ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Silicon city bangalore) ಡೆಂಘೀ (dengue) ರೌದ್ರ ನರ್ತನ ಮುಂದುವರೆದಿದೆ. ಸದ್ಯ ಡೆಂಘೀ ಮಹಾಮಾರಿ ಹೆಚ್ಚಾಗ್ತಿರೋದ್ರಿಂದ ಆರೋಗ್ಯ ಇಲಾಖೆಗೆ (health department) ಮತ್ತೊಂದು ತಲೆನೋವು ಶುರುವಾಗಿದೆ. ಈಗಾಗಲೇ ರಾಜ್ಯದಲ್ಲಿ ಡೆಂಘೀ ಕೇಸ್‌ಗಳು 10 ಸಾವಿರದ ಗಡಿ ದಾಟಿದ್ದು, ದಿನಕ್ಕೆ 500ಕ್ಕೂ ಹೆಚ್ಚು ಹೊಸ ಡೆಂಘೀ ಪ್ರಕರಣಗಳು ವರದಿಯಾಗ್ತಿವೆ.

ಇತ್ತ ಇಲ್ಲಿಯವರೆಗೂ ಕೆವಲ ಬಿಬಿಎಂಪಿ (BBMP) ವ್ಯಾಪ್ತಿಯಲ್ಲೇ 4 ಸಾವಿರದ 40 ಕೇಸ್‌ಗಳು ಧೃಡವಾಗಿದ್ದು, ಬೆಂಗಳೂರಿನ ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಒಂದುವೇಳೆ ಪರಿಸ್ಥಿತಿ ಹೀಗೆ ಮುಂದುವರೆದರೆ, ಬೆಂಗಳೂರಿನಲ್ಲಿ ಬೆಡ್‌ಗಳ ಕೊರತೆ ಹೆಚ್ಚಾದರೂ ಆಶ್ಚರ್ಯವೇನಿಲ್ಲ.
ಈ ಬಗ್ಗೆ ಸಭೆ ನಡೆಸಿರುವ ಸರ್ಕಾರ, ನಾಮಕಾವಸ್ತೆಗೆ ಸೂಚನೆಗಳನ್ನ ನೀಡಿದೆಯಾದ್ರೂ, ಬಿಬಿಎಂಪಿ ಏನೇ ಮುಂಜಾಗೃತ ಕ್ರಮ ವಹಿಸಿದ್ದೀವಿ ಎಂದು ಬೊಬ್ಬೆ ಹೊಡಿತಾಯಿದ್ರೂ, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೆ ಇದೆ.