ್ತಿನ ವರೆಗೂ ಈತನ ಮೇಲೆ ಅರೆಸ್ಟ್ ವಾರೆಂಟ್ ಇದೆ. ಬೆಂಗಳೂರು ಪೊಲೀಸ್ ಅಧಿಕಾರಿಗಳು ಇದನ್ನು ಗಮನಿಸುತ್ತಾರೆ ಅಂದುಕೊಂಡಿದ್ದೇನೆ. ಕೋರ್ಟ್ ಆದೇಶ ಪಾಲನೆ ಆಗದ ಪಕ್ಷದಲ್ಲಿ ಪೊಲೀಸ್ ಅಧಿಕಾರಿಗಳು ಐಪಿಸಿ ಕಲಂ 166, 166A, 166B ಪ್ರಕಾರ ಶಿಕ್ಷಾರ್ಹರು ಎಂದಿದ್ದಾರೆ.
ಕೆಲವು ಬಾರಿ ಪೊಲೀಸ್ ಕಮಿಷನರ್ ಮೂಲಕ ಜಾರಿ ಎಂದಿದೆ ಕೋರ್ಟ್ ಆರ್ಡರ್. ಇನ್ನು ಕೆಲವು ಬಾರಿ ಪೊಲೀಸ್ ಇನ್ಸ್ಪೆಕ್ಟರ್ ಖುದ್ದಾಗಿ ಹಾಜರಾಗಬೇಕು ಎಂದಿದೆ. ಆದರೂ ಕೋರ್ಟ್ ಆದೇಶ ನಿರ್ಲಕ್ಷ ಆಗಿದೆ, ಆರೋಪಿ ರಾಘವೇಂದ್ರ ಶೆಟ್ಟಿಗೆ ಸಮನ್ಸ್ ಜಾರಿಯಾಗಿಲ್ಲ, ಅರೆಸ್ಟ್ ವಾರೆಂಟ್ ಕೂಡಾ ಜಾರಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.